ಸ್ಥಳೀಯ ಕೆಬಿಎನ್ ಟರ್ಫ್ ಗ್ರೌಂಡ್ನಲ್ಲಿ ನಡೆಯಿತ್ತಿರುವ ಕೆಬಿಎನ್ ಕ್ರಿಕೆಟ್ ಗೋಲ್ಡ್ ಕಪ್ ಪಂದ್ಯಾವಳಿಯಲ್ಲಿ ಭಾನುವಾರ ಸೂರ್ಯ ಮನೋಜ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ನಾಯಕ ರೇಯಸ್ ರಾಜ್ ಮಧುಸೂದನ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಕೆಐಒಸಿ ತಂಡವು ನೆಕ್ಸ್ಟ್ ಜೆನ್ ಕ್ರಿಕೆಟ್ ಅಕಾಡೆಮಿ ವಿರುದ್ಧ ನಡೆದ 50 ಓವರ್ಗಳ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. 215 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಕೆಐಒಸಿ ಇನ್ನೂ 14.1 ಓವರ್ಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಸ್ಥಳೀಯ ಕೆಬಿಎನ್ ಟರ್ಫ್ ಗ್ರೌಂಡ್ನಲ್ಲಿ ನಡೆಯಿತ್ತಿರುವ ಕೆಬಿಎನ್ ಕ್ರಿಕೆಟ್ ಗೋಲ್ಡ್ ಕಪ್ ಪಂದ್ಯಾವಳಿಯಲ್ಲಿ ಭಾನುವಾರ ಸೂರ್ಯ ಮನೋಜ್ (ಅಜೇಯ 95) ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ನಾಯಕ ರೇಯಸ್ ರಾಜ್ ಮಧುಸೂದನ್ (ಅಜೇಯ 64) ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಕೆಐಒಸಿ ತಂಡವು ನೆಕ್ಸ್ಟ್ ಜೆನ್ ಕ್ರಿಕೆಟ್ ಅಕಾಡೆಮಿ ವಿರುದ್ಧ ನಡೆದ 50 ಓವರ್ಗಳ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. 215 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಕೆಐಒಸಿ ಇನ್ನೂ 14.1 ಓವರ್ಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಮೊದಲು ಬ್ಯಾಟಿಂಗ್ ಮಾಡಿದ ನೆಕ್ಸ್ಟ್ ಜೆನ್ ಕ್ರಿಕೆಟ್ ಅಕಾಡೆಮಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ ಓವರ್ನಲ್ಲೇ ಆರಂಭಿಕ ಆಟಗಾರ ಬಿ. ಹರೀಶ್ ಶೂನ್ಯಕ್ಕೆ ವಿವೇಕ್ ಸೀರ್ವಿಗೆ ವಿಕೆಟ್ ಒಪ್ಪಿಸಿದರು. ಕೆ.ವಿ. ಸೂರ್ಯ (34 ರನ್, 69 ಎಸೆತ) ತಾಳ್ಮೆಯ ಆಟವಾಡಿದರೆ, ಭದ್ರಿ ಅಮರನಾಥ್ ರೆಡ್ಡಿ (16) ಅಲ್ಪ ಕಾಣಿಕೆ ನೀಡಿದರು. ಆದರೆ ವಿರೇನ್ ಸೀರ್ವಿ (27ಕ್ಕೆ 3) ಮತ್ತು ಹನ್ನಾನ್ ಝಾಕಿ ಅಹ್ಮದ್ (19ಕ್ಕೆ 3) ಅವರ ನಿಖರ ದಾಳಿಗೆ ತತ್ತರಿಸಿದ ನೆಕ್ಸ್ಟ್ ಜೆನ್ 29 ಓವರ್ಗಳಲ್ಲಿ 100 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಕೆಳ ಮಧ್ಯಮ ಕ್ರಮಾಂಕದಲ್ಲಿ ಸನಯ್ ರೆಡ್ಡಿ (33 ರನ್, 37 ಎಸೆತ), ಗುಗುಲೋತು ಅಭಿ (29) ಹಾಗೂ ಶ್ರೀಹನ್ ರಾವ್ (26) ಅವರ ದಿಟ್ಟ ಪ್ರತಿರೋಧದಿಂದ ತಂಡ 200ರ ಗಡಿ ದಾಟಲು ಸಾಧ್ಯವಾಯಿತು. ಹೆಚ್ಚುವರಿ (Extras) ರೂಪದಲ್ಲಿ ಬಂದ 29 ರನ್ಗಳ ನೆರವಿನಿಂದ ನೆಕ್ಸ್ಟ್ ಜೆನ್ 49.4 ಓವರ್ಗಳಲ್ಲಿ 214 ರನ್ಗಳಿಗೆ ಆಲೌಟ್ ಆಯಿತು. ಕೆಐಒಸಿ ಪರ ವಿವೇಕ್ ಸೀರ್ವಿ 2 ವಿಕೆಟ್ ಪಡೆದರು.ಸವಾಲಿನ ಮೊತ್ತ ಬೆನ್ನಟ್ಟಿದ ಕೆಐಒಸಿ ತಂಡಕ್ಕೆ ವಿಕೆಟ್ ಕೀಪರ್ ಬ್ರಿಯಾನ್ ಥಾಮಸ್ (40 ರನ್, 35 ಎಸೆತ, 8 ಬೌಂಡರಿ) ಬಿರುಸಿನ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 51 ರನ್ಗಳ ಜತೆಯಾಟ ಮೂಡಿಬಂತು. ಥಾಮಸ್ ಮತ್ತು ಭವಿತ್ (2) ವಿಕೆಟ್ ಪತನದ ಬಳಿಕ 69 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಸೂರ್ಯ ಮನೋಜ್ ಮತ್ತು ನಾಯಕ ರೇಯಸ್ ರಾಜ್ ಮಧುಸೂದನ್ ಆಸರೆಯಾದರು.ಮೂರನೇ ವಿಕೆಟ್ಗೆ ಮುರಿಯದ 146 ರನ್ಗಳ ಜತೆಯಾಟವಾಡಿದ ಈ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸಿತು. ಕೇವಲ 74 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸಿಡಿಸಿದ ಸೂರ್ಯ ಮನೋಜ್ ಕೇವಲ 5 ರನ್ಗಳ ಅಂತರದಿಂದ ಶತಕ ವಂಚಿತರಾದರು. ಮತ್ತೊಂದೆಡೆ ನಾಯಕನ ಆಟವಾಡಿದ ರೇಯಸ್ 102 ಎಸೆತಗಳಲ್ಲಿ 6 ಬೌಂಡರಿ ಸಹಿತ ಅಜೇಯ 64 ರನ್ ಗಳಿಸಿ 35.5 ಓವರ್ಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. ಸೂರ್ಯ ಪಂದ್ಯ ಪುರುಷ ಪ್ರಶಸ್ತಿ ಪಡೆದರು.