ನರಸಿಂಹರಾಜಪುರಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಡಾ.ವಿಷ್ಣುವರ್ದನ್ ಹೆಸರಿನಲ್ಲಿ ಕಳೆದ 2 ವರ್ಷಗಳಿಂದಲೂ ಅಭಿಮಾನಿಗಳು ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದರಿಂದ ವಿಷ್ಣುವರ್ದನ್ ಅಭಿಮಾನಿಗಳಿಗೆ ಸಂತಸ ತಂದಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತಶೆಟ್ಟಿ ತಿಳಿಸಿದರು.
- ಕುವೆಂಪು ಕ್ರೀಡಾಂಗಣದಲ್ಲಿ ಡಾ.ವಿಷ್ಟು ದಾದಾ ಕಪ್ ಸೀಸನ್ ಕ್ರಿಕೆಟ್ ಪಂದ್ಯಾವಳಿ -2026 ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಡಾ.ವಿಷ್ಣುವರ್ದನ್ ಹೆಸರಿನಲ್ಲಿ ಕಳೆದ 2 ವರ್ಷಗಳಿಂದಲೂ ಅಭಿಮಾನಿಗಳು ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದರಿಂದ ವಿಷ್ಣುವರ್ದನ್ ಅಭಿಮಾನಿಗಳಿಗೆ ಸಂತಸ ತಂದಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತಶೆಟ್ಟಿ ತಿಳಿಸಿದರು.
ಭಾನುವಾರ ಕುವೆಂಪು ಕ್ರೀಡಾಂಗಣದಲ್ಲಿ ಡಾ.ವಿಷ್ಣು ದಾದಾ ಕಪ್ ಸೀಸನ್ ಪಂದ್ಯಾವಳಿ- 2026 ಉದ್ಘಾಟಿಸಿ ಮಾತನಾಡಿದರು. ಹೆಚ್ಚೆಚ್ಚು ಕ್ರಿಕೆಟ್ ಪಂದ್ಯ ನಡೆಸುವುದರಿಂದ ನೂತನ ಕ್ರಿಕೆಟ್ ಆಟಗಾರರ ಉದಯವಾಗಲಿದೆ.ಇತ್ತೀಚಿಗೆ ಮೊಬೈಲ್ ಗಳಿಗೆ ದಾಸರಾಗುತ್ತಿರುವ ಯುವ ಜನರು ಕ್ರೀಡೆಗಳ ಬಗ್ಗೆ ಗಮನ ನೀಡುತ್ತಿಲ್ಲ. ಕ್ರಿಕೆಟ್ ಹಾಗೂ ಇತರೆ ಕ್ರೀಡೆ ಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ಜೀವನದಲ್ಲಿ ಹೊಸ ಉತ್ಸಾಹ ಬರಲಿದೆ. ಎನ್.ಆರ್.ಪುರದಂತಹ ಸಣ್ಣ ಊರಿನಲ್ಲಿ ಇಷ್ಟು ದೊಡ್ಡ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ ಸಂಘಟಕರಿಗೆ ಅಭಿನಂದಿಸುತ್ತೇನೆ ಎಂದರು.ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀ ಹರ್ಷ ಮಾತನಾಡಿ, ನಟ ಡಾ.ವಿಷ್ಣುವರ್ಧನ್ ಜೀವಂತ ವಿದ್ದಾಗಲೂ ದೊಡ್ಡ ಮಟ್ಟದ ಹೆಸರು ಮಾಡಿದ್ದರು.ಈಗ ಇಲ್ಲದಿದ್ದರೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.ವಿಷ್ಣು ಅಭಿಮಾನಿ ಬಳಗದವರು ಸಮಾಜ ಮುಖಿ ಕೆಲಸ ಮಾಡುತ್ತಾ 2ನೇ ಬಾರಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದಾರೆ ಎಂದರು.
ಸಭೆಯಲ್ಲಿ ವಿಷ್ಣುದಾದ ಅಭಿಮಾನಿ ಬಳಗದ ಮುಖ್ಯಸ್ಥ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮುಖಂಡರಾದ ಹರೀಶ್, ನಾಗರಾಜ್, ಅಭಿನವ ಗಿರಿರಾಜ್, ಪ್ರದೀಪ್ ಇದ್ದರು.ರಾವೂರು ಕ್ರಿಕೆಟರ್ಸ್ ತಂಡ ಪ್ರಥಮ ಸ್ಥಾನ ಪಡೆದು ₹10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು. ಎ.ಬಿ.ಕ್ರಿಕೆಟರ್ಸ್ ತಂಡವು ದ್ವಿತೀಯ ಸ್ಥಾನ ಪಡೆದು ₹6 ಸಾವಿರ ನಗದು ಬಹುಮಾನ ಪಡೆದರು.