ಸಾರಾಂಶ
ಈ ಸಂದರ್ಭದಲ್ಲಿ ರವಿಶಾಸ್ತ್ರಿ ಪರ್ಯಾಯ ಶ್ರೀಪಾದರ ಸಂಕಲ್ಪಗಳಲ್ಲೊಂದಾದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಖ್ಯಾತ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ ಮಂಗಳವಾರ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮತ್ತು ಮುಖ್ಯಪ್ರಾಣ ದೇವರ ದರ್ಶನ ಮಾಡಿ, ಪರ್ಯಾಯ ಶ್ರೀಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರೀಯ ಶ್ರೀ ಸುಶ್ರಿಂದ್ರ ತೀರ್ಧ ಶ್ರೀಪಾದರಿಂದ ಅನುಗ್ರಹ ಪಡೆದರು.ಈ ಸಂದರ್ಭದಲ್ಲಿ ಅವರು ಪರ್ಯಾಯ ಶ್ರೀಪಾದರ ಸಂಕಲ್ಪಗಳಲ್ಲೊಂದಾದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಕಿರಿಯ ಶ್ರೀಪಾದರು ಶ್ರೀಕೃಷ್ಣನಿಗೆ ನಿತ್ಯ ನಡೆಸುವ ಅಲಂಕಾರ ಸೇವೆ ಮಂಗಳವಾರ ಶತಕ ಪೂರ್ಣವಾಗಿದ್ದು, ಇದೇ ದಿನ ಕ್ರಿಕೆಟ್ ಲೋಕದಲ್ಲಿ ಶತಕ ಖ್ಯಾತಿಯ ಶ್ರೀ ಕೃಷ್ಣ ಭಕ್ತರೂ ಆದ ರವಿಶಾಸ್ತ್ರಿ ಅವರು ಬಂದು ಕೃಷ್ಣನ ದರ್ಶನ ಪಡೆದದ್ದು ಯೋಗಾಯೋಗವಾಗಿದೆ ಎಂದು ಶ್ರೀಪಾದರು ಅಭಿಪ್ರಾಯಪಟ್ಟರು.ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮತ್ತು ಶ್ರೀಮಠದ ಅಭಿಮಾನಿಗಳಾದ ವಾದಿರಾಜ ಪೆಜತ್ತಾಯ, ಲಾತವ್ಯ ಆಚಾರ್ಯ, ವಿನಯ ಬನ್ನಂಜೆ ಉಪಸ್ಥಿತರಿದ್ದರು.