ಸಾರಾಂಶ
ಕ್ರಿಮಿನಲ್ ಪ್ರಕರಣ ಬಿಜೆಪಿಗೆ ಅಡಿಷಿನಲ್ ಕ್ವಾಲಿಫಿಕೇಷನ್, ಬಿಜೆಪಿಯಲ್ಲಿ ಈಗಾಗಲೇ 9 ಜನರು ಸೆಕ್ಸ್ಯುವೆಲ್ ವಿಡಿಯೋ ವಿಷಯದಲ್ಲಿ ಕೋರ್ಟಿನಿಂದ ಸ್ಟೇ ತಂದಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಷ್ಟೊಂದು ಹೋರಾಟ ನಡೆಯಿತು. ಆದರೂ ಅವರನ್ನು ಎಂಪಿ ಸ್ಥಾನದಿಂದ ಅಮಾನತು ಮಾಡಲಿಲ್ಲ. ಒಂದೇ ಒಂದು ಕ್ರಮ ಕೈಗೊಳ್ಳಲಿಲ್ಲ.
ಮಡಿಕೇರಿ: ಬೆಂಗಳೂರಿನ ಕಂಬಳಕ್ಕೆ ಸಂಸದ ಬ್ರಿಜ್ ಭೂಷಣ್ ಸಿಂಗ್ ಆಹ್ವಾನಿಸುತ್ತಿರುವ ಹಿನ್ನೆಲೆ ಬಿಜೆಪಿಗೆ ಲೈಂಗಿಕ ಕಿರುಕುಳ, ಹಗರಣ ಆರೋಪ ಕೇಳಿಬರುತ್ತಿವ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕ್ರಿಮಿನಲ್ ಪ್ರಕರಣಗಳು ಬಿಜೆಪಿಗೆ ಅಡಿಷಿನಲ್ ಕ್ವಾಲಿಫಿಕೇಷನ್ ಇದ್ದಹಾಗೆ ಎಂದಿದ್ದಾರೆ.ಈ ಕುರಿತು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಮಿನಲ್ ಪ್ರಕರಣ ಬಿಜೆಪಿಗೆ ಅಡಿಷಿನಲ್ ಕ್ವಾಲಿಫಿಕೇಷನ್, ಬಿಜೆಪಿಯಲ್ಲಿ ಈಗಾಗಲೇ 9 ಜನರು ಸೆಕ್ಸ್ಯುವೆಲ್ ವಿಡಿಯೋ ವಿಷಯದಲ್ಲಿ ಕೋರ್ಟಿನಿಂದ ಸ್ಟೇ ತಂದಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಷ್ಟೊಂದು ಹೋರಾಟ ನಡೆಯಿತು. ಆದರೂ ಅವರನ್ನು ಎಂಪಿ ಸ್ಥಾನದಿಂದ ಅಮಾನತು ಮಾಡಲಿಲ್ಲ. ಒಂದೇ ಒಂದು ಕ್ರಮ ಕೈಗೊಳ್ಳಲಿಲ್ಲ. ಯುಪಿಯಲ್ಲಿ ಒಂದು ದಿನಕ್ಕೆ 20 ಅತ್ಯಾಚಾರ ಪ್ರಕರಣ ಆಗುತ್ತಿವೆ. ದಿನ ಕೊಲೆಗಳು ನಡೆಯುತ್ತವೆ. ಆಗಿದ್ದರೂ ಇದರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ. ಯುಪಿ ಮಾಡೆಲ್ ಥರ ಯಾವುದೇ ರಾಜ್ಯ ಆಗಬಾರದು ಎಂದರು.