ಅದಿರು ಸಾಗಾಣಿಕೆ ಲಾರಿ ಧೂಳಿನಿಂದ ಬೆಳೆಗೆ ಹಾನಿ

| Published : Feb 21 2025, 12:49 AM IST

ಸಾರಾಂಶ

ಜಮೀನುಗಳಲ್ಲಿ ಬೆಳೆಯುವ ಬೆಳೆಗಳ ಮೇಲೆ ಅದಿರಿನ ಧೂಳಿನಿಂದ ಬೆಳೆಗಳಿಗೆ ನಷ್ಟವಾಗುತ್ತಿರುವುದರಿಂದ ಗ್ರಾಮದ ರಸ್ತೆಯಲ್ಲಿ ಅದಿರು ಸಾಗಾಣಿಕೆ ಲಾರಿಗಳು ಸಂಚರಿಸಬಾರದು ಗ್ರಾಮಸ್ಥರು ಲಾರಿ ತಡೆದ ಘಟನೆ ಪಟ್ಟಣದ ಸಮೀಪದ ಬೊಮ್ಮೇನಹಳ್ಳಿ ಬಳಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಜಮೀನುಗಳಲ್ಲಿ ಬೆಳೆಯುವ ಬೆಳೆಗಳ ಮೇಲೆ ಅದಿರಿನ ಧೂಳಿನಿಂದ ಬೆಳೆಗಳಿಗೆ ನಷ್ಟವಾಗುತ್ತಿರುವುದರಿಂದ ಗ್ರಾಮದ ರಸ್ತೆಯಲ್ಲಿ ಅದಿರು ಸಾಗಾಣಿಕೆ ಲಾರಿಗಳು ಸಂಚರಿಸಬಾರದು ಗ್ರಾಮಸ್ಥರು ಲಾರಿ ತಡೆದ ಘಟನೆ ಪಟ್ಟಣದ ಸಮೀಪದ ಬೊಮ್ಮೇನಹಳ್ಳಿ ಬಳಿ ಗುರುವಾರ ನಡೆದಿದೆ.ಗ್ರಾಮದ ಜಮೀನುಗಳಿಗೆ ಓಡಾಡುವ ರಸ್ತೆಗಳಲ್ಲಿ ನುಗ್ಗುವ ಈ ಲಾರಿಗಳು ವಿಪರೀತ ಅದಿರಿನ ಧೂಳು ಸುರಿಸುತ್ತವೆ. ಗ್ರಾಮದ ಆಜುಬಾಜಿನ ರಸ್ತೆಯಲ್ಲಿ ಓಡಾಡುವಾಗ ಗಾಳಿಯಲ್ಲಿ ತೇಲಿ ಬರುವ ಧೂಳಿನಿಂದ ಮನೆಗಳಲ್ಲಿ ಆರೋಗ್ಯ ಸಮಸ್ಯೆ ಕಾಡಿಸುತ್ತಿವೆ. ಪರ್ಯಾಯವಾಗಿ ಬೇರೆ ಮಾರ್ಗ ಕಂಡು ಹಿಡಿದು ಅಲ್ಲಿ ಸಂಚರಿಸುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಈ ಭಾಗದಲ್ಲಿ ಅಕ್ರಮವಾಗಿಯೂ ಗಣಿಯ ಅದಿರು ಸಾಗಾಣಿಕೆ ಮಾಡಲಾಗುತ್ತಿದೆ. ಗಣಿ ಮಾಲೀಕರು ಗ್ರಾಮದ ಮುಗ್ದ ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಕೆಲ ಸಮಯ ಲಾರಿ ಚಾಲಕರು ಮತ್ತು ಗ್ರಾಮಸ್ಥರ ಮಧ್ಯೆ ವಾಗ್ವಾದ ಮತ್ತು ತಳ್ಳಾಟ ನಡೆದವು.