ಕಳಪೆ ಕ್ರಿಮಿನಾಶಕ ವಿತರಣೆಯಿಂದ ಬೆಳೆನಾಶ: ಆರೋಪ

| Published : Nov 01 2024, 12:07 AM IST

ಸಾರಾಂಶ

Crop loss due to poor distribution of steriliser: blamed

-ಸುರಪುರದಲ್ಲಿ ಗೊಬ್ಬರದಂಗಡಿ ಪರವಾನಗಿ ರದ್ದತಿಗೆ ಆಗ್ರಹ

ಸುರಪುರ: ರೈತರಿಗೆ ವಂಚಿಸುತ್ತಿರುವ ರಸಗೊಬ್ಬರ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಾ. ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಪಟ್ಟಣದ ಆಗ್ರೋ ಏಜೆನ್ಸಿಯವರು ಎಂ.ಬೊಮ್ಮನಹಳ್ಳಿ ಗ್ರಾಮದ ರೈತನಾದ ರಾಮನಗೌಡರಿಗೆ ನಕಲಿ ಕ್ರಿಮಿನಾಶಕ ನೀಡಿ ವಂಚಿಸಿದ್ದಾರೆ. ಇದರಿಂದ ತನ್ನ ಜಮೀನಿನಲ್ಲಿದ್ದ ಹತ್ತಿ ಬೆಳೆಗೆ ಸಿಂಪಡಿಸಿದಾಗ ಬೆಳೆ ಸುಟ್ಟು ಹೋಗಿ ನಾಶವಾಗಿದೆ. ಸುಮಾರು 5 ರಿಂದ 6 ಲಕ್ಷ ರು.ಗಳ ಬೆಳೆ ನಷ್ಟವಾಗಿದೆ. ಹಲವಾರು ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಗೊಬ್ಬರ ವಿತರಿಸಿ ವಂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಪರಶುರಾಮ ಬೋನ್ಹಾಳ, ಉಪಾಧ್ಯಕ್ಷ ರವಿ ಮಾಳಳ್ಳಿಕರ್, ರಾಮು ಯಾಳಗಿ, ಸಾಯಬಣ್ಣ ಚೆನ್ನೂರು, ಶ್ರೀಕಾಂತ ಮೋಪಗಾರ, ಪರಶುರಾಮ ಕಟ್ಟಿಮನಿ ಇದ್ದರು.

-----

31ವೈಡಿಆರ್‌4: ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಕಲಿ ಕ್ರಿಮಿನಾಶಕ ನೀಡಿದ ಅಂಗಡಿ ಪರವಾನಗಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.