ಸಾರಾಂಶ
- ಆನೆ ನಡೆದಿದ್ದೆ ದಾರಿ । 2 ತಾಲೂಕುಗಳಲ್ಲಿ ಸುತ್ತಾಡಿ ವಾಪಸ್ ತೆರಳಿದ ಗಜಪಡೆ
ಆರ್. ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲೆಯಲ್ಲಿ ಆನೆಗಳ ಉಪಟಳ ಹೆಚ್ಚಳವಾಗಿದೆ. ಎಲ್ಲಿ ನೋಡಿದರಲ್ಲಿ ಆನೆಗಳ ಓಡಾಟ, ಬೆಳೆ ಹಾನಿ, ಆಸ್ತಿ ನಷ್ಟ, ಆಗಾಗ ಮಾನವನ ಪ್ರಾಣ ಹಾನಿ ಸಂಭವಿಸುತ್ತಿದೆ. ಈ ಕುರಿತು ಎಲ್ಲೆಡೆ ಚರ್ಚೆಗಳು, ಪ್ರತಿಭಟನೆಗಳು ಸಹ ನಡೆಯುತ್ತಿವೆ.ಒಟ್ಟಾರೆ ಆನೆಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಮಾತನ್ನು ತೆಗೆದು ಹಾಕುತ್ತಿಲ್ಲ. ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕುಗಳು ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಆನೆಗಳ ಸಂಚಾರ ಈ ಮೂರು ತಾಲೂಕುಗಳಲ್ಲಿ ನಿರಂತರವಾಗಿ ಇರುತ್ತದೆ.
ಸಕಲೇಶಪುರ ತಾಲೂಕಿನಲ್ಲಿ ಒಂದೇ ಕಡೆಯಲ್ಲಿ ಸುಮಾರು 60 ಆನೆಗಳು ಬೀಡು ಬಿಟ್ಟಿದ್ದು, ಆ ಗುಂಪಿನಲ್ಲಿದ್ದ ಸುಮಾರು 20 ಆನೆಗಳು ಮೂಡಿಗೆರೆ ತಾಲೂಕಿಗೆ ಬಂದು ಅಲ್ಲಿಂದ ಚಿಕ್ಕಮಗಳೂರು ತಾಲೂಕಿನಲ್ಲೂ ಸಂಚರಿಸಿದ್ದವು. ನ.4 ರಂದು ಜಿಲ್ಲೆಗೆ ಎಂಟ್ರಿ ಕೊಟ್ಟಿರುವ ಆನೆಗಳ ಹಿಂಡು ಸುಮಾರು 22 ದಿನಗಳ ಕಾಲ ಓಡಾಡಿದ್ದವು.ಅವುಗಳನ್ನು ಹಿಮ್ಮೆಟ್ಟಿಸಬೇಕೆಂದು ರೈತರು, ಕಾಫಿ ಬೆಳೆಗಾರರು, ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ, ಅದು, ಅಷ್ಟು ಸುಲುಭದ ಕೆಲಸವಲ್ಲ. ಕಾರಣ, ಆ ಗುಂಪನಲ್ಲಿದ್ದ ಆನೆಗಳ ಪೈಕಿ 4 ಮರಿ ಆನೆಗಳು ಇದ್ದವು. ಅದ್ದರಿಂದ ಅವುಗಳು ಬಂದ ದಾರಿಯಲ್ಲಿಯೇ ವಾಪಸ್ ಹೋಗುವ ತನಕ ಕಾಯಲೇಬೇಕಾಗಿತ್ತು. ಅವುಗಳು ಓಡಾಡಿದ್ದರಿಂದ ಭತ್ತದ ಗದ್ದೆಗಳು, ಅಡಕೆ, ಬಾಳೆ, ತೆಂಗು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದೆ. ಒಂದು ಗುಂಪಾಗಿ ಸಂಚರಿಸಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ರೈತರ ತೋಟ ಮತ್ತು ಗದ್ದೆಗಳಿಗೆ ಭೇಟಿ ನೀಡಿ ಹಾನಿ ಬಗ್ಗೆ ಅರಣ್ಯ ಇಲಾಖೆಯವರು ಅಂದಾಜು ವರದಿ ಸಿದ್ಧಪಡಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ದಿನಕ್ಕೊಂದು ಲಕ್ಷದಂತೆ ಸುಮಾರು 25 ಲಕ್ಷದಷ್ಟು ಬೆಳೆ ಹಾಗೂ ಆಸ್ತಿ ನಷ್ಟವಾಗಿರಬಹುದೆಂದು ಹೇಳಲಾಗುತ್ತಿದೆ.ಹೋಗುವ ದಾರಿಯಲ್ಲಿದ್ದ ಕಾಫಿ ಗಿಡಗಳನ್ನು ತುಳಿದು ಹಾಳು ಮಾಡಿದ್ದರೆ ಕಟಾವಿಗೆ ಬಂದಿದ್ದ ಭತ್ತವನ್ನು ತಿನ್ನುವ ಜತೆಗೆ ತುಳಿದು ಹಾಳು ಮಾಡಿವೆ. ಬಾಳೆ, ಅಡಕೆ ಗಿಡಗಳನ್ನು ಮುರಿದು ಹಾಕಿವೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸದ್ಯ ಅವುಗಳು ಸಕಲೇಶಪುರಕ್ಕೆ ವಾಪಸ್ ತೆರಳಿವೆ.
---- ಬಾಕ್ಸ್ -----6 ತಿಂಗಳಲ್ಲಿ 1,402 ಬೆಳೆ ಹಾನಿ ಪ್ರಕರಣಗಳುಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಕಳೆದ 6 ತಿಂಗಳಲ್ಲಿ ಅಂದರೆ, ಏಪ್ರಿಲ್ 1 ರಿಂದ ಸೆಪ್ಟಂಬರ್ ಅಂತ್ಯದವರೆಗೆ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಗೆ ಸಂಬಂಧಿಸಿದಂತೆ 1,402 ಪ್ರಕರಣಗಳು ದಾಖಲಾಗಿವೆ. 2,49,24,664 ರು. ನಷ್ಟ ಸಂಭವಿಸಿದೆ. 34 ಆಸ್ತಿ ನಷ್ಟ ಪ್ರಕರಣಗಳು ನಡೆದಿವೆ. ಇದರಿಂದ 3,86,610 ರು. ನಷ್ಟವಾಗಿದೆ.ಜಾನುವಾರು ನಷ್ಟ, ಮಾನವನಿಗೆ ಗಾಯ, ಮಾನವ ಸಾವು ಸೇರಿದಂತೆ ಒಟ್ಟಾರೆ, 2,87,46,274 ರು. ನಷ್ಟ ಸಂಭವಿಸಿದೆ. ಇವುಗಳಲ್ಲಿ ಈವರೆಗೆ 832 ಪ್ರಕರಣಗಳಿಗೆ ಸಂಬಂಧಿಸಿದಂತೆ 1,51,03,967 ರು. ಪರಿಹಾರ ವಿತರಿಸಲಾಗಿದೆ.
--- ಕೋಟ್-- ಸಕಲೇಶಪುರದಿಂದ ಬಂದಿರುವ ಆನೆಗಳು ವಾಪಸ್ ಹೋಗಿವೆ. ಅದೇ ದಾರಿಯಲ್ಲಿ ಆನೆಗಳ ಚಲನವಲನಗಳ ಮೇಲೆ ಅರಣ್ಯ ಸಿಬ್ಬಂದಿ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಬಂದಿದ್ದ ಆನೆಗಳಿಂದ ಬೆಳೆ ಹಾಗೂ ಇತರೆ ಹಾನಿಗಳ ಬಗ್ಗೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.ರಮೇಶ್ಬಾಬುಡಿಎಫ್ಒ, ಚಿಕ್ಕಮಗಳೂರುಪೋಟೋ ಫೈಲ್ ನೇಮ್ 5 ಕೆಸಿಕೆಎಂ 3
-- 5 ಕೆಸಿಕೆಎಂ 4ಸಕಲೇಶಪುರದಿಂದ ಬಂದಿದ್ದ ಆನೆಗಳ ಹಿಂಡು ಭತ್ತದ ಗದ್ದೆಯನ್ನು ತುಳಿದು ಹಾಳು ಮಾಡಿರುವುದು.