ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಚೀಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಲಕ್ಷಾಂತರ ರೂ. ಬೆಳೆ ನಷ್ಟವಾಗಿದ್ದು ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ.ಚೀಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಹಳ್ಳಿ ಗ್ರಾಮದಲ್ಲಿ ಕೆಲವುದಿನಗಳಿಂದ 20 ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಕೃಷಿ ಉಪಕರಣಗಳನ್ನು ನಾಶಪಡಿಸುತ್ತಿದ್ದು ರೈತರು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ರೈತರಾದ ಜನಾರ್ಧನ್ ಶೆಟ್ಟಿ ಹಾಗೂ ಪ್ರಭಾಕರ್ ಶೆಟ್ಟಿ ಮಾತನಾಡಿ, ತಮ್ಮ ಐದು ಎಕರೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಫಸಲಿಗೆ ಬಂದಿದ್ದ 100ರಿಂದ 200 ಅಡಿಕೆ ಗಿಡಗಳು, 9- 10 ವರ್ಷದ ರೋಬಸ್ಟಾ ಕಾಫಿ ಗಿಡಗಳು, ನರ್ಸರಿ ಗಿಡಗಳು ಹಾಗೂ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತುಳಿದು ಹಾನಿಗೊಳಿಸಿವೆ. ಈಗಾಗಲೇ ಕೊಳೆರೋಗದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಈ ದಾಳಿಯಿಂದ 2 ರಿಂದ 3 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದರು.ಗ್ರಾಮದ ಸುತ್ತಮುತ್ತ ಸುಮಾರು 15ರಿಂದ 20 ಕಾಡಾನೆಗಳು ಬೀಡುಬಿಟ್ಟಿವೆ. ಮೂಡಿಗೆರೆ ಭಾಗದಿಂದ ಬರುವ ಕಾಡಾನೆಗಳು ನಮ್ಮ ತೋಟದಲ್ಲಿ ಬಿಡು ಬಿಡುತ್ತಿವೆ. ಕಳೆದ ಮೂರು ವರ್ಷಗಳಿಂದ ಕಾಡಾನೆಗಳು ಈ ತೋಟದ ಮೂಲಕವೇ ಹಾದು ಹೋಗುತ್ತಿವೆ. ಮೂಡಿಗೆರೆ ಗಡಿ ಭಾಗದಲ್ಲಿರುವ ತೋಟಗಳು ಕಾಡಾನೆಗಳ ಆಶ್ರಯ ತಾಣವಾಗಿದೆ. ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ಒಟ್ಟಿಗೆ ಕಾಫಿ ತೋಟಕ್ಕೆ ಲಗ್ಗೆ ಹಾಕಿ ಮನಬಂದಂತೆ ತುಳಿದು ಸೊಂಡಿಲಿನಿಂದ ಎಸೆದು ಬಿಸಾಕುತ್ತಿವೆ. ಆನೆಗಳ ಕಾಲ್ತುಳಿತಕ್ಕೆ ಹತ್ತಾರು ವರ್ಷಗಳಿಂದ ಬೆಳೆದ ಕಾಫಿ ಮೆಣಸು ಅಡಿಕೆ ಬಾಳೆಗಳು ನಾಶವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಡಾನೆಗಳ ಉಪಟಳದ ಭಯದಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬಾರದೆ ಹೊಲ ಗದ್ದೆಗಳಲ್ಲಿ ಬತ್ತದ ನಾಟಿ ಕೆಲಸ ಹಾಗೂ ಬಾಳೆ, ಅಡಿಕೆ ಹಾಗೂ ಕಾಫಿ ಬೆಳೆ ಬೆಳೆಯುವುದೇ ಕಷ್ಟವಾಗಿದೆ. ಬೆಳಿಗ್ಗೆ ತೋಟಕ್ಕೆ ಹೋಗಲು ಹಾಗೂ ಸಂಜೆ 5 ಗಂಟೆಯ ನಂತರ ಮನೆಯಿಂದ ಹೊರಬರಲು ಸಹ ಭಯವಾಗುತ್ತಿದೆ. ಆನೆಗಳು ಮನೆಗಳ ಸಮೀಪದವರೆಗೂ ಬರುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.ಸ್ಥಳೀಯ ಶಾಸಕ ಎಚ್.ಕೆ. ಸುರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಪರಿಶೀಲಿಸಬೇಕು. ಜೊತೆಗೆ ವಿಧಾನಸಭೆಯಲ್ಲಿ ಈ ಭಾಗದ ಕಾಡಾನೆಗಳ ಸಮಸ್ಯೆಯನ್ನು ಪ್ರಸ್ತಾಪಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಜಗನ್ನಾಥ್, ಸವಿನ್, ಮಹೇಶ್ ಹಾಗೂ ಸ್ವಾಮಿ ಉಪಸ್ಥಿತರಿದ್ದರು.
* ಬಾಕ್ಸ್:::;ಅರ್ಜಿ ಸಲ್ಲಿಸಿದ್ದರೂ ಅಲ್ಪ ಪ್ರಮಾಣದ ಪರಿಹಾರಈ ಹಿಂದೆಯೂ ಆನೆ ದಾಳಿಯಿಂದ ಬೆಳೆ ನಷ್ಟವಾಗಿದ್ದಾಗ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅಲ್ಪ ಪ್ರಮಾಣದ ಪರಿಹಾರ ಮಾತ್ರ ದೊರೆಕಿತ್ತು. ಈ ಬಾರಿ ಎರಡು ಬಾರಿ ಅರ್ಜಿ ಸಲ್ಲಿಸಿದರೂ ಅರಣ್ಯ ಇಲಾಖೆಯವರು ಯಾವುದೇ ಗಮನ ಹರಿಸುತ್ತಿಲ್ಲ. ಆನೆಗಳ ದಾಳಿಯಿಂದ ಲಕ್ಷಾಂತರ ಬೆಳೆ ನಷ್ಟವಾಗಿದ್ದರೂ ಕೇವಲ ಬಿಡಿಗಾಸು ಪರಿಹಾರವನ್ನು ಮಾತ್ರ ನೀಡಲಾಗುತ್ತಿದೆ. ಈ ಕಾರಣಕ್ಕಾಗಿ ಬೆಳೆಗಾರರು ಹಾಗೂ ರೈತರು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುವ ಆಸಕ್ತಿಯನ್ನೇ ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮದಿಂದ ಕೇವಲ 500 ಮೀಟರ್ ಅಂತರದಲ್ಲೇ ಕಾಡಾನೆಗಳು ನಿರಂತರವಾಗಿ ಸಂಚರಿಸುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಸ್ಥಳ ಪರಿಶೀಲನೆ ನಡೆಸಿ ತೆರಳುತ್ತಿದ್ದಾರೆ. ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.ಕಾಡಾನೆಗಳ ದಾಳಿಗೆ ಮತ್ತೆ ಬೆಳೆ ನಾಶ
ಗ್ರಾಮದ ರೈತರಾದ ಜನಾರ್ಧನ್ ಶೆಟ್ಟಿ ಹಾಗೂ ಪ್ರಭಾಕರ್ ಶೆಟ್ಟಿ ಮಾತನಾಡಿ, ತಮ್ಮ ಐದು ಎಕರೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಫಸಲಿಗೆ ಬಂದಿದ್ದ 100ರಿಂದ 200 ಅಡಿಕೆ ಗಿಡಗಳು, 9- 10 ವರ್ಷದ ರೋಬಸ್ಟಾ ಕಾಫಿ ಗಿಡಗಳು, ನರ್ಸರಿ ಗಿಡಗಳು ಹಾಗೂ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತುಳಿದು ಹಾನಿಗೊಳಿಸಿವೆ. ಈಗಾಗಲೇ ಕೊಳೆರೋಗದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಈ ದಾಳಿಯಿಂದ 2 ರಿಂದ 3 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.