ಸಾರಾಂಶ
ಶಿವಮೊಗ್ಗ: ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಸ್ತಿ ಮರಳಿಸುವ ಪರೇಡ್‌ನಲ್ಲಿ ಜಿಲ್ಲಾ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಐದು ಉಪ ವಿಭಾಗ ವ್ಯಾಪ್ತಿಯಲ್ಲಿ ಪೊಲೀಸರು ಜಪ್ತಿ ಮಾಡಿದ ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ, ವಾಹನಗಳು ಮತ್ತು ನಗದನ್ನು ಮಾಲೀಕರಿಗೆ ಹಸ್ತಾಂತರ ಮಾಡಲಾಯಿತು. 2022ರ 42 ಪ್ರಕರಣ, 2023ರ 181 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ₹3.55 ಕೋಟಿ ಮೌಲ್ಯದ ವಸ್ತುಗಳನ್ನು ರಿಕವರಿ ಮಾಡಿ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ಉಪವಿಭಾಗಗಳಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಮುಂದಿನ 10-15 ದಿನಗಳಲ್ಲಿ ಮತ್ತಷ್ಟು ಪ್ರಕರಣಗಳ ಪತ್ತೆ ಮಾಡಿ ವಸ್ತುಗಳನ್ನು ರಿಕವರಿ ಮಾಡಲಾಗುವುದು. ಭದ್ರಾವತಿ ವಿಭಾಗದಲ್ಲಿ ಬೈಕ್‌ಗಳು, ಶಿಕಾರಿಪುರ ವಿಭಾಗದಲ್ಲಿ ಶ್ರೀಗಂಧದ ತುಂಡುಗಳು, ತೀರ್ಥಹಳ್ಳಿ ವಿಭಾಗದಲ್ಲಿ ಪೂಜಾ ಸಾಮಗ್ರಿಗಳನ್ನು ಪತ್ತೆ ಮಾಡಲಾಗಿದೆ. ವಿಶೇಷವಾಗಿ ಕ್ರೈಂ ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಡಿಸೆಂಬರ್ ತಿಂಗಳಲ್ಲಿ ಅಪರಾಧ ಮಾಸಾಚರಣೆ ಮಾಡಲಾಗಿದ್ದು ಅದರ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ಜಾಗೃತಿ, ಗಾಂಜಾ ಬಗ್ಗೆ ಅರಿವು ಸೇರಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಾಲೈದು ದಿನಗಳಲ್ಲೇ 4 ಗಾಂಜಾ ಪ್ರಕರಣ ದಾಖಲಿಸಿದ್ದು ಈ ವರ್ಷ 200ಕ್ಕೂ ಅಧಿಕಗಾಂಜಾ ಸೇವನೆ ಮಾಡಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಳೆದುಕೊಂಡಿದ್ದ ಚಿನ್ನಾಭರಣ, ಮೊಬೈಲ್, ಹಣ, ವಾಹನಗಳು ಮರಳಿ ಕೈಸೇರಿದಾಗ ಮಾಲೀಕರ ಮುಖದಲ್ಲಿ ಖುಷಿ ಇಮ್ಮಡಿಗೊಳಿಸಿತ್ತು.ಎಎಸ್‌ಪಿಗಳಾದ ಅನಿಲ್‌ಕುಮಾರ್ ಭೂಮರೆಡ್ಡಿ ಮತ್ತು ಎ.ಜಿ.ಕಾರಿಯಪ್ಪ, ಡಿವೈಎಸ್‌ಪಿಗಳಾದ ಬಿ.ಬಾಲರಾಜ್, ಗಜಾನನ ಸುತಾರ, ಟಿ.ಆರ್.ಮಂಜುನಾಥ ಇತರರಿದ್ದರು.
- - - -31ಎಸ್ಎಂಜಿಕೆಪಿ02:ಶಿವಮೊಗ್ಗ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಸ್ತಿ ಮರಳಿಸುವ ಪರೇಡ್‌ನಲ್ಲಿ ಎಸ್‌ಪಿ ಮಿಥುನ್‌ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಐದು ಉಪ ವಿಭಾಗ ವ್ಯಾಪ್ತಿಯಲ್ಲಿ ಪೊಲೀಸರು ಜಪ್ತಿ ಮಾಡಿದ ಮೊಬೈಲ್ ಅನ್ನು ಮಾಲೀಕರಿಗೆ ಹಸ್ತಾಂತರ ಮಾಡಲಾಯಿತು.