ಸಾರಾಂಶ
ಮದುವೆಗೆ ತೆರಳಿದ್ದ ಕ್ರೂಷರ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಬ್ಬ ಸ್ಥಳದಲ್ಲಿ ಸಾವನ್ನಪ್ಪಿ, 12 ಜನರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಶಳ್ಳಗಿ ಗ್ರಾಮದ ಕ್ರಾಸ್ ಬಳಿ ಬುಧವಾರ ನಡೆದಿದೆ.
ತಾಳಿಕೋಟೆ: ಮದುವೆಗೆ ತೆರಳಿದ್ದ ಕ್ರೂಷರ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಬ್ಬ ಸ್ಥಳದಲ್ಲಿ ಸಾವನ್ನಪ್ಪಿ, 12 ಜನರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಶಳ್ಳಗಿ ಗ್ರಾಮದ ಕ್ರಾಸ್ ಬಳಿ ಬುಧವಾರ ನಡೆದಿದೆ. ಸಂಗಮೇಶ ಗುರಣ್ಣ ಹುಲಸೂರ ಮೃತಪಟ್ಟ ವ್ಯಕ್ತಿ. ತಾಳಿಕೋಟೆಯಿಂದ ಮದುವೆ ಮುಗಿಸಿ ಶಹಾಪೂರ ತಾಲೂಕಿನ ಪರಸನಳ್ಳಿ ಗ್ರಾಮಕ್ಕೆ ಕ್ರೂಷರ್‌ನಲ್ಲಿ 17 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಶಳ್ಳಗಿ ಗ್ರಾಮದ ಬಳಿಕ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕೀತ್ಸೆ ನೀಡಿ ಹೆಚ್ಚಿನ ಚಿಕೀತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್. ಭಂಗಿ ಬೆಟ್ಟಿ ನೀಡಿ ಪರಿಶೀಲಿಸಿದರು.