ದೇಶ ಅಸ್ತಿರಗೊಳಿಸುವ ಸಂಚು ವಿಫಲಗೊಳಿಸಲು ಜಾಗೃತರಾಗಿರಲು ಸಿ.ಟಿ.ರವಿ ಕರೆ

| Published : Aug 16 2024, 12:49 AM IST

ದೇಶ ಅಸ್ತಿರಗೊಳಿಸುವ ಸಂಚು ವಿಫಲಗೊಳಿಸಲು ಜಾಗೃತರಾಗಿರಲು ಸಿ.ಟಿ.ರವಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮಹಾತ್ಮ ಗಾಂಧಿ ಮತ್ತಿತರರ ಹೋರಾಟ, ತ್ಯಾಗ, ಬಲಿದಾನಗಳಿಂದ ದೇಶ ಸ್ವತಂತ್ರ ಗಳಿಸಿತು ಎಂಬುದು ಅರ್ಧ ಸತ್ಯ. ನಿಜವಾದ ಸತ್ಯ ಏನೆಂದರೆ, 1947ಕ್ಕಿಂತ ಪೂರ್ವದಲ್ಲೇ ವೀರ ಸಾವರ್ಕರ್ ನೇತೃತ್ವದಲ್ಲಿ ಅನೇಕ ಹೋರಾಟಗಾರರು ಧ್ವಜ ಹಾರಿಸುವ ಮೂಲಕ ದೇಶ ಸ್ವತಂತ್ರ ಗಳಿಸಿತ್ತು. ಆದರೆ, ಒಗ್ಗಟ್ಟಿನ ಕೊರತೆಯಿಂದ ಪರಕೀಯರು ದಾಳಿ ನಡೆಸಿದ ಪರಿಣಾಮ ಸ್ವತಂತ್ರ ರಕ್ಷಿಸಿಕೊಳ್ಳಲು ಸಾಧ್ಯವಾಗದೆ ದೇಶ ಮತ್ತೆ ಪರಕೀಯರ ಪಾಲಾಗಿತ್ತು ಎಂಬುದು ಪೂರ್ಣ ಸತ್ಯ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಹಾತ್ಮ ಗಾಂಧಿ ಮತ್ತಿತರರ ಹೋರಾಟ, ತ್ಯಾಗ, ಬಲಿದಾನಗಳಿಂದ ದೇಶ ಸ್ವತಂತ್ರ ಗಳಿಸಿತು ಎಂಬುದು ಅರ್ಧ ಸತ್ಯ. ನಿಜವಾದ ಸತ್ಯ ಏನೆಂದರೆ, 1947ಕ್ಕಿಂತ ಪೂರ್ವದಲ್ಲೇ ವೀರ ಸಾವರ್ಕರ್ ನೇತೃತ್ವದಲ್ಲಿ ಅನೇಕ ಹೋರಾಟಗಾರರು ಧ್ವಜ ಹಾರಿಸುವ ಮೂಲಕ ದೇಶ ಸ್ವತಂತ್ರ ಗಳಿಸಿತ್ತು. ಆದರೆ, ಒಗ್ಗಟ್ಟಿನ ಕೊರತೆಯಿಂದ ಪರಕೀಯರು ದಾಳಿ ನಡೆಸಿದ ಪರಿಣಾಮ ಸ್ವತಂತ್ರ ರಕ್ಷಿಸಿಕೊಳ್ಳಲು ಸಾಧ್ಯವಾಗದೆ ದೇಶ ಮತ್ತೆ ಪರಕೀಯರ ಪಾಲಾಗಿತ್ತು ಎಂಬುದು ಪೂರ್ಣ ಸತ್ಯ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ನೆರೆ ರಾಷ್ಟ್ರಗಳಾದ ಭೂತನ್, ಬಾಂಗ್ಲಾ ದೇಶ, ನೇಪಾಳ ದೇಶಗಳಲ್ಲಿ ದೇಶ ಅಸ್ತಿರಗೊಳಿಸುವ ಕೃತ್ಯಗಳು ನಡೆದಿವೆ. ನಮ್ಮ ದೇಶದಲ್ಲಿ ಇಂತಹ ಸಂಚುಗಳನ್ನು ವಿಫಲಗೊಳಿಸಲು ಮತ್ತು ಸಾಮರಸ್ಯ ಕದಡದಂತೆ ನಾವೆಲ್ಲರೂ ಒಗ್ಗಟ್ಟಿನಿಂದ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ನಗರ ಬಿಜೆಪಿ ಮಂಡಲ ಅಧ್ಯಕ್ಷ ಪುಷ್ಪರಾಜ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ನರೇಂದ್ರ, ಬೆಳವಾಡಿ ರವೀಂದ್ರ, ಮುಖಂಡರಾದ ಪ್ರೇಮಕುಮಾರ್, ಕೋಟೆ ರಂಗನಾಥ್, ಸಿ ಎಚ್. ಲೋಕೇಶ್, ಬಿ. ರಾಜಪ್ಪ, ನಾರಾಯನಗೌಡ, ಹಿರೇಮಗಳೂರು ಪುಟ್ಟಸ್ವಾಮಿ, ಕುರುವಂಗಿ ವೆಂಕಟೇಶ್, ಜಸಂತ ಅನಿಲ ಕುಮಾರ್, ಪವಿತ್ರ, ಸಂತೋಷ್ ಕೋಟ್ಯನ್ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು. ಮುಖಂಡ ಬಸವರಾಜ್ ಸ್ವಾಗತಿಸಿ ನಿರೂಪಿಸಿದರು.

--

ಅಧಿಕಾರದಲ್ಲಿಲ್ಲದ ಕಾರಣ ಹತಾಶರಾಗಿ ಅಪಪ್ರಚಾರ: ಸಿ.ಟಿ.ರವಿ

ಕನ್ನಡ ಪ್ರಭ ವಾರ್ತೆ, ಕಡೂರುಕಳೆದ 10 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿಲ್ಲದ ಕಾರಣ ಹತಾಶರಾಗಿದ್ದು ರಾಹುಲ್ ಗಾಂಧಿ ಸೇರಿದಂತೆ ಕೆಲವರು ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು,

ತಾಲೂಕಿನ ಸಖರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಭಾರತದಲ್ಲಿ ಪರಿಸ್ಥಿತಿ ಸುಧಾರಿಸಲು ವಿದೇಶಿ ಶಕ್ತಿಗಳು ನೆರವಿಗೆ ಬರಬೇಕೆಂದು ದೇಶದ್ರೋಹದ ಮಾತುಗಳನ್ನು ಆಡಿದ್ದಾರೆ. ಬಿಜೆಪಿಯನ್ನು ವೈಚಾರಿಕವಾಗಿ ವಿರೋಧಿಸುವ ಸತತ ಪ್ರಯತ್ನ ಮಾಡುತ್ತಿರುವ ಅವರಿಗೆ ಮತೀಯ ಸಂಘಟನೆಗಳು ಕೈಜೋಡಿಸಿವೆ. ದೇಶಭಕ್ತರು ಒಂದಾದರೆ ಅವರ ಆಟ ನಡೆಯುವುದಿಲ್ಲ ಎಂದರು.

ನಮಗೆ ಸ್ವಾತಂತ್ರವೇನೋ ಸಿಕ್ಕಿತು ಆದರೆ ಪರಕೀಯರ ಆಕ್ರಮಣದಿಂದ ಊಳಿಗಮಾನ್ಯ ಮನಸ್ಥಿತಿಯಿಂದ ಹೊರಗಡೆ ಬರಲು ಸಾಧ್ಯವಾಗಿಲ್ಲ. ಪೂರ್ವ ಭಾರತದ ಶೌರ್ಯದ ಇತಿಹಾಸ ಮರೆಮಾಚುವ ಕೆಲಸವನ್ನು ಮಾಡಿದರು ಎಂದ ಅವರು, ಮತ್ತೆ ಭಾರತೀಯತೆ ಗಟ್ಟಿಯಾಗಿ ನಿಂತ ಪರಿಣಾಮ ಭಾರತ ಮೋದಿಜಿ ನೇತೃತ್ವದಲ್ಲಿ ಜಗತ್ತಿನ 5ನೇ ಬಲಿಷ್ಠ ರಾಷ್ಟ್ರವಾಗಿ ಎದ್ದು ನಿಂತಿದೆ ಎಂದರು.ಎಲ್ಲ ಭಾರತೀಯರು ದೇಶ ಮೊದಲು ಎಂದು ಮನಸ್ಸು ಮಾಡಿದರೆ ಜಗತ್ತಿನ ನಂಬರ್ ಒನ್ ರಾಷ್ಟ್ರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಕೆಲ ವಿದೇಶಿ ಶಕ್ತಿಗಳು, ಒಳಗಿರುವಂತಹ ದೇಶದ್ರೋಹಿ ವ್ಯಕ್ತಿ ಮತ್ತು ಸಂಘಟನೆಗಳು ಜೊತೆಗೂಡಿ ದೇಶದ ಒಳಗೆ ಅರಾಜಕತೆ ಹುಟ್ಟುಹಾಕುವ ಪ್ರಯತ್ನ ನಡೆಸುತ್ತಾ ಬಾಂಗ್ಲಾ ಮಾದರಿ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ. ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವವಾದಿ ಪಕ್ಷ ಬಿಡಲಿಲ್ಲ ಇಲ್ಲಿ ಅಂತಹ ಒಂದು ಕುತಂತ್ರ ನಡೆಸಿದ್ದಾರೆ. ಅದಕ್ಕೆ ಅವಕಾಶ ನೀಡದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ. ಯಾವುದೇ ಅಪಪ್ರಚಾರಕ್ಕೆ ಕಿವಿ ಕೊಡಬಾರದು ಎಂದರು.ಹಿಂದೆ ರೈತರ ವಿಷಯ ಮುಂದಿಟ್ಟುಕೊಂಡು ಕೆಂಪುಕೋಟೆ, ಪಾರ್ಲಿಮೆಂಟ್ ಗಲಭೆ ಮಾಡುವ ಸಂಚು ನಡೆಸಿದ್ದರು. ಸರ್ಕಾರದ ವರ್ತನೆಯಿಂದ ಅದು ಸಾಧ್ಯವಾಗಲಿಲ್ಲ ಎಂದರು.

--

ರಾಗಾ ಭವಿಷ್ಯ ಬಗ್ಗೆಯೂ ಹೇಳಲಿ: ಪ್ರಿಯಾಂಕ್‌ ಖರ್ಗೆಗೆ ಸಿ.ಟಿ. ರವಿ ಟಾಂಗ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಚಿವ ಪ್ರಿಯಾಂಕ್ ಖರ್ಗೆ ಯಾವಾಗ ಭವಿಷ್ಯ ಹೇಳಲು ಶುರು ಮಾಡಿದ್ದಾರೆಂಬುದು ಗೊತ್ತಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯದಲ್ಲೇ ಬೆಳಗಾವಿ ಟೀಂ ಸೇರುತ್ತಾರೆಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ತಮ್ಮ ಭವಿಷ್ಯದ ಮಾತುಗಳನ್ನು ರಾಹುಲ್ ಗಾಂಧಿ ಬಗ್ಗೆಯೂ ಹೇಳಲು ಶುರು ಮಾಡಿ ಬೆಳಕು ಚೆಲ್ಲಲಿ ಎಂದು ಹೇಳಿದರು.ರಾಹುಲ್ ಗಾಂಧಿ ಇಂತಹ ಭವಿಷ್ಯಕಾರರ ಬಗ್ಗೆ ಆಶಾಭಾವನೆಯಿಂದ ನೋಡುತ್ತಿರುತ್ತಾರೆ. ಕಳೆದ 10 ವರ್ಷದಿಂದ ಭವಿಷ್ಯವೇ ಇಲ್ಲದೆ ಒದ್ದಾಡುತ್ತಿ ದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ಪ್ರತಿಭೆಯನ್ನು ರಾಹುಲ್‌ಗಾಂಧಿ ಬಗ್ಗೆ ಪ್ರದರ್ಶಿಸಲಿ ಆಗ ಅವರು ಅವರ ಆಸ್ಥಾನದ ಜ್ಯೋತಿಷಿಯೂ ಆಗಬಹುದು ಎಂದರು.

ಪಕ್ಷದ ಪಾದಯಾತ್ರೆಯಲ್ಲಿ ನಾನು ಭಾಗವಹಿಸಬೇಕೆಂದು ಪಕ್ಷ ನಿರ್ಣಯ ಮಾಡಿದರೆ ಆ ಪಾದಯಾತ್ರೆಯಲ್ಲೂ ನಾನು ಪಾಲ್ಗೊಳ್ಳುತ್ತೇನೆ. ಚಿಕ್ಕಮಗ ಳೂರಿನಲ್ಲಿ ಇವತ್ತೇ ಜನಾಭಿಪ್ರಾಯ ಸಂಗ್ರಹಿಸಿ ಅವರು ಅಭಿವೃದ್ಧಿ, ನಡವಳಿಕೆ, ಜನ ಸಂಪರ್ಕದಲ್ಲಿ ನಂಬರ್ ಒನ್ ಅಂತಾರೆ ನಮ್ಮ ಸಂಘಟನೆ ದುರ್ಬಲನಾ ಅಂದರೆ ನಮ್ಮದು ಅತ್ಯಂತ ಪ್ರಬಲವಾದ ಸಂಘಟನೆ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಬಹುತೇಕ ಕಡೆಗಳಲ್ಲಿ ನಾವೇ ಅಧಿಕಾರದಲ್ಲಿರುವುದು ಎಂದು ತಿಳಿಸಿದರು.ಸೋಲಿಗೆ ಕಾರಣವಾದ ಸಂಗತಿಗಳು ಗುಟ್ಟೇನು ಇಲ್ಲವಲ್ಲ, ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿದ್ದು, ನಮ್ಮದೆ ಪಕ್ಷದ ಕೆಲವು ವ್ಯಕ್ತಿಗಳು ಕೈ ಜೋಡಿ ಸಿದ್ದು ಇವೆಲ್ಲಾ ಕಾರಣಗಳೂ ಇವೆ, ರಾಜ್ಯ ರಾಜಕಾರಣದ ಗೊಂದಲದ ಬಗ್ಗೆ ಆರ್. ಅಶೋಕ್ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿ, ಈ ವಿಷಯವಾಗಿ ನನ್ನ ಜೊತೆ ಮಾತನಾಡಿಲ್ಲ. ನಾವೆಲ್ಲ ಒಂದೇ ಪಕ್ಷದವರಾಗಿರುವುದರಿಂದ ವಾರದಲ್ಲಿ ಮೂರ್ನಾಲ್ಕು ಬಾರಿ ಮಾತನಾಡಿರುತ್ತೇವೆ.

ಕೆಲವನ್ನು ನನಗಿರುವ ಜವಾಬ್ದಾರಿ ಕಾರಣಕ್ಕೆ ಬಹಿರಂಗವಾಗಿ ಚರ್ಚೆ ಮಾಡಲಾರೆ, ಪಕ್ಷದ ವೇದಿಕೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡುತ್ತೇವೆಂದರು. 15 ಕೆಸಿಕೆಎಂ 3ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಿ.ಟಿ. ರವಿ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ಇದ್ದರು.