ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಬೆಳಗಾವಿಯ ಸುವರ್ಣ ಸೌಧದಲ್ಲಿ ಸದನ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಅಸಾಂವಿಧಾನಿಕ ಪದಗಳನ್ನು ಬಳಸಿಕೊಂಡು ದೊಡ್ಡ ಗಲಾಟೆ ನಡೆಸಿದರು. ಕಾಂಗ್ರೆಸ್‌ನವರು ದುರುದ್ದೇಶ ಇಟ್ಟುಕೊಂಡು ಚೀರಾಟ, ಕೂಗಾಟ ನಡೆಸಿದರು. ಇದು ಪೂರ್ವ ನಿಯೋಜಿತ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಆರೋಪಿಸಿದರು.ಅವರು ನಗರದ ಅಂಬೇಡ್ಕರ್ವಿ ವೃತ್ತದಲ್ಲಿ ಸಿ.ಟಿ ರವಿ ಅವರ ಬಂಧನ ಖಂಡಿಸಿ ಮಧುಗಿರಿ ವಿಭಾಗದ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ದುಬಳಕೆ ಮಾಡಿಕೊಂಡು ಗೂಂಡಾಗಿರಿ ಆಡಳಿತ ನಡೆಸುತ್ತಿದೆ. ವಿರೋಧಪಕ್ಷದ ಶಾಸಕರಿಗೆ ಕೊಲೆ ಬೆದರಿಕೆ ಹಾಕುತ್ತಿದೆ. ತಾಲೀಬಾನಿ ರೀತಿ ಆಡಳಿತ ನಡೆಸುತ್ತಿದೆ. ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸಿ.ಟಿ.ರವಿ ಅವರು ಆ ರೀತಿ ಹೇಳಿಕೆ ನೀಡಿದ್ದರೆ. ಸಭಾಪತಿಯವರು ಕ್ರಮ ಕೈಗೊಳ್ಳುತ್ತಾರೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕ ಗೂಂಡಾ ವರ್ತನೆ ನಡೆಸಿ ಸಿ.ಟಿ.ರವಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದ ಅವರು ಮುಂದಿನ ವಿಧಾನಸಭೆ ಅಧಿವೇಶನಕ್ಕೆ ಪ್ರತಿ ಶಾಸಕರಿಗೆ ಪೊಲೀಸರ ಭದ್ರತೆ ನೀಡಬೇಕು ಹಾಗೂ ಕೂಡಲೇ ರವಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಅವರು ಮಾತನಾಡಿ ಸಾರ್ವಜನಿಕರ ಸೇವೆಗಾಗಿ ಸುಮಾರು 35 ವರ್ಷ ಜೀವನ ಮೀಸಲಿಟ್ಟ ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ ಅವರನ್ನು ಕಾಂಗ್ರೆಸ್ ಸರಾರ ನಡೆಸಿಕೊಂಡ ರೀತಿ ಅತ್ಯಂತ ಖಂಡನೀಯ. ಈ ರಾಜ್ಯದಲ್ಲಿ ಗೂಂಡಾವರ್ತನೆ ಅಧಿಕಾರ ನಡೆಯುತ್ತಿದೆ. ಒಬ್ಬ ಉಪಮುಖ್ಯಮಂತ್ರಿ ಸಿ.ಟಿ.ರವಿ ಬದುಕಿದ್ದೇ ಹೆಚ್ಚು ಎಂದು ಹೇಳುತ್ತಾರೆ. ಉಪಮುಖ್ಯಮಂತ್ರಿಗಳ ಸ್ಥಾನದಲ್ಲಿರುವವರು ಹೇಳುವ ರೀತಿಯೇ ಅದು ಎಂದು ಪ್ರಶ್ನಿಸಿದ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ರಕ್ತ ಕುದಿಯುತ್ತಿದೆ. ಈ ದುಷ್ಟ ಸರ್ಕಾರವನ್ನು ಕಿತ್ತೊಗೆಯಲು ಉಗ್ರ ಹೋರಾಟ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಗಿರಿಧರ್, ಗ್ರಾಮಾಂತರ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ಕೊರಟಗೆರೆ ಪವನ್ ಕುಮಾರ್, ಓಬಿಸಿ ಘಟಕದ ಅಧ್ಯಕ್ಷ ಮಾಗೋಡು ಪ್ರತಾಪ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನಟರಾಜ್ ಸಂತೆಪೇಟೆ, ಕೊಟ್ಟ ರಂಗನಾಥ್, ಮೂರ್ತಿ, ನರಸಿಂಹರಾಜು, ಮುಖಂಡರಾದ ಮುದಿಮಡು ಮಂಜುನಾಥ್, ಮದ್ದಕ್ಕನಹಳ್ಳಿ ಗೌಡಪ್ಪ, ಚಿಕ್ಕನಕೋಟೆ ಕರಿಯಣ್ಣ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಡಿಎಚ್ ಗೌಡ, ಈರಣ್ಣ ಪಟೇಲ್, ಎಂ.ಶಿವಲಿಂಗಯ್ಯ, ಲಕ್ಷ್ಮೀನಾರಾಯಣ, ಭಾಸ್ಕರ್, ಕೆ. ಕೆ ಪಾಳ್ಯ ರವಿಕುಮಾರ್, ಮಹಿಳಾ ಮೋರ್ಚಾದ ಕಲ್ಪನಾ, ರಂಗಾಪುರ ನಾಗರಾಜ್ ಗೌಡ, ರಂಗನಾಥ್, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.