ಹೋರಾಟಗಾರರ ಮನೋಭಾವ ಬೆಳೆಸಿಕೊಳ್ಳಿ

| Published : Mar 25 2024, 12:56 AM IST

ಸಾರಾಂಶ

ವಿದ್ಯಾರ್ಥಿ ಯುವಜನರು ಭಗತ್‌ಸಿಂಗ್ ಸೇರಿದಂತೆ ಅನೇಕ ಕ್ರಾಂತಿಕ್ರಾರಿ ಹೋರಾಟಗಾರರ ಮನೋಭಾವ ಬೆಳೆಸಿಕೊಳ್ಳಬೇಕು.

ಬಳ್ಳಾರಿ: ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದೇಶದ ಸ್ವಾತಂತ್ರ‍್ಯಕ್ಕಾಗಿ ರಾಜಿರಹಿತವಾಗಿ ಹೋರಾಡಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು ಅವರ ಹುತಾತ್ಮ ದಿನವನ್ನು ನಗರದ ವಿಮ್ಸ್‌ ಮೈದಾನದಲ್ಲಿ ಎಐಡಿಎಸ್‌ಒನಿಂದ ಶನಿವಾರ ಆಯೋಜಿಸಲಾಯಿತು.ಇದೇ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜೆ.ಪಿ. ರವಿಕಿರಣ್, ಭಗತ್ ಸಿಂಗ್ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಹಸಿವು, ಬಡತನ, ನಿರುದ್ಯೋಗವಿಲ್ಲದಂತಹ ಸಮಾಜವಾದಿ ಭಾರತವನ್ನು ನಿರ್ಮಿಸುವುದೇ ಅವರ ಕನಸಾಗಿತ್ತು. ಅವರ ಕನಸನ್ನು ನನಸಾಗಿಸುವ ದಾರಿಯಲ್ಲಿ ಅವರ ಉತ್ತರಾಧಿಕಾರಿಗಳಾಗಿ ವಿದ್ಯಾರ್ಥಿಗಳು, ಯುವಜನರ ಮುನ್ನಡೆಯುವುದು ತುರ್ತು ಅವಶ್ಯಕವಾಗಿದೆ ಎಂದು ತಿಳಿಸಿದರು.

ಎಐಡಿಎಸ್ಒ ಜಿಲ್ಲಾಧ್ಯಕ್ಷ ಕೆ.ಈರಣ್ಣ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರು ನೀಡಿದ ಕೊಡುಗೆ ಮತ್ತು ರಾಜಿರಹಿತ ಹೋರಾಟ ಕುರಿತು ತಿಳಿಸಿದರು.ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ವಿದ್ಯಾರ್ಥಿ ಯುವಜನರು ಭಗತ್‌ಸಿಂಗ್ ಸೇರಿದಂತೆ ಅನೇಕ ಕ್ರಾಂತಿಕ್ರಾರಿ ಹೋರಾಟಗಾರರ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಹಿತಕ್ಕಾಗಿ ರಾಜಿರಹಿತ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.ಸಂಘಟನೆಯ ಉಪಾಧ್ಯಕ್ಷೆ ಎಂ.ಶಾಂತಿ, ಪ್ರಮೋದ್, ಖಜಾಂಚಿ ಅನುಪಮ ಮತ್ತು ಸದಸ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.