ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಬೆಳೆಸಿ

| Published : Feb 12 2025, 12:33 AM IST

ಸಾರಾಂಶ

ನೆಲಮಂಗಲ: ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಬೆಳೆಸಿದಾಗ ಮಾತ್ರ ನಮ್ಮ ಸಂಸ್ಕೃತಿ ಜೀವಂತವಾಗಿರಲು ಸಾಧ್ಯ ಎಂದು ಸ್ಮೈಲ್‌ ಇಂಡಿಯಾ ಫೌಂಡೇಷನ್ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಜವಳಿ ಹೇಳಿದರು.

ನೆಲಮಂಗಲ: ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಬೆಳೆಸಿದಾಗ ಮಾತ್ರ ನಮ್ಮ ಸಂಸ್ಕೃತಿ ಜೀವಂತವಾಗಿರಲು ಸಾಧ್ಯ ಎಂದು ಸ್ಮೈಲ್‌ ಇಂಡಿಯಾ ಫೌಂಡೇಷನ್ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಜವಳಿ ಹೇಳಿದರು.

ನಗರದ ನ್ಯೂ ಪಬ್ಲಿಕ್ ಶಾಲಾ ವಾರ್ಷಿಕೋತ್ಸವ ಭಾರ್ಗವ ಅನಂತಮ್ 2024-25 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಶಿಕ್ಷಣ ಪದ್ಧತಿಯಲ್ಲಿನ ಗುರುಕುಲದಲ್ಲಿ ಉಪನಯನದ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತಿದ್ದರು, ದಿನಕಳೆದಂತೆ ಗುರುಕುಲಗಳು ಶಾಲೆ, ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳಾಗಿ ಮಾರ್ಪಟ್ಟಿವೆ. ಪ್ರಸ್ತುತ ತಾಂತ್ರಿಕ ಯುಗದಲ್ಲಿ ದಿನದಿಂದ ದಿನಕ್ಕೆ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು ಪ್ರತಿ ಕ್ಷಣದಲ್ಲಿಯೂ ಪೈಪೋಟಿ ಹೆಚ್ಚಾಗುತ್ತಿದೆ. ಪೋಷಕರು ಮಕ್ಕಳಿಗೆ ಅಂಕಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ತಿಳಿಸಿದರು.

ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಆದ್ಯತೆ ನೀಡಬೇಕು, ಮೊಬೈಲ್‌, ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಬೇಕು. ತಾಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಹಾಯಕ್ಕೆ ಶಾಸಕ ಶ್ರೀನಿವಾಸ್ ಶೈಕ್ಷಣಿಕ ಕಾರ್ಯಾಗಾರ ಆಯೋಜನೆ ಮಾಡುತ್ತಿದ್ದು ಅದನ್ನು ಸದ್ಬಳಸಿಕೊಳ್ಳಬೇಕು ಎಂದು ತಿಳಿಸಿದರು.ಶಾಲಾ ಸಂಸ್ಥಾಪಕ ಅಧ್ಯಕ್ಷ ಪಿ.ಸಿದ್ದರಾಜು, ವಿ.ಪಿ,ಮ್ಯಾಗ್ನೆಸ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಕಾಸ್, ಮಹೇಶ್, ಶಾಲೆಯ ಟ್ರಸ್ಟಿ ಕೆ.ಪಿ.ಬೈರಪ್ಪ, ಪ್ರೆಸ್‌ಕ್ಲಬ್ ರಾಜ್ಯ ಕಾರ್ಯದರ್ಶಿ ಕೊಟ್ರೇಶ್, ಮುಖಂಡರಾದ ವಾಸುದೇವರಾವ್, ಶಾಲಾ ಕಾರ್ಯದರ್ಶಿ ಧನುಷ್, ಪ್ರಾಂಶುಪಾಲರಾದ ಮಂಜುಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪೋಟೊ –11ಕೆ ಎನ್ ಎಲ್ ಎಮ್1:

ನೆಲಮಂಗಲದ ನ್ಯೂ ಪಬ್ಲಿಕ್ ಶಾಲೆಯ ಭಾರ್ಗವ ಅನಂತಮ್ 2024-25 ಕಾರ್ಯಕ್ರಮವನ್ನು ಸ್ಮೈಲ್‌ ಇಂಡಿಯಾ ಫೌಂಡೇಷನ್‌ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಜವಳಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾರಾಯಣಗೌಡ ಉದ್ಘಾಟಿಸಿದರು.