ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಳ್ಳಿ: ಎಂ.ಬಿ.ಅಂಗಡಿ

| Published : Aug 29 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಶೈಕ್ಷಣಿಕ ಕ್ಷೇತ್ರದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವೀರೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಅಂಗಡಿ ಹೇಳಿದರು. ಪಟ್ಟಣದ ವೀರೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಂಗಳವಾರ ನಡೆದ ನಾಲತವಾಡ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಇಂದು ಉತ್ತಮ ಭವಿಷ್ಯವಿದೆ, ಅತ್ಯಂತ ಕಡು ಬಡ ಮಕ್ಕಳೆ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ.

ಕನ್ನಡಪ್ರಭ ವಾರ್ತೆ ನಾಲತವಾಡ

ಶೈಕ್ಷಣಿಕ ಕ್ಷೇತ್ರದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವೀರೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಅಂಗಡಿ ಹೇಳಿದರು. ಪಟ್ಟಣದ ವೀರೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಂಗಳವಾರ ನಡೆದ ನಾಲತವಾಡ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಇಂದು ಉತ್ತಮ ಭವಿಷ್ಯವಿದೆ, ಅತ್ಯಂತ ಕಡು ಬಡ ಮಕ್ಕಳೆ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಒಲಂಪಿಕ್ಸ್ ನಲ್ಲಿ ಪದಕ ತಂದ ಕ್ರೀಡಾಪಟುಗಳ ಇತಿಹಾಸ ತಿಳಿದುಕೊಂಡರೆ ಅವರೆಲ್ಲ ಬಡತನ ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ ಎಂದರು.

ವೀರೇಶ್ವರ ಕಾಲೇಜಿನ ಅಧ್ಯಕ್ಷ ಎಂ.ಎಸ್.ಪಾಟೀಲ ಅಧ್ಯಕ್ಷೀಯ ಭಾಷಣ ಮಾಡಿದರು, ಅಜಿತ್ ಆರ್.ಸ್ವಾಗತಿಸಿದರು, ಎನ್.ಎಗದ್ದನಕೇರಿ ನಿರೂಪಿಸಿದರು, ಸವಿತಾ ದಂಡಿನ ವಂದಿಸಿದರು.ಈ ವೇಳೆ ವೀರೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಆರ್.ಮಳಖೇಡ, ಪ್ರೌಢ ಶಾಲೆಯ ಮುಖ್ಯಗುರುಗಳಾದ ಎಲ್.ಎಸ್.ನಾಯಕ, ಎಂ.ಬಿ.ಗುಡಗುಂಟಿ, ಎಸ್.ಆರ್.ನಾಯಕ, ಪಿ.ಬಿ.ಪೂಜಾರಿ ಹಾಗೂ ಇನ್ನಿತರರು ಇದ್ದರು.