ಜೀವನದಲ್ಲಿ ನೈತಿಕತೆ, ಪ್ರಾಮಾಣಿಕತೆ ರೂಢಿಸಿಕೊಳ್ಳಿ: ರಮೇಶ್

| Published : Mar 20 2025, 01:18 AM IST

ಜೀವನದಲ್ಲಿ ನೈತಿಕತೆ, ಪ್ರಾಮಾಣಿಕತೆ ರೂಢಿಸಿಕೊಳ್ಳಿ: ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸಮ ಸಮಾಜಕ್ಕೆ ವರವಾಗಬೇಕಿದ್ದ ರಾಜಕೀಯ ಕ್ಷೇತ್ರ ಮತ್ತು ಸಾಹಿತಿಗಳಿಗೆ ಪ್ರೊತ್ಸಾಹ ನೀಡಬೇಕಿದ್ದ ಸಾಹಿತ್ಯ ಕ್ಷೇತ್ರ ಇವುಗಳು ಇಂದು ಕಲುಷಿತಗೊಂಡಿವೆ. ನೈತಿಕತೆ ಮತ್ತು ಪ್ರಾಮಾಣಿಕತೆ ಕಳೆದುಕೊಂಡ ಕೊಳ್ಳುಬಾಕ ಮತ್ತು ನುಂಗುಬಾಕ ಸಾಹಿತಿಗಳಿಂದ ಉಪದೇಶ ಕೇಳುವ ಪರಿಸ್ಥಿತಿ ಬಂದಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಕನಿಷ್ಠ ಪ್ರಾಮಾಣಿಕತೆ, ನಿಷ್ಟೂರತೆ, ನೈತಿಕತೆ ರೂಢಿಸಿಕೊಳ್ಳಬೇಕು ಎಂದು ಸಾಹಿತಿ, ಪತ್ರಕರ್ತ ನಾಗತಿಹಳ್ಳಿ ರಮೇಶ್ ಕರೆ ನೀಡಿದರು.ಡಿ.ಹಲಸಹಳ್ಳಿ ಗವಿಮಠದಲ್ಲಿ ವಾಸವಿ ಎಜುಕೇಷನ್‌ ಟ್ರಸ್ಟ್‌ನ ವಿಇಟಿ ಪ್ರಥಮ ದರ್ಜೆ ಕಾಲೇಜು ಜೆ.ಪಿ.ನಗರ ಬೆಂಗಳೂರು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಪರಿಸರ, ಯುವಜನತೆ ಮತ್ತು ಮಾಧ್ಯಮ ಕುರಿತು ಉಪನ್ಯಾಸ ನೀಡಿದರು.

ಸಮ ಸಮಾಜಕ್ಕೆ ವರವಾಗಬೇಕಿದ್ದ ರಾಜಕೀಯ ಕ್ಷೇತ್ರ ಮತ್ತು ಸಾಹಿತಿಗಳಿಗೆ ಪ್ರೊತ್ಸಾಹ ನೀಡಬೇಕಿದ್ದ ಸಾಹಿತ್ಯ ಕ್ಷೇತ್ರ ಇವುಗಳು ಇಂದು ಕಲುಷಿತಗೊಂಡಿವೆ. ನೈತಿಕತೆ ಮತ್ತು ಪ್ರಾಮಾಣಿಕತೆ ಕಳೆದುಕೊಂಡ ಕೊಳ್ಳುಬಾಕ ಮತ್ತು ನುಂಗುಬಾಕ ಸಾಹಿತಿಗಳಿಂದ ಉಪದೇಶ ಕೇಳುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ವಿದ್ಯಮಾನಗಳನ್ನು ಅಧರಿಸಿ, ಪ್ರತಿರೋಧ ತೋರಬೇಕಾದ ಜವಾಬ್ದಾರಿ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಒಳ್ಳೆಯ ಕೆಲಸ ಮಾಡಲು ಹೋದಾಗ ನೂರು ವಿಘ್ನಗಳು ಬರಲಿವೆ. ಎಲ್ಲರೂ ಒಟ್ಟಾಗಿ ಸಮ ಸಮಾಜವನ್ನು ಕಟ್ಟೊಣ, ಕೂಡಿ ಬಾಳೋಣ, ಬೆಳಗೋಣ. ಸಮಾಜದ ಕಟ್ಟ ಕಡೆಯಲ್ಲಿರುವ ತಳಮಟ್ಟದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ನೆರವಾಗಿ ಎಂದು ಕರೆ ನೀಡಿದರು.

ಸಾಹಿತಿ ಕುಡ್ಲೂರು ವೆಂಕಟಪ್ಪ ಮಾತನಾಡಿ, ಇತ್ತೀಚಿಗೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತಿದೆ. ಇದಕ್ಕೆ ಗುಣಮಟ್ಟದ ಆಹಾರ ಕ್ರಮವನ್ನು ಪಾಲನೆ ಮಾಡದಿರುವುದು. ವಿದ್ಯಾವಂತ ಯುವಜನರು ದೈನಂದಿನ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಬಹುಮಾನ ವಿತರಿಸಲಾಯಿತು. ಗವಿಮಠದ ಪೀಠಾಧ್ಯಕ್ಷರಾದ ಷಡಕ್ಷರಸ್ವಾಮೀಜಿ, ಷಡಕ್ಷರ ಸಾಹಿತ್ಯ ಪೀಠ ಅಧ್ಯಕ್ಷ ಕುಡ್ಲೂರು ವೆಂಕಟಪ್ಪ, ಸಂಸ ಥೀಯೇಟರ್ ಮುಖ್ಯಸ್ಥ ಸುರೇಶ್, ಶಿಬಿರದ ಸಂಯೋಜಕರಾದ ನಾರಾಯಣಸ್ವಾಮಿ, ಸಹ ಸಂಯೋಕರುಗಳಾದ ಐಶ್ವರ್ಯ, ಮಣಿಕಂಠ, ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.