ದೇಶಭಕ್ತಿ, ಶಿಸ್ತು, ಆತ್ಮವಿಶ್ವಾಸ ರೂಢಿಸಿಕೊಳ್ಳಿ: ಮಾಧವಚಂದ್ರ

| Published : Aug 01 2024, 12:23 AM IST

ಸಾರಾಂಶ

ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನಾವು ಮಾಡುವ ಕಾರ್ಯವನ್ನೇ ದೇಶಕ್ಕೆ ಪೂರಕವಾಗಿ, ಯೋಧರಂತೆ ಮಾಡಬೇಕು ಎಂದು ಹರಿಪ್ರಕಾಶ ಕೋಣೆಮನೆ ಮನವಿ ಮಾಡಿದರು.

ಯಲ್ಲಾಪುರ: ಸೇನೆಯಲ್ಲಿ ಸೇವೆ ಸಲ್ಲಿಸಲು ವಿಫುಲ ಅವಕಾಶವಿದ್ದು, ಯುವಕರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ದೇಶಸೇವೆಯೊಂದಿಗೆ ದೇಶಭಕ್ತಿ, ಶಿಸ್ತು, ಆತ್ಮವಿಶ್ವಾಸವನ್ನೂ ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಾಯುಸೇನೆಯ ನಿವೃತ್ತ ಜೂನಿಯರ್ ವಾರಂಟ್ ಆಫೀಸರ್ ಮಾಧವಚಂದ್ರ ಪಂಡರಾಪುರ ತಿಳಿಸಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ವತಿಯಿಂದ ಸಂಸ್ಥೆಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಕಾರ್ಗಿಲ್ ವಿಜಯ ದಿವಸದ ೨೫ನೇ ವರ್ಷಾಚರಣೆ ಹಿನ್ನೆಲೆ ಜು. ೩೧ರಂದು ಹಮ್ಮಿಕೊಂಡಿದ್ದ ಸೈನಿಕರಿಗೊಂದು ಸೆಲ್ಯೂಟ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಕಾರ್ಗಿಲ್ ವಿಶೇಷ ಸಂಚಿಕೆ, ವಿಡಿಯೋ ಮತ್ತು ರೇಡಿಯೋ ಕಾರ್ಯಕ್ರಮಗಳನ್ನು ಅನಾವರಣಗೊಳಿಸಿ ಮಾತನಾಡಿದರು.ಅಗ್ನಿವೀರ ಎಂಬ ಯೋಜನೆಯ ಮೂಲಕ ಸೈನ್ಯಕ್ಕೆ ಸೇರುವ ಆಸಕ್ತರಿಗೆ ಉತ್ತಮ ಅವಕಾಶ ಮಾಡಿಕೊಡಲಾಗಿದೆ ಎಂದ ಅವರು, ಸೇನೆಯಲ್ಲಿ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವಗಳನ್ನು ಹಂಚಿಕೊಂಡರು. ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನಾವು ಮಾಡುವ ಕಾರ್ಯವನ್ನೇ ದೇಶಕ್ಕೆ ಪೂರಕವಾಗಿ, ಯೋಧರಂತೆ ಮಾಡಬೇಕು ಎಂದರು.ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಉಪಸ್ಥಿತರಿದ್ದರು. ಗುರು ಕಲ್ಮಠ ಸ್ವಾಗತಿಸಿದರು. ನಾಗರಾಜ ಪಟಗಾರ ಪ್ರಾಸ್ತಾವಿಕ ಮಾತನಾಡಿದರು. ಪಲ್ಲವಿ ಮರಾಠಿ ನಿರ್ವಹಿಸಿದರು. ವಾಣಿ ಭಟ್ಟ ವಂದಿಸಿದರು.