ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸಿ: ಕೆ.ಎಸ್.ಗೌಡ

| Published : Apr 07 2025, 12:37 AM IST

ಸಾರಾಂಶ

ಕೆ.ಎಂ.ದೊಡ್ಡಿ ಸಮೀಪದ ಕುರಿಕೆಂಪನದೊಡ್ಡಿಯಲ್ಲಿ ರಾಮನವಮಿ ಅಂಗವಾಗಿ ಶ್ರೀರಾಮಮಂದಿರದಲ್ಲಿ ವಿಶೇಷ ಪೂಜಾ ಕೈಕಂರ್ಯ ನೆರವೇರಿಸಿ ಪಾನಕ, ಮಜ್ಜಿಗೆ ವಿತರಿಸಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ಕುರಿಕೆಂಪನದೊಡ್ಡಿಯಲ್ಲಿ ರಾಮನವಮಿ ಅಂಗವಾಗಿ ಶ್ರೀರಾಮಮಂದಿರದಲ್ಲಿ ವಿಶೇಷ ಪೂಜಾ ಕೈಕಂರ್ಯ ನೆರವೇರಿಸಿ ಪಾನಕ, ಮಜ್ಜಿಗೆ ವಿತರಿಸಿದರು.

ಈ ವೇಳೆ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಸದಸ್ಯ ಕೆ.ಎಸ್.ಗೌಡ ಮಾತನಾಡಿ. ಕಳೆದ 40 ವರ್ಷಗಳಿಂದ ಗ್ರಾಮದಲ್ಲಿ ಶ್ರೀರಾಮನವಮಿ ಆಚರಿಸಲಾಗುತ್ತಿದೆ. ಮುಂದೆಯೂ ಇದೇ ರೀತಿ ಆಚರಿಸುವ ಮೂಲಕ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಅರ್ಕೇಶ್, ಗುಂಡ ನಂದೀಶ್, ನಾರಾಯಣ, ರಾಮಲಿಂಗೇಗೌಡ, ವಿಷಕಂಠೇಗೌಡ, ರಾಮಪ್ರಸಾದ್, ಶಿವಾನಂದ್, ಲಕ್ಷ್ಮಣ್, ಪುಟ್ಟಸ್ವಾಮಿ ಸೇರಿದಂತೆ ಮತ್ತಿತರಿದ್ದರು.

ಭಾರತ್ ವಿಕಾಸ್ ಪರಿಷತ್ ವತಿಯಿಂದ ಆಚರಣೆ:

ಭಾರತೀ ಕಾಲೇಜ್ ಗೇಟ್ ಸಮೀಪ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಭಾರತ್‌ ವಿಕಾಸ್ ಪರಿಷತ್‌ನಿಂದ ಶ್ರೀರಾಮನವಮಿ ಆಚರಿಸಲಾಯಿತು. ಶ್ರೀರಾಮನ ಭಾವಚಿತ್ರಕ್ಕೆ ಪರಿಷತ್ ಪೋಷಕ ಅಧ್ಯಕ್ಷ ಎಂ.ಮಾಯಪ್ಪ ಪುಷ್ಪರ್ಚಾನೆ ಮಾಡಿದರು.

ಈ ವೇಳೆ ಗ್ರಾಪಂ ಸದಸ್ಯರಾದ ಕೆ.ಟಿ. ಶ್ರೀನಿವಾಸ್, ಮಣಿಗೆರೆ ರಾಮಚಂದ್ರೇಗೌಡ, ಸ್ನೇಹ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ.ದಾಸೇಗೌಡ, ಪರಿಷತ್ ಅಧ್ಯಕ್ಷ ಶಿವಮಾದೇಗೌಡ, ಕಾರ್ಯದರ್ಶಿ ಶಿವರಾಮು, ಡಿಸಿಸಿ ಬ್ಯಾಂಕ್ ನಾಗರಾಜು, ಪುಟ್ಟರಾಮರಾಜೇ ಅರಸ್, ಎ.ಎನ್. ನಾಗರಾಜು, ಎ.ಬಿ.ಹಳ್ಳಿ ರಮೇಶ್, ಸುಶೀಲಮ್ಮ, ಎಂ.ಜೆ.ರಾಮಯ್ಯ, ದೊಡ್ಡರಸಿನಕೆರೆ ಸೋಮಣ್ಣ, ಕೆ. ಶೆಟ್ಟಹಳ್ಳಿ ಬೋರಯ್ಯ, ಅಣ್ಣೂರು ದೇವರಾಜು, ನಂಜುಂಡೇಗೌಡ, ಶಿವರಾಮು, ಸೇರಿದಂತೆ ಹಲವರಿದ್ದರು.

ವೆಂಕಟೇಶ್ವರ ಸೇವಾ ಸಮಿತಿಯಿಂದ ಆಚರಣೆ:

ಭಾರತೀನಗರದ ಮಾರಿಗುಡಿ ಆವರಣದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಈ ವೇಳೆ ಶ್ರೀ ವೆಂಕಟೇಶ್ವರಿನಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು. ದೇವಾಲಯಕ್ಕೆ ಬೆಳಗಿನ್ನಿಂದ ಭಕ್ತರ ದಂಡೆ ಹರಿದು ಬಂತು. ಸೇವಾ ಸಮಿತಿಯಿಂದ ಭಕ್ತರಿಗೆ ಪಾನಕ, ಮಜ್ಜಿಗೆ, ಕೊಸಂಬರಿ ವಿತರಿಸಲಾಯಿತು. ಸಮಿತಿ ಅಧ್ಯಕ್ಷ ವೆಂಕಟೇಶ್, ಪೂಜುರಿ ವೆಂಕಟೇಗೌಡ, ಶ್ರೀನಿವಾಸ್ ಕೆಂಚೇಗೌಡ, ವಿಶ್ವ, ಪುಟ್ಟಣ್ಣ, ರವಿ ಸೇರಿದಂತೆ ಪಧಾಧಿಕಾರಿಗಳು ಇದ್ದರು.