ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ

| Published : Feb 18 2025, 01:46 AM IST

ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ನ್ನಾದರೂ ದೇವರ ಕಡೆ ಸ್ವಲ್ಪ ಸಮಯ ಕೊಟ್ಟು ಜ್ಞಾನ, ಪೂಜೆ, ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ

ಕನ್ನಡಪ್ರಭ ವಾರ್ತೆ ಐಗಳಿ

ನಮ್ಮೆಲ್ಲರನ್ನು ಕಾಪಾಡಲು ಪರಮಾತ್ಮ ಪಂಚಭೂತ ಕೊಟ್ಟು ಮನುಷ್ಯರ ಹಿತ ಕಾಪಾಡಿದ್ದಾರೆ. ಆದರೆ ಅವರನ್ನೆ ಮರೆತ್ತಿದ್ದೇವೆ. ಇನ್ನಾದರೂ ದೇವರ ಕಡೆ ಸ್ವಲ್ಪ ಸಮಯ ಕೊಟ್ಟು ಜ್ಞಾನ, ಪೂಜೆ, ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳರಿ ಎಂದು ವಿಜಯಪೂರ ಹಾಗೂ ಹುಬ್ಬಳ್ಳಿ ಆಶ್ರಮದ ಅಭಿನವ ಸಿದ್ದಾರೂಢ ಮಹಾ ಸ್ವಾಮೀಜಿ ಹೇಳಿದರು.

ಅವರಿ ಸಮೀಪದ ತುಂಗಳ ಗ್ರಾಮದ ಶ್ರೀ ಸಿದ್ದಲಿಂಗ ಶಾಂಭವಿ ಆಶ್ರಮದ ಜಾತ್ರಾ ಮಹೋತ್ಸವ ನಿಮಿತ್ತ ಧರ್ಮಸಭೆಯಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇವರು ನಮಗೆ ನೀರು, ಬೆಳಕು, ಗಾಳಿ, ಬೆಂಕಿ ಹಾಗೂ ಭೂಮಿ ಕೊಟ್ಟು ಯಾವುದಕ್ಕೂ ಬಿಲ್‌ ಕಟ್ಟು ಅಂತಾ ಕೇಳಿಲ್ಲ. ಆದರೆ ಸರಕಾರ ಇವುಗಳನ್ನು ಪೂರೈಸಿದರೆ ತಿಂಗಳಿಗೊಮ್ಮೆ ಬಿಲ್‌ ಕಟ್ಟಲೇಬೇಕು. ಇಲ್ಲದೇ ಹೋದರೆ ಅದೇ ದಿನ ಎಲ್ಲವೂ ಕಟ್ಟಾಗುತ್ತದೆ. ದೇವರು ನಮ್ಮಿಂದ ಏನೂ ಬಯಸಿಲ್ಲ, ಜನತೆ ಒಳ್ಳೆಯವರಾಗಿ, ಸಮಾನ ಮನಸ್ಕರರಾಗಬೇಕು. ಬಿದ್ದವರನ್ನು ಎಬ್ಬಿಸುವ ಕಾರ್ಯ ಮಾಡಿ, ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದು ಆಶೀರ್ವಚಿಸಿದರು.

ಬಂಗಾರ, ಬೆಳ್ಳಿ, ವಜ್ರದಂತಹ ವಸ್ತಗಳಿಗೆ ಎಂದೂ ನುಸಿ, ಹುಳ ಆಗುವುದಿಲ್ಲ. ಆದರೆ ತಿನ್ನುವ ಪದಾರ್ಥಗಳಿಗೆ ಬೇಗನೆ ಹುಳು ಆಗುತ್ತವೆ. ಯಾಕಂದ್ರೆ ತಿನ್ನುವ ವಸ್ತುವನ್ನು ದೇವರು ಎಲ್ಲರಿಗೂ ಹಂಚುತ್ತಾನೆ. ರೈತನು ಹಕ್ಕಿಗಳಿಗೆ, ಧಾನ-ಧರ್ಮ ದಾಸೋಹಕ್ಕೆ ನೀಡುತ್ತಾ ಬಂದಿದ್ದಾನೆ. ಈಗ ಕಮ್ಮಿ ಆಗುತ್ತಲೇ ಇದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಆಶ್ರಮದ ಮಾತೋಶ್ರೀ ಅನುಸೂಯಾ ದೇವಿಯವರು ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಪ್ರವಚನಕಾರರಾಗಿ ಭಕ್ತಿಸಾರ ತಿಳಿಸಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವ ಕಾರ್ಯ ಮಾಡಿದ್ದಾರೆ. ಮಠ-ಮಂದಿರಗಳು ಗುರುಗಳು ನಮಗೆ ಸನ್ಮಾರ್ಗ ತೋರಿಸಿದ್ದಾರೆ. ಆಚಾರ- ವಿಚಾರ ಮನೆಗೆ ನಮಗೆ ತೋರಿಸಿ ಕೊಟ್ಟಿದ್ದಾರೆ. ಮಠ ಮಂದಿರದಲ್ಲಿ ನಮಗೆ ನೆಮ್ಮದಿ ಸಿಗಲಿದೆ ಎಂದರು.

ಆಶ್ರಮದ ಅಧ್ಯಕ್ಷೆ ಅನುಸೂಯಾ ದೇವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಗ್ರಾಮಗಳಿಂದ ಬಂದ ಭಕ್ತರು ಜಾತ್ರೆ ಯಶಸ್ವಿಗೊಳಿಸಿದ್ದಾರೆ ಎಂದರು. ಶಿವಪುತ್ರ ಅವಧೂತರು, ಅಕ್ಕಮಹಾದೇವಿ ತಾಯಿ, ಸಿದ್ದಾಪೂರ ಅಕ್ಕಮಹಾದೇವಿ ತಾಯಿ, ಮಲ್ಲಣ್ಣ ಶಾಸ್ತ್ರಿಗಳು, ಬಸಯ್ಯ ಸ್ವಾಮೀಜಿ, ಕೇದಾರಿಲಿಂಗ ಶರಣರು, ಸಿಶೀಲಕುಮಾರ ಬೆಳಗಲಿ, ಲಕ್ಷ್ಮಣ ಮಹಾರಾಜರು ಮಾತನಾಡಿದರು. ತುಕಾರಾಮ ಹಾಜವಗೋಳ(ಅಧ್ಯಕ್ಷರು), ಜಯಶ್ರೀ ಕುಂಬಾರ (ಉಪಾಧ್ಯಕ್ಷೆ), ಕಲ್ಲಪ್ಪ ಗಿರಡ್ಡಿ, ರಮೇಶ ಕಲಶೆಟ್ಟಿ, ಬಸಗೌಡ ಬಿರಾದಾರ, ಡಾ.ಎಸ್.ಎಸ್.ಬಾಲಪ್ಪನವರ, ಅಶೋಕ ಜನಗೌಡ (ಪಿಡಿಒ) ಸೇರಿ ತುಬಚಿ ಸುರೇಶಗೌಡ ಪಾಟೀಲ, ಗ್ರಾಮಸ್ಥರು, ಗ್ರಾಪಂ ಸದಸ್ಯರು, ಸಂಘದ ಸದಸ್ಯರುಗಳು ಇದ್ದರು.