ವಿದ್ಯಾರ್ಥಿಗಳು ಓದುವ ಹವ್ಯಾಸ, ಕೇಳುವ ಮನೋಭಾವ, ಬರೆಯುವ ಅಭಿಲಾಸೆ, ಮಾತನಾಡುವ ಕಲೆ ರೂಢಿಸಿಕೊಂಡು ಸಮಾಜಕ್ಕೆ ಪೂರಕವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಶಂಕರ ತೇರದಾಳ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ವಿದ್ಯಾರ್ಥಿಗಳು ಓದುವ ಹವ್ಯಾಸ, ಕೇಳುವ ಮನೋಭಾವ, ಬರೆಯುವ ಅಭಿಲಾಸೆ, ಮಾತನಾಡುವ ಕಲೆ ರೂಢಿಸಿಕೊಂಡು ಸಮಾಜಕ್ಕೆ ಪೂರಕವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಶಂಕರ ತೇರದಾಳ ಸಲಹೆ ನೀಡಿದರು.

ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕರ್ನಾಟಕ ಸರ್ಕಾರದ ಗುಪ್ತಚರ ಇಲಾಖೆಯ ಇನ್ಸಪೆಕ್ಟರ್ ಮಲ್ಲಪ್ಪ ಕೌಜಲಗಿ ಮಾತನಾಡಿ, ಪದವಿ ನಂತರ ಸ್ನಾತಕೋತ್ತರ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತೇನೆ ಅಂದರೆ ಆಗಲ್ಲ. ಪಿಯುಸಿ ಹಾಗೂ ಪದವಿ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಗುರಿಯನ್ನು ಮೊದಲೇ ನಿರ್ಧರಿಸಿ ಎಲ್ಲ ವಿಷಯಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಿ ಅಧ್ಯಯನ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಎರಡರಲ್ಲೂ ಸಕ್ರಿಯವಾಗಿ ತೊಡಗಿಕೊಂಡರೆ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಪ್ರಾಸ್ತಾವಿಕವಾಗಿ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿದರು. ಇದೇ ವೇಳೆ ಸೇವಾ ನಿವೃತ್ತಿ ಹೊಂದಿದ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರೊ.ಸಂಜಯ ಖೋತ, ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ಹೊಂದಿದ ಡಾ.ಸುರೇಶ ಚಿತ್ರಗಾರ ಹಾಗೂ ಪಿಎಚ್‌ಡಿ ಪದವಿ ಪಡೆದ ಗ್ರಂಥಪಾಲಕ ಡಾ.ಬಸವಂತ ಬರಗಾಲಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ನೂರಕ್ಕೆ ನೂರು ಅಂಕ ಪಡೆದ ಶಿಕ್ಷಣ ವಿಷಯ ವಿದ್ಯಾರ್ಥಿಗಳನ್ನು, ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದ, ಯುನಿರ್ವಸಿನಿ ಬ್ಲ್ಯೂ ಆದ, ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಿಂದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಿಂದ ಪಿಎಚ್‌ಡಿ ಪದವಿ ಪಡೆದ ಡಾ.ಬಸವಂತ ಬರಗಾಲಿ ಅವರು ತಮ್ಮ ಗ್ರಂಥವನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಚಾರ್ಯರ ಮೂಲಕ ಮಹಾವಿದ್ಯಾಲಯಕ್ಕೆ ಸಮರ್ಪಿಪಿಸಿದರು. .

ಶಿಕ್ಷಣ ಸಂಸ್ಥೆಯ ನಿರ್ದೇಶಕ ಅನೀಲ ಸತರಡ್ಡಿ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರೊ.ಜಿ.ವಿ. ನಾಗರಾಜ, ಉಪಾಧ್ಯಕ್ಷ ಎಸ್.ಸಿ. ಮಂಟೂರ, ಡಾ.ಎಸ್.ಎಸ್. ಹೂಗಾರ, ಪ್ರೊ.ಎ.ಎಸ್. ಮಿಸಿನಾಯಕ, ಪ್ರೊ.ಎಲ್.ಪಿ. ಹಿಡಕಲ್, ಪ್ರೊ.ಸಿದ್ಧರಾಮ ಸವಸುದ್ದಿ, ಸವಿತಾ ಕೊತ್ತಲ, ಪ್ರೀತಿ ಬೆಳಗಲಿ, ಭಾರತಿ ತಳವಾರ, ವೆಂಕಟೇಶ ಪಾಟೀಲ, ರಾಜು ಸಪ್ತಸಾಗರ, ಮನೋಹರ ಲಮಾನಿ, ಬಿ.ಎಸ್. ಕಂಬಾರ, ಅರ್ಜುನ ಗಸ್ತಿ ಇದ್ದರು.