(ಮಿಡಲ್‌) ಓದುವ ಹವ್ಯಾಸ ಬೆಳೆಸಿಕೊಳ್ಳಿ: ಡಾ.ಎಸ್.ಶಂಕರಪ್ಪ

| Published : Nov 07 2024, 12:34 AM IST

ಸಾರಾಂಶ

ಚೆನ್ನಗಿರಿ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ ಅವರು ವಿದ್ಯಾರ್ಥಿಗಳಿಗೆ ಪುಸ್ತಕಗಳ ಕುರಿತು ಪರಿಚಯ ಮಾಡಿದರು.

ಚೆನ್ನಗಿರಿಯಲ್ಲಿ ಫೆ.11ವರೆಗೆ ಓದುವ ಅಂದೋಲನ ಆಯೋಜನೆ ಕನ್ನಡಪ್ರಭ ವಾರ್ತೆ ಚನ್ನಗಿರಿ

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಜೊತೆಗೆ ಕನ್ನಡಭಾಷಾ ಕೌಶಲ್ಯವನ್ನು ಅಭಿವೃದ್ಧಿ ಗೊಳಿಸುವ ಸಲುವಾಗಿ ನ.4 ರಿಂದ 2025ರ ಫೆ.11ನೇ ವರೆಗೆ ಓದುವ ಅಂದೋಲನವನ್ನು ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ ಹೇಳಿದರು.

ತಾಲೂಕಿನ ರಾಜಗೊಂಡನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಯ ಗ್ರಾಪಂ ಗ್ರಂಥಾಲಯದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೆ ಕರೆತಂದು ವಿದ್ಯಾರ್ಥಿಗಳಿಗೆ ಪುಸ್ತಕಗಳ ಪರಿಚಯ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂತಹ ಮಹತ್ವಪೂರ್ಣವಾದ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಪೂರ್ವ ಪ್ರಾಥಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 100 ದಿನಗಳ ಕಾಲ ಓದುವ ಆಂದೋಲನ ನಡೆಸಲು ಉದ್ದೇಶಿಸಿದೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪೂರ್ವ ಪ್ರಾಥಮಿಕ ಶಾಲೆಯಿಂದ 2ನೇ ತರಗತಿಯವರೆಗೆ ಒಂದು ಗುಂಪು, 3ನೇ ತರಗತಿಯಿಂದ 5ನೇ ತರಗತಿಯ ವರೆಗೆ ಮತ್ತು 6ನೇ ತರಗತಿಯಿಂದ 8ನೇ ತರಗತಿಯ ವರೆಗೆ ಒಂದು ಒಟ್ಟು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ ಎಂದರು.

ಈ ಗುಂಪುಗಳಂತೆ ಪ್ರತಿದಿನವು ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕಗಳ ಪರಿಚಯ, ಲೇಖಕರ ಪರಿಚಯ, ಮಕ್ಕಳ ಕುರಿತಂತೆ ಪುಸ್ತಕಗಳ ಮಾಹಿತಿ ಪಡೆಯುವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಉಮೇಶ್ ನಾಯ್ಕ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ, ಕರಿಸಿದ್ದಪ್ಪ, ಗುರುಮೂರ್ತಿ, ಶಾಲಾ ಮುಖ್ಯ ಶಿಕ್ಷಕ ರಾಜಪ್ಪ, ಗ್ರಂಥಪಾಲಕ ಚೇತನ ಸೇರಿ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.