ಸಾರಾಂಶ
ಸದ್ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರವಿ ದಳವಾಯಿ ಸಲಹೆ
ಕನ್ನಡಪ್ರಭ ವಾರ್ತೆ ತರೀಕೆರೆ
ಜ್ಞಾನಾರ್ಜನೆಗಾಗಿ ಸಾಹಿತ್ಯ ಓದುವುದು, ಕೇಳುವುದು ಹಾಗೂ ಹೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರವಿ ದಳವಾಯಿ ಹೇಳಿದ್ದಾರೆ.ಪಟ್ಟಣದ ಸದ್ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ನಡೆದ ಕನ್ನಡ ನುಡಿ ಸಂಭ್ರಮ, 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸುಂದರ ಬರವಣಿಗೆಯ ಭಾಷೆ, ಲಿಪಿಗಳ ಅಂದ ಸೊಗಸು ಇದರ ಅಕಾರಗಳಿಂದ ನಮ್ಮ ಭಾಷೆ ಶಾಶ್ವತವಾಗಿದೆ. ಕನ್ನಡದ ತಳಿರು ತೋರಣಗಳಿಂದ ಶೃಂಗರಿಸಿ, ಪ್ರಕೃತಿ ಅಭಿಮಾನದಿಂದ ಮೂಡಿದ ಶಾಲೆಯಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿಯಂದು ರಾಜ್ಯೋತ್ಸವ ಅಚರಿಸುತ್ತಿರುವುದು ಸಂಭ್ರಮ ತಂದಿದೆ ಎಂದರು.ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು, ಅಂತಹವರ ಪರಿಚಯ ಮಾಡಿರುವುದು ಇದೊಂದು ಹೊಸ ಪರಿಕಲ್ಪನೆಯಾಗಿದೆ ಎಂದು ಹೇಳಿದರು.
ಸದ್ವಿದ್ಯಾ ಪಬ್ಲಿಕ್ ಶಾಲೆ ಪ್ರಾಂಶುಪಾಲರಾದ ಹರ್ಷಿಣಿ ಕುಮಾರ್ ಮಾತನಾಡಿ, ಕನ್ನಡ ಎಂಬುದು ಭಾಷೆ ಅಲ್ಲ, ಅದೊಂದು ನಮ್ಮ ಜೀವನಕ್ರಮ, ನಮ್ಮ ಉಸಿರು.ಅಜರಾಮರ ಇತಿಹಾಸ ಹೊಂದಿರುವುದು ನಮ್ಮ ಭಾಷೆ, ಬಹಳ ಸೊಗಸು ಅಂದ ಮತ್ತು ಚೆಂದ, ಪದ್ಯ ಬರೆಯಲು ಕನ್ನಡವೇ ತುಂಬಾ ಚಂದ ಎಂದು ದ.ರಾ ಬೇಂದ್ರೆ ಅವರು ಹೇಳಿದ್ದಾರೆ, ಈ ರಾಜ್ಯೋತ್ಸವ ಶಾಲೆಯಲ್ಲಿ ಆಯೋಜಿಸಿದ್ದು ಮಹಾನ್ ವ್ಯಕ್ತಿಗಳಿಂದ ಪ್ರೇರಣೆ ಪಡೆಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ನುಡಿದರು.
ಹಿರಿಯ ಗಾಯಕರು, ಕನ್ನಡ ಶ್ರೀ ಬಿ.ಎಸ್.ಭಗವಾನ್ ಅವರು ಮಾತನಾಡಿದರು. ವಿದ್ಯಾರ್ಥಿನಿ ಸೌಖ್ಯ.ಜೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾಹಿತಿ ನೀಡಿದರೆ, ಸನ್ನಿಧಿ ಎಲ್.ಜೆ ಕನ್ನಡದ ಮೊದಲ ಕಾವ್ಯ ಮೊದಲ ನಾಟಕಗಳ ಕುರಿತು ಸಂಪೂರ್ಣ ವಿವರ ನೀಡಿದರು. ಲೇಖಕ ತ.ಮ.ದೇವಾನಂದ್, ಲಕ್ಷ್ಮಿ ಭಗವಾನ್, ಲತಾ ಗೋಪಾಲಕೃಷ್ಣ, ಸುನಿತ ಕಿರಣ್ ಕುಮಾರ್, ಶಿಕ್ಷಕರಾದ ಮಂಜುನಾಥ್, ದರ್ಶನ್, ಮಹಮದ್ ರಾಕೀಬ್, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ತರೀಕೆರೆಯಲ್ಲಿ ಸದ್ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಸದ್ವಿದ್ಯಾ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕಿ ಹರ್ಷಿಣಿ ಕುಮಾರ್, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಇತರರಿದ್ದರು.ತರೀಕೆ