ನೇತಾಜಿ ಬೋಸ್‌ರ ಮನೋಭಾವ ಬೆಳೆಸಿಕೊಳ್ಳಿ: ವಿ.ಎನ್.ರಾಜಶೇಖರ್

| Published : Feb 10 2025, 01:49 AM IST

ಸಾರಾಂಶ

ನೇತಾಜಿ ಸುಭಾಶ್ಚಂದ್ರ ಭೋಸ್ ರವರು ದೇಶ ಸ್ವಾತಂತ್ರ್ಯ ಗೊಳ್ಳುವುದರ ಜೊತೆಗೆ, ಸರ್ವರಿಗೂ ಶಿಕ್ಷಣ ಸಿಗಬೇಕು ಎಂದು ಬಯಸಿದ್ದರು. ಹೀಗಾಗಿ ಅನ್ಯಾಯದ ವಿರುದ್ಧ ಹೋರಾಡುವ ಅವರ ಮನೋಭಾವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಎಐಡಿಎಸ್ಒ ಮಾಜಿ ಅಖಿಲ ಭಾರತ ಅಧ್ಯಕ್ಷ ವಿ.ಎನ್.ರಾಜಶೇಖರ್ ಹೇಳಿದರು.

ನೇತಾಜಿ ಜನ್ಮದಿನ

ಯಾದಗಿರಿ: ನೇತಾಜಿ ಸುಭಾಶ್ಚಂದ್ರ ಭೋಸ್ ರವರು ದೇಶ ಸ್ವಾತಂತ್ರ್ಯ ಗೊಳ್ಳುವುದರ ಜೊತೆಗೆ, ಸರ್ವರಿಗೂ ಶಿಕ್ಷಣ ಸಿಗಬೇಕು ಎಂದು ಬಯಸಿದ್ದರು. ಹೀಗಾಗಿ ಅನ್ಯಾಯದ ವಿರುದ್ಧ ಹೋರಾಡುವ ಅವರ ಮನೋಭಾವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಎಐಡಿಎಸ್ಒ ಮಾಜಿ ಅಖಿಲ ಭಾರತ ಅಧ್ಯಕ್ಷ ವಿ.ಎನ್.ರಾಜಶೇಖರ್ ಹೇಳಿದರು.

ತಾಲೂಕಿನ ಯರಗೋಳ ಗ್ರಾಮದಲ್ಲಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ವತಿಯಿಂದ ನೇತಾಜಿ ಸುಭಾಶ್ಚಂದ್ರ ಬೋಸ್‌ರ 128ನೇ ಜನ್ಮದಿನ ಆಚರಣೆ ವೇಳೆ ಮಾತನಾಡಿದರು.

ಮೊಬೈಲ್ ನೋಡಿ ಬೆಳೆಯುವ ಮಕ್ಕಳಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ವೈಜ್ಞಾನಿಕ, ತರ್ಕಬದ್ಧ ಶಿಕ್ಷಣದಿಂದ ಉನ್ನತ ಚಿಂತನೆಗಳು ಹೊರಹೊಮ್ಮುತ್ತವೆ. ಪ್ರತಿಯೊಬ್ಬರೂ ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ಯರಗೋಳ ಪ್ರಾಢಶಾಲೆಯ ಮುಖ್ಯಗುರು ಚಂದ್ರಪ್ಪ ಗುಂಜನೂರ್ ಮಾತನಾಡಿ, ಮಕ್ಕಳು ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ, ಪಠ್ಯ ಜೊತೆಗೆ ಇಂಥ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಲಹೆ ನೀಡಿದರು.

ಸರ್ವೋದಯ ಶಾಲೆಯ ಮುಖ್ಯೋಪಾಧ್ಯಾಯ ಇಫ್ತಾಕಾರ್ ಅಲಿ ಮಾತನಾಡಿ, ಕ್ರೀಡೆ ಇಲ್ಲದ ಜೀವ ಕೀಟಕ್ಕೆ ಸಮಾನ ಎಂಬ ಮಾತಿದೆ. ಹೀಗಾಗಿ ಕ್ರೀಡೆಯ ಮಹತ್ವ ಅರಿತು ಕ್ರೀಡೆಗಳಲ್ಲಿ ಭಾಗವಹಿಸಿರುವುದು ತುಂಬಾ ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ನೇತಾಜಿ ಯವರ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕ್ರೀಡಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಐಡಿಎಸ್ಒನ ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ., ಜಗನ್ನಾಥ್, ಐಶ್ವರ್ಯ, ದೇವೀಂದ್ರಮ್ಮ ಸ್ವಾಗತಿಸಿದರು. ಕಾವ್ಯ, ಚೈತ್ರ, ಶ್ರವಣಕುಮಾರ, ಎಐಡಿಎಸ್ಒನ ಸದಸ್ಯರಾದ ಶ್ರವಣಕುಮಾರ, ರೆಡ್ದೆಪ್ಪ, ಲಕ್ಷ್ಮಿಕಾಂತ, ನಿಂಗಪ್ಪ, ಕಾವ್ಯ, ಜ್ಯೋತಿ, ಶೋಭಾ, ಭಾಗ್ಯಶ್ರೀ, ದೇವಮ್ಮ, ಅಂಕಿತಾ, ಸುನೀತಾ, ರಂಜಿತಾ, ಮಮತಾ, ವಿಕ್ರಮ್, ವಿನಾಯಕ್ ಇದ್ದರು.