ಪುರಾಣಗಳಿಂದ ಸಂಸ್ಕಾರ, ಜ್ಞಾನ ವೃದ್ಧಿ
KannadaprabhaNewsNetwork | Published : Oct 19 2023, 12:45 AM IST / Updated: Oct 19 2023, 12:46 AM IST
ಪುರಾಣಗಳಿಂದ ಸಂಸ್ಕಾರ, ಜ್ಞಾನ ವೃದ್ಧಿ
ಸಾರಾಂಶ
ಕನ್ನಡಪ್ರಭ ವಾರ್ತೆ ರೋಣಪುರಾಣಗಳಿಂದ ಜನರಲ್ಲಿ ಸಂಸ್ಕಾರ, ಸಂಸ್ಕೃತಿ, ಜ್ಞಾನ ವೃದ್ಧಿಯಾಗುತ್ತದೆ. ಮನುಷ್ಯ ಯಾವಾಗಲು ಪುರಾಣಗಳನ್ನು ಕೇಳುತ್ತಿರಬೇಕು ಇದರಿಂದ ಆಧ್ಯಾತ್ಮಕ ಅನುಭವವಾಗುತ್ತದೆ ಎಂದು ಬಸವಂತಪ್ಪ.ಎಚ್. ತಳವಾರ ಹೇಳಿದರು.ತಾಲೂಕಿನ ಹುನಗುಂಡಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ೮೭ನೇ ವರ್ಷದ ಆದಿಶಕ್ತಿ ಶ್ರೀದೇವಮ್ಮನ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಇನ್ನು ನೀರಿಕ್ಷಿತ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಆಗದೇ ಇರುವುದು ನೋವಿನ ಸಂಗತಿ. ಶಿಕ್ಷಣದಿಂದ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ.ಆದ್ದರಿಂದ ಪಾಲಕರು ಕಡ್ಡಾಯವಾಗಿ ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಯಿಸುವುದರ ಮೂಲಕ ಅವರನ್ನು ಸಾಕ್ಷರನ್ನಾಗಿ ಮಾಡಬೇಕು.ಅರಿಷ್ಟ ವರ್ಗಗಳನ್ನು ತಿಳಿಸುವ ದೇವಿ ಪುರಾಣವು ಮಾನವನ ದೇಹದ ಪುರಾಣವಾಗಿದೆ. ಈ ಪುರಾಣವನ್ನು ಶ್ರದ್ಧಾ-ಭಕ್ತಿಯಿಂದ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ರೋಣ ಪುರಾಣಗಳಿಂದ ಜನರಲ್ಲಿ ಸಂಸ್ಕಾರ, ಸಂಸ್ಕೃತಿ, ಜ್ಞಾನ ವೃದ್ಧಿಯಾಗುತ್ತದೆ. ಮನುಷ್ಯ ಯಾವಾಗಲು ಪುರಾಣಗಳನ್ನು ಕೇಳುತ್ತಿರಬೇಕು ಇದರಿಂದ ಆಧ್ಯಾತ್ಮಕ ಅನುಭವವಾಗುತ್ತದೆ ಎಂದು ಬಸವಂತಪ್ಪ.ಎಚ್. ತಳವಾರ ಹೇಳಿದರು. ತಾಲೂಕಿನ ಹುನಗುಂಡಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ೮೭ನೇ ವರ್ಷದ ಆದಿಶಕ್ತಿ ಶ್ರೀದೇವಮ್ಮನ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಇನ್ನು ನೀರಿಕ್ಷಿತ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಆಗದೇ ಇರುವುದು ನೋವಿನ ಸಂಗತಿ. ಶಿಕ್ಷಣದಿಂದ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ.ಆದ್ದರಿಂದ ಪಾಲಕರು ಕಡ್ಡಾಯವಾಗಿ ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಯಿಸುವುದರ ಮೂಲಕ ಅವರನ್ನು ಸಾಕ್ಷರನ್ನಾಗಿ ಮಾಡಬೇಕು.ಅರಿಷ್ಟ ವರ್ಗಗಳನ್ನು ತಿಳಿಸುವ ದೇವಿ ಪುರಾಣವು ಮಾನವನ ದೇಹದ ಪುರಾಣವಾಗಿದೆ. ಈ ಪುರಾಣವನ್ನು ಶ್ರದ್ಧಾ-ಭಕ್ತಿಯಿಂದ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಆದಿಶಕ್ತಿ ಸಮುದಾಯ ಭವನಕ್ಕೆ ಬಸವಂತಪ್ಪ ₹೧೦ ಸಾವಿರ ದೇಣಿಗೆ ನೀಡಿದರು.ಎಸ್.ವೈ. ಮಂಡಸೊಪ್ಪಿ ಮಾತನಾಡಿದರು. ಕಲ್ಲಯ್ಯಮಠದ ಪ್ರವಚನಕಾರ ಷಡಕ್ಷರಯ್ಯ.ಶಿ. ಸಾಲಿಮಠ ಶಾಸ್ತ್ರೀ, ಹಾರ್ಮೋನಿಯಂ ವಿನೋದ ಸಾಲೀಮಠ, ತಬಲಾ ಸಾಥ ಶೇಖಪ್ಪ ಹೂಗಾರ, ರಾಚಯ್ಯ ಹಿರೇಮಠ, ಸಂಗನಗೌಡ ದೊಡ್ಡಗೌಡ್ರ, ಗಂಗಾಧರ ಮಂಡಸೊಪ್ಪಿ, ಅಮರಪ್ಪಗೌಡ ಗೌಡರ, ಶಿವನಪ್ಪ ಮಂಡಸೊಪ್ಪಿ, ಭೀಮಪ್ಪ ಗೂಳಪ್ಪನವರ, ಎಸ್.ಎಚ್. ಮಂಡಸೊಪ್ಪಿ, ಎ.ಬಿ. ಮಂಡಸೊಪ್ಪಿ, ಎನ್.ಬಿ. ಸೋಮನಕಟ್ಟಿ, ಎಸ್.ಆರ್. ರೇಷ್ಮಿ, ಶಿವಾಜಿ ಮಂಡಸೊಪ್ಪಿ, ಜಿ.ಕೆ. ಅಂಗಡಿ, ಸಿ.ಕೆ. ಅಂಗಡಿ, ಬಸವಂತಪ್ಪ ಬಂದಕೇರಿ, ಬಿ.ಎಸ್.ವಸ್ತ್ರದ, ಎಚ್.ವಿ.ಮುದೇನಗುಡಿ, ಎಂ.ಎಚ್.ಜಂತ್ಲಿ ಸೇರಿ ಮುಂತಾದವರು ಇದ್ದರು.