ಬಗರ್‌ ಹುಕುಂ ಆಪ್‌ ಮೂಲಕ ಸಾಗುವಳಿ ಮಂಜೂರು

| Published : Jul 12 2024, 01:30 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಆಪ್‌ ಮೂಲಕ ಮಂಜೂರಾದ ಸಾಗುವಳಿ ವೀಕ್ಷಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಗರ್‌ ಹುಕುಂ ಆಪ್‌ ಮೂಲಕ ತಾಲೂಕಿನ ೧೫ ಮಂದಿ ರೈತರಿಗೆ ಸರ್ಕಾರಿ ಜಮೀನು ಮಂಜೂರು ಮಾಡುವ ಮೂಲಕ ರಾಜ್ಯದಲ್ಲೇ ೨ ನೇ ಸ್ಥಾನದಲ್ಲಿ ಗುಂಡ್ಲುಪೇಟೆ ಎಂದು ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ನಡೆದ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಮಾತನಾಡಿ, ಸಾಗುವಳಿ ಮಂಜೂರು ಮಾಡುವಲ್ಲಿ ರಾಜ್ಯದ ಪುತ್ತೂರು ಬಿಟ್ಟರೆ ಗುಂಡ್ಲುಪೇಟೆ ಎಂದು ಹೇಳಿದರು. ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಪುತ್ತೂರು ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮಾತ್ರ ಸಾಗುವಳಿ ಮಂಜೂರು ಮಾಡಿದೆ. ಆದರೆ ೨೨೨ ಕ್ಷೇತ್ರದಲ್ಲಿ ಅಕ್ರಮ-ಸಕಮ್ರ ಸಮಿತಿಯಲ್ಲಿ ಸರ್ಕಾರಿ ಭೂಮಿಯನ್ನು ಬಗರ್‌ ಹುಕುಂ ಆಪ್‌ ಮೂಲಕ ಜಮೀನು ಮಂಜೂರಾಗಿಲ್ಲ ಎಂದರು. ಬಗರ್‌ ಹುಕುಂ ಮೊಬೈಲ್‌ ಆಪ್‌ ನಲ್ಲಿ ಇರುವ ತಾಂತ್ರಿಕ ಸಮಸ್ಯೆ ಬಗೆಹರಿದ ಬಳಿಕ ಮುಂದಿನ ತಿಂಗಳು ಮತ್ತೊಂದು ಸಭೆ ನಡೆಸಿ ಸಾಗುವಳಿ ಮಂಜೂರು ಮಾಡಲಾಗುವುದು ಎಂದರು.

ಮೊಬೈಲ್‌ ಆಪ್‌ ಮೂಲಕ ಸಾಗುವಳಿ ಮಂಜೂರಾಗಿ ನೋಟೀಸ್‌ ಅವಧಿ ೧೫ ದಿನಗಳ ಬಳಿಕ ಎಡಿಎಲ್‌ಆರ್‌ ಲಾಗಿನ್‌ಗೆ ಮಂಜೂರು ಕಡತ ವರ್ಗಾವಣೆಗೊಳ್ಳುತ್ತದೆ. ಬಳಿಕ ಹಿರಿತನದ ಪ್ರಕಾರ ದುರಸ್ಥಿಗೊಳಿಸಿ, ಹೊಸ ನಂಬರ್‌ ನೀಡಿದ ಬಳಿಕ ಸಮಿತಿ ಸದಸ್ಯ ಕಾರ್ಯದರ್ಶಿ ತಹಸೀಲ್ದಾರ್‌ ಲಾಗಿನ್‌ಗೆ ಬಂದ ನಂತರ ದಂಡ ಪಾವತಿಸಲು ಸಾಗುವಳಿದಾರರಿಗೆ ಚಲನ್‌ ನೀಡಲಾಗುತ್ತದೆ. ಸಾಗುವಳಿ ಬ್ಯಾಂಕ್‌ ನಲ್ಲಿ ದಂಡ ಪಾವತಿಸಿದ ದಂಡದ ಚಲನ್‌ ಬಗರ್‌ ಹುಕುಂ ಆಪ್‌ ಸ್ಕ್ಯಾನ್‌ ಬಳಿಕ ಸಾಗುವಳಿ ಚೀಟಿ ಬರಲಿದೆ ಎಂದರು.

ಸಾಗುವಳಿ ಚೀಟಿಗೆ ಇ ಸೈನ್‌ ಮಾಡಿ, ಮೂರು ಸಾಗುವಳಿ ಚೀಟಿ ತಯಾರಿಸಿ, 1 ಮಂಜೂರಿದಾರರಿಗೆ, ೨ನೇಯದು ನೋಂದಣಿಗೆ ಸಬ್‌ ರಿಜಿಸ್ಟರ್‌ಗೆ ೩ ನೇ ಸಾಗುವಳಿ ಕಚೇರಿ ಕಡತಕ್ಕೆ ಇರಲಿದೆ ಎಂದರು. ಸಾಗುವಳಿ ಚೀಟಿ ನೋಂದಣಿಯಾದ ಬಳಿಕ ೧೦ ದಿನಗಳೊಳಗೆ ಸಾಗುವಳಿ ದಾರರಿಗೆ ಖಾತೆ ಆಗಲಿದ್ದು, ಈ ತಂತ್ರಾಂಶದಿಂದ ದುರಸ್ಥಿಗೆ ಸಾಗುವಳಿದಾರರು ದುರಸ್ಥಿಗೆ ಅಲೆಯುವುದು ತಪ್ಪುತ್ತದೆ ಎಂದರು. ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಪಿ.ಮಹದೇವಪ್ಪ, ಹಂಗಳ ನಾಗರಾಜು, ಕಲಾವತಿ ಮಹೇಶ್‌ ಹಾಗೂ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಕಾರ್ಯದರ್ಶಿ, ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಹಾಗೂ ಭೂಮಿ ಸಮಾಲೋಚಕ ರಾಜೇಂದ್ರ ನಾಯಕ್‌, ಕಂದಾಯ ನಿರೀಕ್ಷಕರಾದ ಮನೋಹರ್‌, ರಾಜ್‌ ಕುಮಾರ್‌, ನಾಗೇಂದ್ರ, ಸಿ.ಮಹದೇವಪ್ಪ, ಉಪ ತಹಸೀಲ್ದಾರ್‌ ನಂದಿನಿ, ಪ್ರಕಾಶ್‌, ಭೂ ಮಂಜೂರಾತಿ ಶಿರಸ್ತೇದಾರ್‌ ಸಿದ್ದರಾಜು, ವಿಷಯ ನಿರ್ವಾಹಕ ಮಹದೇವಯ್ಯ ಹಾಗೂ ಕಂದಾಯ ಗ್ರಾಮ ಆಡಳಿತ ಅಧಿಕಾರಿಗಳಿದ್ದರು. ಇದ್ದರು.