ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಮೊದಲ ದಿನ ಕೊಳ್ಳೇಗಾಲ ವೀರಶೈವ ಮಹಿಳಾ ವೇದಿಕೆ ಅಕ್ಕನ ಬಳಗದ ವತಿಯಿಂದ ಅನುಭವ ಮಂಟಪ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.ಜಗದಾಂಬ ಸದಾಶಿವಮೂರ್ತಿ, ವಾಣಿ ರಮೇಶ್, ನಾಗವೇಣಿ ನಾಗಣ್ಣ, ಪ್ರಮೀಳಾ, ಚಂಪ, ರುದ್ರಾಂಬ, ಕೋಮಲ, ಸುನಂದ, ಶ್ವೇತಾ, ಅರುಣ ಕಾರ್ತಿಕ್, ಕಾತ್ಯಾಯಿನಿ, ಸ್ವರ್ಣಲತಾ, ಪನ್ನಗವೇಣಿ, ಲೀಲಾ ಅವರು ವಿವಿಧ ಶರಣರ ಪಾತ್ರಗಳಲ್ಲಿ ನಟಿಸಿದರು.ನಾಟಕದ ನಿರ್ವಹಣೆಯನ್ನುಗೀತಾ ಶಿವಾನಂದ್ ನಡೆಸಿಕೊಟ್ಟರು. ಈ ವೇಳೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ರೂಪಾ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಮತ್ತು ಉಪಾಧ್ಯಕ್ಷ ಶಿವಪುರ ಉಮಾಪತಿ ಇದ್ದರು.ದಾಸೋಹಕ್ಕೆ ಸುತ್ತೂರು ಶ್ರೀಗಳ ಚಾಲನೆಫೋಟೋ 25 ಎಂವೈಎಸ್ 67----ಸುತ್ತೂರಿನಲ್ಲಿ ನಡೆಯುತ್ತಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ದಾಸೋಹ ಕಾರ್ಯಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಶನಿವಾರ ಚಾಲನೆ ನೀಡಿದರು. ಜ.31 ರವರೆಗೆ ಜಾತ್ರೆ ಜರುಗಲಿದ್ದು, ಈ ಅವಧಿಯಲ್ಲಿ ಸುಮಾರು 10 ಲಕ್ಷ ಮಂದಿಗೆ ದಾಸೋಹ ಏರ್ಪಡಿಸಲಾಗುತ್ತದೆ.