ನ್ಯಾಮತಿ ಬಾಲಕಿಯರ ಶಾಲೆಯಲ್ಲಿ ಸಾಂಸ್ಕೃತಿಕ ಹಬ್ಬ, ಸನ್ಮಾನ ಸಮಾರಂಭ

| Published : Feb 27 2024, 01:30 AM IST

ಸಾರಾಂಶ

ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲಾ ಕಟ್ಟಡಕ್ಕಾಗಿ ಈ ಹಿಂದೆ ನಿವೇಶನ ದಾನ ಮಾಡಿರುವ ಜಿ.ವೀರಪ್ಪನವರ ಪುತ್ರ ನಾಗರಾಜಪ್ಪ, ಸಣ್ಣ ಶೇಖರಪ್ಪನವರ ಪುತ್ರ ಗಣೇಶಪ್ಪ, ಜಿ.ಗುರುಲಿಂಗಪ್ಪನವರ ಮಗ ಜಿ.ಶಿವರುದ್ರಪ್ಪ, ಈಶ್ವರಪ್ಪನವರ ಮೊಮ್ಮಗನಾದ ಹಾಲೇಶಪ್ಪ, ಶೇಖರಪ್ಪನವರ ಮಗ ಜಿ.ಸಿದ್ದಪ್ಪ ಕುಟುಂಬ ವರ್ಗದವರ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ನ್ಯಾಮತಿ

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಾಂಸ್ಕೃತಿಕ ಹಬ್ಬ, ಸ್ಮಾರ್ಟ್ ಕ್ಲಾಸ್‌ ಮತ್ತು ಶಾಲಾ ಕಟ್ಟಡಕ್ಕಾಗಿ ಭೂಮಿ ನೀಡಿದ ಕುಟುಂಬ ವರ್ಗದವರಿಗೆ ಸನ್ಮಾನ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿನಿಯರಾದ ಶಾರದಾ ಸ್ಮಾರ್ಟ್ ಕ್ಲಾಸ್‌ಗೆ ಸಂಬಂಧಿಸಿದ ಸಲಕರಣೆ ಕೊಡುಗೆಯಾಗಿ ನೀಡಿದರು. 1996ರಲ್ಲಿ ಓದಿದ ಹಳೆಯ ವಿದ್ಯಾರ್ಥಿನಿಯರು 2024-25ನೇ ಸಾಲಿನಲ್ಲಿ ಆರಂಭವಾಗುತ್ತಿರುವ ಎಲ್‌ಕೆಜಿ, ಯುಕೆಜಿಗೆ ಬೇಕಾಗುವ ಪೀಠೋಪಕರಣಗಳ ಒದಗಿಸುವ ಭರವಸೆ ನೀಡಿದರು. ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲಾ ಕಟ್ಟಡಕ್ಕಾಗಿ ಈ ಹಿಂದೆ ನಿವೇಶನ ದಾನ ಮಾಡಿರುವ ಜಿ.ವೀರಪ್ಪನವರ ಪುತ್ರ ನಾಗರಾಜಪ್ಪ, ಸಣ್ಣ ಶೇಖರಪ್ಪನವರ ಪುತ್ರ ಗಣೇಶಪ್ಪ, ಜಿ.ಗುರುಲಿಂಗಪ್ಪನವರ ಮಗ ಜಿ.ಶಿವರುದ್ರಪ್ಪ, ಈಶ್ವರಪ್ಪನವರ ಮೊಮ್ಮಗನಾದ ಹಾಲೇಶಪ್ಪ, ಶೇಖರಪ್ಪನವರ ಮಗ ಜಿ.ಸಿದ್ದಪ್ಪ ಕುಟುಂಬ ವರ್ಗದವರ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಂತಾಕುಮಾರಿ ವಹಿಸಿದ್ದರು. ಉದ್ಘಾಟನೆಯ ವಿನೋದ್‌ಕುಮಾರ್‌ ನೆರವೇರಿಸಿದರು. ಶಿಕ್ಷಕಿ ಚೈತ್ರಾ, ಸಾವಿತ್ರಮ್ಮ, ಸವಿತಾ, ಸುಮನಾಕುಮಾರಿ, ಎಂ.ರಾಜಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಶಾರದಾ ಪತಿ ವಿನೋದಕುಮಾರ್‌ ಹಾಗೂ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಲೋಕೇಶ್ವರಪ್ಪನವರ ಸನ್ಮಾನಿಸಲಾಯಿತು. ಲತಾ ಪ್ರಕಾಶ್‌, ಆರ್‌.ಶೋಭಾ, ರೇಖಾ, ಹಾಲಾಂಬಿಕೆ, ಲೀಲಾವತಿ, ಯಶೋಧ, ಸುರೇಖಾ, ಮೀನಾಕ್ಷಮ್ಮ, ಅನಿಲ್‌ಕುಮಾರಿ, ಹಳೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಶಿಕ್ಷಕ ವೃಂದ, ಗ್ರಾಮಸ್ಥರು ಭಾಗವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.