ಸಾರಾಂಶ
ಸಂಸ್ಕೃತಿಯಿಂದ ಸಾಮಾಜಿಕ ಮತ್ತು ವಾಸ್ತವಿಕತೆ ಬದುಕು ಅರಿತುಕೊಂಡಿರುವ ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳಿಂದ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಶ್ರೀಮಂತ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ನೆಲಮೂಲ ಸಂಸ್ಕೃತಿಯಿಂದ ಸಾಮಾಜಿಕ ಮತ್ತು ವಾಸ್ತವಿಕತೆ ಬದುಕು ಅರಿತುಕೊಂಡಿರುವ ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳಿಂದ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಶ್ರೀಮಂತವಾಗುತ್ತದೆ ಎಂದು ಸಂಶೋಧಕ ಚಂದ್ರಶೇಖರ ಕಾಳನ್ನವರ ಹೇಳಿದರು.ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಸಮಾರೋಪದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಗುಳೇದಗುಡ್ಡ ಪರಿಸರದ ಸಾಹಿತಿಗಳು ಕುರಿತು ಉಪನ್ಯಾಸ ನೀಡಿದರು.
ಗುಳೇದಗುಡ್ಡ ಪರಿಸರದಲ್ಲಿ ಕಲೆ, ಸಂಗೀತ, ಜಾನಪದ, ರಂಗಭೂಮಿ, ವೈಚಾರಿಕ, ವಿಮರ್ಶೆ, ಸಂಶೋಧನೆ, ಸಂಪಾದನೆ, ಸೃಜನ ಮತ್ತು ಸೃಜನೇತರ ಸಾಹಿತ್ಯ ಕೃಷಿ ಬೆಳೆದು ಬರುತ್ತಿದೆ. ಪ್ರಮುಖವಾಗಿ ಮುರಗಿ ಶ್ರೀಗಳು, ಕಂದಗಲ್ ಹನಮಂತರಾಯ, ಕಾಶಿ ಜಗದ್ಗುರುಗಳಾದ ಚಂದ್ರಶೇಖರ ಶಿವಾಚಾರ್ಯರು, ಎಚ್.ಆರ್.ಭಸ್ಮೆ, ಮಲ್ಲಿಕಾರ್ಜುನ ಬನ್ನಿ, ಮಹಾದೇವ ಕಣವಿ, ಮಲ್ಲಿಕಾ ಘಂಟಿ, ಭೀಮನಗೌಡ ಪಾಟೀಲ, ಸಿ.ಎಂ.ಜೋಶಿ, ಅಶೋಕ ಹೆಗಡೆ, ಪ್ರೊ.ರಾಜಶೇಖರ ಬಸುಪಟ್ಟದ, ಪ್ರೊ.ಮಲ್ಲಿಕಾರ್ಜುನ ಮೇಟಿ, ಸಂಗಮೇಶ ಕಲ್ಯಾಣಿ, ಶಿವರುದ್ರಪ್ಪ ಬೆಕನಾಳ, ಗುರುನಾಥ ಬಡಿಗೇರ, ಎಚ್.ಎಸ್.ಘಂಟಿ, ಪ್ರೊ.ರುದ್ರೇಶ ಮೇಟಿ, ಸಂತೋಷ ಕಾಳನ್ನವರ, ಚಂದ್ರಶೇಖರ ಹೆಗಡೆ ಮುಂತಾದ ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳಿಂದ ಗುಳೇದಗುಡ್ಡ ಪರಿಸರ ಶ್ರೀಮಂತಗೊಳಿಸಿದ್ದಾರೆ ಎಂದರು.ಪ್ರಾಚಾರ್ಯ ಪ್ರೊ.ಫಕ್ಕೀರಪ್ಪ ಚೆನ್ನಪ್ಪಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಳೇದಗುಡ್ಡ ಪರಿಸರದ ಸಾಹಿತ್ಯಕ್ಕೆ ಗಟ್ಟಿತನವಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಇಲ್ಲಿನ ಸಾಹಿತಿಗಳು ಕೃತಿಗಳನ್ನು ರಚಿಸಿದ್ದಾರೆ. ನಮ್ಮ ಸುತ್ತಮುತ್ತಲಿರುವ ಸಾಹಿತಿಗಳ ಸಾಹಿತ್ಯ ಕೃತಿಗಳನ್ನು ಓದುವ ಪರಂಪರೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ತಾಲೂಕ ಕಸಾಪ ಅಧ್ಯಕ್ಷ ಎಚ್.ಎಸ್.ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ರಮೇಶ ಹುಲ್ಲೂರು ಸ್ವಾಗತಿಸಿ, ಪ್ರೊ.ಮಠಪತಿ ನಿರೂಪಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.