ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ನಗರ ಪ್ರದೇಶದ ಜನರಿಗೆ ಸಿಗುವ ಸೌಕರ್ಯಗಳು ಗ್ರಾಮೀಣ ಭಾಗದ ಜನರಿಗೆ ದೊರೆಯಬೇಕೆಂಬ ನಿಟ್ಟಿನಲ್ಲಿ ಕುಂದರನಾಡಿನ ಪಾಶ್ಚಾಪುರ ಭಾಗದಲ್ಲಿ ಮಾಧುರಿ ಕಲ್ಯಾಣ ಮಂಟಪ ಆರಂಭಿಸಿರುವ ಕಾರ್ಯ ಸ್ತುತ್ಯಾರ್ಹವಾದದು ಎಂದು ಗದಗ-ಡಂಬಳ-ಎಡೆಯೂರು ತೊಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.ಗುರುವಾರ ಪಾಶ್ಚಾಪುರ ರುಸ್ತುಂಪುರದಲ್ಲಿ ನೂತನವಾಗಿ ನಿರ್ಮಿಸಿರುವ ಮಾಧುರಿ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿ, ಈ ಕಲ್ಯಾಣ ಮಂಟಪ ಕೇವಲ ಮದುವೆ ಕಾರ್ಯಗಳಿಗೆ ಮೀಸಲಿಡದೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ನಡೆಯಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನರಲ್ಲಿ ಸಂಸ್ಕಾರ, ಸಂಸ್ಕೃತಿ ಬಿತ್ತಲು ಸಾಧ್ಯ. ಮನುಷ್ಯ ಹುಟ್ಟಿದ ಮೇಲೆ ತಂದೆ ತಾಯಿ ಋಣ, ಗುರುವಿನ ಋಣ, ಸಮಾಜದ ಋಣ ತೀರಿಸಬೇಕಾಗುತ್ತದೆ. ಉಮನಾಬಾದಿಮಠ ಬಂಧುಗಳು ಈ ಋಣಗಳು ತೀರಿಸಿದ್ದಾರೆ ಎಂದು ಹೇಳಿದರು.
ಬೆಳಗಾವಿ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಆರ್ಶಿವಚನ ನೀಡಿ ಉಮನಾಬಾದಿಮಠ ಬಂಧುಗಳು ಧಾರ್ಮಿಕವಾಗಿ ಸಾಮಾಜಿಕವಾಗಿ ವೈದ್ಯಕೀಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ ಅನನ್ಯವಾದದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಈ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳು ಒಳಗೊಂಡಿರುವ ಈ ಮಾಧುರಿ ಕಲ್ಯಾಣ ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿದರು. ಯುವಧುರೀಣ ರಾಹುಲ್ ಜಾರಕಿಹೊಳಿ, ಅಂಕಲಗಿ-ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ, ಮೂಲೆಗದ್ದೆ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ವಿಶ್ವಾರಾಧ್ಯ ಶಿವಾಚಾರ್ಯರು, ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ, ಆಲಂಖಾನ ದೇಸಾಯಿ, ಹಿರಿಯ ಸಾಹಿತಿಗಳಾದ ಎಸ್.ಎಂ. ಶಿರೂರ, ಹುಕ್ಕೇರಿ ಸಿಪಿಐ ಮಹಾಂತೇಶ ಬಸ್ಸಾಪೂರಿ, ಶಿವಾನಂದ ಪುರಾಣಿಕಮಠ ಇದ್ದರು. ಡಾ.ಅಶೋಕ ಉಮನಾಬಾದಿಮಠ, ವಿದ್ಯಾ ಉಮನಾಬಾದಿಮಠ, ಅಮರ ಉಮನಾಬಾದಿಮಠ, ಡಾ.ಕಾವೇರಿ ಉಮನಾಬಾದಿಮಠ, ಪುರಾಣಿಕಮಠ ಹಿರೇಮಠ ಸ್ವಾಮಿ ಉಮನಾಬಾದಿಮಠ ಬಂಧುಗಳು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಇದ್ದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ ಬೇಟಿ ನೀಡಿ ಈ ಭಾಗದಲ್ಲಿ ಮಾಧುರಿ ಕಲ್ಯಾಣ ಮಂಟಪ ಆರಂಭವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಿಥುನ ಅಂಕಲಗಿ ನಿರೂಪಿಸಿದರು.