ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹೇರೋಹಳ್ಳಿಯ ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ಸಂಕ್ರಾಂತಿ ಸಂಭ್ರಮ’, ಬಾಗಲಗುಂಟೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಭಾರತದ ಏಕೀಕರಣ ಮತ್ತು ನವಭಾರತ’ ನೃತ್ಯ ರೂಪಕ ಪ್ರದರ್ಶಿಸಲಾಯಿತು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹೇರೋಹಳ್ಳಿಯ ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ಸಂಕ್ರಾಂತಿ ಸಂಭ್ರಮ’, ಬಾಗಲಗುಂಟೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಭಾರತದ ಏಕೀಕರಣ ಮತ್ತು ನವಭಾರತ’ ನೃತ್ಯ ರೂಪಕ ಪ್ರದರ್ಶಿಸಲಾಯಿತು.

ಈ ಬಾರಿ 150 ವರ್ಷಗಳ ಇತಿಹಾಸ ಹೊಂದಿರುವ ಪೊಲೀಸ್‌ ಇಲಾಖೆಯ ಕರ್ನಾಟಕ ಪೊಲೀಸ್‌ ಸಾಮೂಹಿಕ ವಾದ್ಯಮೇಳ ಪ್ರಮುಖ ಆಕರ್ಷಣೆಯಾಗಿತ್ತು. 1868ರಲ್ಲಿ ಮೈಸೂರು ಸಂಸ್ಥಾನದ ಚಾಮರಾಜೇಂದ್ರ ಒಡೆಯರ್‌ ಅವರು ಅರಮನೆ ವಾದ್ಯವೃಂದ ಸ್ಥಾಪಿಸಿದ್ದರು. ಆನಂತರ ಅದನ್ನು ಇಂಡಿಯನ್‌ ಆರ್ಕಾ ಮತ್ತು ಇಂಗ್ಲಿಷ್‌ ಬ್ಯಾಂಡ್‌ ಆಗಿ ಪರಿವರ್ತಿಸಲಾಗಿತ್ತು. ಈಗ ಆ ತಂಡವು ಪೊಲೀಸ್ ವಾದ್ಯಮೇಳವಾಗಿ ಪರಿವರ್ತನೆ ಗೊಂಡಿದೆ. ಈ ವಾದ್ಯಮೇಳದ 185 ವಾದ್ಯಮೇಳದ ಪೊಲೀಸ್‌ ಸಿಬ್ಬಂದಿ ಕನ್ನಡ ಮತ್ತು ಇಂಗ್ಲಿಷ್‌ ಗೀತೆಗಳ ಸಮ್ಮಿಶ್ರ ಗೀತೆಗಳನ್ನು ನುಡಿಸುವ ಮೂಲಕ ರಂಜಿಸಿದರು. ಅದರ ಜತೆಗೆ ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತವನ್ನೂ ನುಡಿಸಿದರು.

ಶಿಸ್ತಿನ ಪಥಸಂಚಲನ: ಗಣರಾಜ್ಯೋತ್ಸವ ಅಂಗವಾಗಿ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ 30 ತುಕಡಿಗಳು ಮತ್ತು 7 ಬ್ಯಾಂಡ್‌ ತಂಡಗಳು ಶಿಸ್ತಿನ ಪಥಸಂಚಲನ ನಡೆಸಿದರು. ಎಲ್ಲ 37 ತುಕಡಿಗಳ 1,300ಕ್ಕೂ ಹೆಚ್ಚು ಮಂದಿ ಕವಾಯತಿನಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ತಮಿಳುನಾಡು ಪೊಲೀಸ್‌ ತಂಡ ಕವಾಯತಿನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

100ಕ್ಕೂ ಹೆಚ್ಚು ಸಿಸಿಕ್ಯಾಮೆರಾ

2 ಸಾವಿರಕ್ಕೂ ಹೆಚ್ಚು ಪೊಲೀಸರು

ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಿಸಲು 10 ಸಾವಿರಕ್ಕೂ ಹೆಚ್ಚಿನ ಆಸನದ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಗಾಗಿಯೇ 3,200 ಆಸನಗಳನ್ನು ನಿಗದಿ ಮಾಡಲಾಗಿತ್ತು. ಇನ್ನು, ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. 2 ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನೇಮಿಸಲಾಗಿತ್ತು. ಮೈದಾನದ ಸುತ್ತಲು 100ಕ್ಕೂ ಹೆಚ್ಚಿನ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.

ಅಧಿಕಾರಿಗಳಿಗಿನ್ನೂ ಬಿಬಿಎಂಪಿ ಗುಂಗು:

ಬೆಂಗಳೂರಿನಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಲಾಗಿದೆ. ಆದರೆ, ಜಿಬಿಎ ಅಧಿಕಾರಿಗಳು ಇನ್ನೂ ಬಿಬಿಎಂಪಿ ಗುಂಗಿನಲ್ಲೇ ಇದ್ದಂತಿದ್ದಾರೆ. ಮಾಣಿಕ್‌ ಶಾ ಪರೇಡ್‌ ಮೈದಾನದ ದ್ವಾರದಲ್ಲಿ ಹಾಕಲಾಗಿದ್ದ ಕಮಾನಿನಲ್ಲಿ ಜಿಬಿಎ ಬದಲಿಗೆ ಬಿಬಿಎಂಪಿ ಎಂದು ಬಳಸಲಾಗಿತ್ತು.