ಸಾರಾಂಶ
ಕಾಳಿದಾಸ ಉತ್ಸವದಲ್ಲಿ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯದು. ಸಮಾಜದಲ್ಲಿ ನಮ್ಮ ನಮ್ಮ ಕೆಲಸವನ್ನು ನಿಷ್ಠೆಯಿಮದ ಮಾಡಬೇಕು.
ಕನ್ನಡಪ್ರಭ ವಾರ್ತೆ ಬಾದಾಮಿ
ಸಂತರು, ಶರಣರು ಕಟ್ಟಿದ ನಮ್ಮ ನಾಡು ದಾಸ ಸಾಹಿತ್ಯ, ವಚನ ಸಾಹಿತ್ಯದ ಶಾಂತೀಯ ಬೀಡು. ಪ್ರಗತಿಪರ ನಾಡು. ಉತ್ಸವದ ಮೂಲಕ ಯುವಕರಿಗೆ ಸಂಸ್ಕಾರ ನೀಡಬೇಕಾಗಿದೆ. ಮುಂದಿನ ಪೀಳಿಗೆಗೆ ಪ್ರೇರಣದಾಯಕವಾಗುತ್ತದೆ. ಪ್ರಗತಿಕರ ರಾಜ್ಯವಾಗಲು ಪ್ರಮಾಣಿಕ ಪ್ರಯತ್ನ ಮಾಡೋಣ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.ನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಶ್ರೀ ಕಾಳಿದಾಸ ಉತ್ಸವ-2025 ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾಳಿದಾಸ ಉತ್ಸವದಲ್ಲಿ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯದು. ಸಮಾಜದಲ್ಲಿ ನಮ್ಮ ನಮ್ಮ ಕೆಲಸವನ್ನು ನಿಷ್ಠೆಯಿಮದ ಮಾಡಬೇಕು. 12 ನೇ ಶತಮಾನದ ಬಸವಣ್ಣನವರಂತೆ ವಿವಿಧ ಸಾಧಕರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಇದಕ್ಕಾಗಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಅಭಿನಂದಿಸುತ್ತೇನೆ. ಸಮಾಜದಲ್ಲಿ ಉತ್ತಮ ಕೆಲಸ, ಮಾಡುತ್ತಿದ್ದಾರೆ. ಐತಿಹಾಸಿಕ ಕ್ಷೇತ್ರ ಬಾದಾಮಿ ಗುಹೆಗಳು ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಇತಿಹಾಸ ಇದೆ. ನೆಲದ ಜನರು ಉತ್ಸಾಹ ಇತ್ತು. ಚಾಲುಕ್ಯರು, ರಾಷ್ಟ್ರಕೂಟರು ಆಳಿದರು. ವೈಭವ ಮರುಕಳಿಸಲು ಚಾಲುಕ್ಯ ಉತ್ಸವ ಮಾಡಬೇಕು. ರಾಜಮನೆತನಗಳು ನಮ್ಮನ್ನು ಆಳಿವೆ. ಶಾಂತಿ ಸಮೃದ್ಧ ನಾಡನ್ನು ಕಟ್ಟಿದ್ದಾರೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ತೋಟಗಾರಿಕೆ ವಿವಿ ಉಪಕುಲಪತಿ ಡಾ.ವಿಷ್ಣುವರ್ಧನ, ತಹಸೀಲ್ದಾರ್ ಮಧುರಾಜ್, ಸಿಪಿಐ ಕರೆಪ್ಪ ಬನ್ನೆ, ಡಾ.ಕಿರಣಕುಮಾರ ಕುಳಗೇರಿ, ಡಾ.ಎಂ.ಜಿ.ಕಿತ್ತಲಿ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ಪುರಸಭೆ ಸದಸ್ಯರಾದ ಮಂಜುನಾಥ ಹೊಸಮನಿ, ಶಂಕರ ಕನಕಗಿರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವುಕುಮಾರ ಹಿರೇಮಠ, ರಮೇಶ ಪೂಜಾರ, ಶ್ರೀಕಾಂತಗೌಡ ಗೌಡರ, ಬಬಲು ನಾಯಕ, ಸಂಪರ್ಕಾಧಿಕಾರಿ ಶರಣಗೌಡ ಪಾಟೀಲ, ಕೆ.ರಾಘವನ್ ಸೇರಿ ಸಂಸ್ಥೆ ನಿರ್ದೇಶಕರು, ಇತರರು ಇದ್ದರು. ಇದೇ ವೇಳೆ ತಾಲೂಕಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸನ್ಮಾನಿಸಲಾಯಿತು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಯೋಗಿ ಕುಂಬಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಶಾಲಾ ಮಕ್ಕಳಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಿಗಿದವು.