ಸಾರಾಂಶ
ಉಪ್ಪುಂದ ಶಾಸಕರ ಕಚೇರಿಯಲ್ಲಿ ಬೈಂದೂರು ಉತ್ಸವ ಕುರಿತು ಪೂರ್ವಭಾವಿ ಸಭೆ ನಡೆಯಿತು. ಸಮೃದ್ಧ ಬೈಂದೂರು ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಪ್ಪುಂದ
ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವ ಹಾಗೂ ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಗುರತಿಸುವ ಮೂಲಕ ಜಾಗತಿಕ ಹೂಡಿಕೆದಾರರನ್ನು ಸೆಳೆದು ಹೆಚ್ಚೆಚ್ಚು ಉದ್ಯೋಗ ಸೃಷ್ಟಿಗೆ ಪೂರಕವಾಗುವಂತೆ ಜನರಿಗೆ ಬೈಂದೂರು ಕ್ಷೇತ್ರದ ಬಗ್ಗೆ ಹೊಸ ಚಿಂತನೆಯನ್ನು ಸೃಷ್ಟಿಸುವ ಸಲುವಾಗಿ ಬೈಂದೂರು ಉತ್ಸವ ಆಚರಿಸಲು ಚಿಂತಿಸಲಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.ಅವರು ಉಪ್ಪುಂದ ಶಾಸಕರ ಕಚೇರಿ ಕಾರ್ಯಕರ್ತದಲ್ಲಿ ಬೈಂದೂರು ಉತ್ಸವ ಕುರಿತು ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ನ.1 ರಿಂದ 3ರಂದು ಮೂರು ದಿನಗಳ ಕಾಲ ಬೃಹತ್ ಮಟ್ಟದಲ್ಲಿ ಬೈಂದೂರು ಉತ್ಸವ ಆಯೋಜಿಸಲು ಚಿಂತನೆ ನಡೆಸಿದ್ದೇವೆ. ಬೈಂದೂರಿನ ಪ್ರತಿಯೊಂದು ಗ್ರಾಮದ ವಿಶೇಷತೆ ಬಿಂಬಿಸುವ ವಿಶಿಷ್ಟ ಶೈಲಿಯ ಪುರ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಚಾಲನೆ ನೀಡುವ ಕುರಿತು ಮಾಹಿತಿ ನೀಡಿದರು.ಸಮೃದ್ಧ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ಪ್ರವಾಸೋದ್ಯಮ, ಕೈಗಾರಿಕೆ ಸೇರಿದಂತೆ ಇತರೆ ಉದ್ಯಮಗಳನ್ನು ನಡೆಸಲು ಅವಕಾಶಗಳು ಇದೆ. ಇದಕ್ಕೆ ಸೂಕ್ತ ತಳಪಾಯ ಹಾಕುವ ಅವಶ್ಯಕತೆ ಇದೆ ಎಂದರು.
ಭಾಗವಹಿಸಿದ ಪ್ರಮುಖರು ಬೈಂದೂರು ಉತ್ಸವ ವಿಶೇಷತೆಯಿಂದ ಕೂಡಿರಬೇಕು, ಜನ ಮನ್ನಣೆಗಳಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿ, ವಿವಿಧ ಸಲಹೆಗಳನ್ನು ನೀಡಿದರು.ಗಣೇಶ ಸ್ವಾಗತಿಸಿ, ನಿರ್ವಹಿಸಿದರು.