ಸಾರಾಂಶ
ಪ್ರಸ್ತುತ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಭರಾಟೆಯಲ್ಲಿ ನಮ್ಮ ಅಧ್ಯಾತ್ಮ ಪರಂಪರೆ ಮರೆಯಾಗುತ್ತಿರುವುದು ವಿಷಾದನೀಯ. ಈ ಪರಿಸ್ಥಿತಿ ನಿವಾರಿಸಲು ಮಕ್ಕಳಲ್ಲಿ ಶಿಕ್ಷಣದ ಜತೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳ ರೂಢಿಸಬೇಕಾದ ಅಗತ್ಯವಿದೆ ಎಂದು ಹರಿಹರದ ಕಂಬಳಿ ಮಠದ ಶ್ರೀ ಗಂಗಾಧರ ಸ್ವಾಮೀಜಿ ನುಡಿದಿದ್ದಾರೆ.
- ಗೋಲ್ಡನ್ ಪಬ್ಲಿಕ್ ವಿದ್ಯಾಸಂಸ್ಥೆ ವಾರ್ಷಿಕೋತ್ಸವದಲ್ಲಿ ಸ್ವಾಮೀಜಿ - - - ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಭರಾಟೆಯಲ್ಲಿ ನಮ್ಮ ಅಧ್ಯಾತ್ಮ ಪರಂಪರೆ ಮರೆಯಾಗುತ್ತಿರುವುದು ವಿಷಾದನೀಯ. ಈ ಪರಿಸ್ಥಿತಿ ನಿವಾರಿಸಲು ಮಕ್ಕಳಲ್ಲಿ ಶಿಕ್ಷಣದ ಜತೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳ ರೂಢಿಸಬೇಕಾದ ಅಗತ್ಯವಿದೆ ಎಂದು ಹರಿಹರದ ಕಂಬಳಿ ಮಠದ ಶ್ರೀ ಗಂಗಾಧರ ಸ್ವಾಮೀಜಿ ನುಡಿದರು.
ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿರುವ ಗೋಲ್ಡನ್ ಪಬ್ಲಿಕ್ ವಿದ್ಯಾಸಂಸ್ಥೆಯಿಂದ ನಡೆದ 16ನೇ ವರ್ಷದ ವಾರ್ಷಿಕೋತ್ಸವದ ಗೋಲ್ಡನ್ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎನ್.ಪುಷ್ಪಲತಾ ಮಾತನಾಡಿ, ಮಕ್ಕಳ ಶಿಕ್ಷಣದ ಜತೆಯಲ್ಲಿ ಪೋಷಕರೂ ಪ್ರೋತಾಹದೊಂದಿಗೆ ಕೈ ಜೋಡಿಸಬೇಕಾಗಿದೆ. ಮಕ್ಕಳು ಪರೀಕ್ಷೆಯ ಅಂಕಪಟ್ಟಿಗೆ ಸೀಮಿತವಾಗದೇ ತಮ್ಮ ಮುಂದಿನ ಸಾಧನೆಗೆ ಭವ್ಯ-ದಿವ್ಯ ಭವಿಷ್ಯಕ್ಕೆ ಈಗಲೇ ಭದ್ರ ಬುನಾದಿ ಹಾಕಬೇಕಾಗಿದೆ ಎಂದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿದರು. ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕೆ.ಎಂ.ಶಿವಕುಮಾರ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಶಾಲೆ ವ್ಯವಸ್ಥಾಪಕ ಕೆ.ಬಿ.ಮಂಜುನಾಥ, ಟಿ.ಮಹಾಂತೇಶ, ಜರೀಕಟ್ಟೆಯ ಎಸ್.ಬಿ.ಅಜ್ಜಪ್ಪ, ಆಡಳಿತಾಧಿಕಾರಿ ಮಾಲಾ ಮಂಜುನಾಥ, ಕೆ.ಪ್ರಿಯಾಂಕ, ಪಿ.ಸಾಕಮ್ಮ ಇತರರು ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.- - - -17ಕೆಡಿವಿಜಿ34:
ದಾವಣಗೆರೆಯ ಗೋಲ್ಡನ್ ಪಬ್ಲಿಕ್ ಸ್ಕೂಲ್‌ನ ಗೋಲ್ಡನ್ ಉತ್ಸವ ಕಾರ್ಯಕ್ರಮವನ್ನು ಶ್ರೀ ಗಂಗಾಧರ ಸ್ವಾಮೀಜಿ ಉದ್ಘಾಟಿಸಿದರು.