ಸಾರಾಂಶ
ನರಗುಂದ: ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿದ್ಯೆ ಜತೆಗೆ ಧರ್ಮದ ಸಂಸ್ಕಾರ ನೀಡಿದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಶಿರೋಳ ಜಗದ್ಗುರು ಶ್ರೀಯಚ್ಚರೇಶ್ವರಸ್ವಾಮಿಗಳ ಗವಿಮಠದ ಯಚ್ಚರ ಶ್ರೀಗಳು ಹೇಳಿದರು. ಅವರು ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ಶ್ರೀಯಚ್ಚರಸ್ವಾಮಿಗಳ ಗವಿಮಠದಲ್ಲಿ ಗುರುವಾರ ಸಂಜೆ ನಡೆದ ನಡೆದ 7ನೇ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ,ಇವತ್ತಿನ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಮಕ್ಕಳು ಬೆಳೆಯುತ್ತಿದ್ದಾರೆ. ಮಕ್ಕಳು ತಂತ್ರಜ್ಞಾನ ಸದುಪಯೋಗಪಡಿಸಿಕೊಳ್ಳುವುದಕ್ಕಿಂತ ಹೆಚ್ಚು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಮಕ್ಕಳು ವಿದ್ಯೆ ಮಾತ್ರ ಕಲಿತರೆ ಸಾಲದು ವಿದ್ಯೆ ಜತೆ ಸಂಸ್ಕಾರ ಮರೆತು ಬಿಟ್ಟಿರೆ ಪ್ರಯೋಜನವಿಲ್ಲ. ಹಾಗಾಗಿ ಪೋಷಕರು ಮಕ್ಕಳಿಗೆ ಸಾಕಷ್ಟು ಹಣ ಖರ್ಚು ಮಾಡಿ ವಿದ್ಯೆ ಕೊಡುವುದರ ಜತೆಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದರು.
ಪ್ರವಚನಕಾರ ಸ್ವರೂಪನಂದ ಮಹಾಸ್ವಾಮಿಗಳು ಮಾತನಾಡಿ, ಮಕ್ಕಳಿಗೆ ವಿದ್ಯೆಯೊಂದೇ ಮುಖ್ಯವಲ್ಲ, ಅದರ ಜತೆಗೆ ವಿನಯ,ವಿಧೆಯತೆ ಹಾಗೂ ಸಂಸ್ಕಾರ ಬಹಳಷ್ಟು ಅವಶ್ಯಕ ಎಂದರು.ಇದೇ ವೇಳೆ ಸೇವಾ ನಿವೃತ್ತಿ ಪ್ರಯುಕ್ತ ವೀರಯ್ಯ ನಾಗಲೋಟಿಮಠ, ದ್ಯಾವಪ್ಪ ಮಮಟಗೇರಿ, ಬಾಳಪ್ಪ ಚಲವಾದಿ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.85% ಅಂಕ ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ಶ್ರೀಗಳು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೊಳೆಆಲೂರಿನ ಗಣ್ಯ ಉದ್ಯಮಿಗಳಾದ ಕಮಲೇಶ ಪಟೇಲ್, ಚೆಂಬರ್ ಆಪ್ ಕಾಮರ್ಸ್ನ ಮಾಜಿ ಅಧ್ಯಕ್ಷ ಎಂ.ಎಸ್. ರಾವಳ, ಜಿಲ್ಲೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಧಾರವಾಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿಂಗಪ್ಪ ಸಿಂಗೋಟಿ, ಸೋಮನಕಟ್ಟಿ ವಿಶ್ವಕರ್ಮ ಸಮಾಜದ ಮುಖಂಡ ಶ್ರೀಕಾಂತ ವಕ್ಕುಂದ, ಬನಹಟ್ಟಿ ಪಿಡಿಓ ಮರುಳಪ್ಪ ಪೂಜಾರ, ಮದರಸಾಬ್ ಉಗರಗೋಳು, ಬಸವರಾಜ ಬಳ್ಳೊಳ್ಳಿ, ಪಾಂಡುರಂಗ ಪತ್ತಾರ, ವಿನಾಯಕ ಶಾಲದಾರ, ಎಚ್.ವಿ. ಬ್ಯಾಡಗಿ, ಸುನೀಲ ಕಳಸದ,ಗಣೇಶ ಹೊರಪೇಟ, ಶ್ರೀಕಾಂತ ದೊಡಮನಿ,ಮುತ್ತಣ್ಣ ಗುರುನಾಥನ, ರವಿ ಮದಿಹಾಳ, ಎಸ್.ವೈ.ಮುಲ್ಕಿಪಾಟೀಲ, ಎಸ್.ವಿ. ಕುಪ್ಪಸ್ತ, ಸೇರಿದಂತೆ ಮುಂತಾದವರು ಉಪಸಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))