ಹೆಣ್ಣು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕೃತಿ ವಿದ್ಯಾಲಯ ಪ್ರಾರಂಭ

| Published : Mar 20 2024, 01:24 AM IST

ಹೆಣ್ಣು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕೃತಿ ವಿದ್ಯಾಲಯ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಶಾಲಾ ಪಠ್ಯದ ಜೊತೆಗೆ ಬಸವಾದಿ ಶರಣರ ಸಂಸ್ಕೃತಿಯನ್ನು ವಿಶೇಷವಾಗಿ ಅಧ್ಯಯನವನ್ನು ಈ ಕಾಲೇಜಿನಲ್ಲಿ ಮಾಡಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೀದರ್

ಹೆಣ್ಣು ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕಾಗಿ ಅನುಭವಮಂಟಪ ಸಂಸ್ಕೃತಿ ವಿದ್ಯಾಲಯ ಪ್ರಾರಂಭಿಸಲಾಗಿದೆ ಎಂದು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಅವರು ಬಸವಕಲ್ಯಾಣ ಅನುಭವಮಂಟಪ ಸಂಚಾಲಿತ ಅನುಭವಮಂಟಪ ಸಂಸ್ಕೃತಿ ವಿದ್ಯಾಲಯದ ಕರಪತ್ರ ಬಿಡುಗಡೆ ಮಾಡಿ, ಆಶೀರ್ವಚನ ನೀಡಿದಲ್ಲದೇ ಈ ವಿದ್ಯಾಲಯದಲ್ಲಿ ಕನ್ನಡ ಮಾಧ್ಯಮದ ರಾಜ್ಯ ಸರ್ಕಾರದ ಶಾಲಾ ಪಠ್ಯದ ಜೊತೆಗೆ ಬಸವಾದಿ ಶರಣರ ಸಂಸ್ಕೃತಿಯನ್ನು ವಿಶೇಷವಾಗಿ ಅಧ್ಯಯನ ಮಾಡಿಸಲಾಗುತ್ತಿದೆ. ಇದು ನಮ್ಮ ರಾಜ್ಯದಲ್ಲಿಯೇ ಏಕೈಕ ಹೆಣ್ಣು ಮಕ್ಕಳ ಶಾಲೆಯಾಗಿದೆ ಎಂದರು.

ಈ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು 5ನೇ ತರಗತಿ ಪಾಸಾದ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ ಮಾ.23 ಬೀದರನ ಮೈಲೂರು ಕ್ರಾಸ್ ವಿದ್ಯಾನಗರ ಕಾಲೋನಿಯಲ್ಲಿರುವ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತದೆ.

ಪ್ರವೇಶ ಪರೀಕ್ಷೆಯು 5ನೇ ತರಗತಿಯ ಕನ್ನಡ, ಇಂಗ್ಲೀಷ, ಗಣಿತ, ಪರಿಸರ ಅಧ್ಯಯನ ಮುಂತಾದ ವಿಷಯ ಪಠ್ಯದ ಮೇಲೆ ಬಹು ಆಯ್ಕೆ ಮಾದರಿಯಲ್ಲಿ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಪಡೆದ 20 ವಿದ್ಯಾರ್ಥಿನಿಯರಿಗೆ 6ನೇ ಯಿಂದ 10ನೇ ತರಗತಿವರೆಗೆ ಊಟ, ವಸತಿ ಸಹಿತ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ.

ಪರೀಕ್ಷೆಗೆ ಬರುವಾಗ ಆಧಾರ ಕಾರ್ಡ್‌ ಜೆರಾಕ್ಸ ಪ್ರತಿ ಮತ್ತು ಎರಡು ಪಾಸಪೋರ್ಟ ಸೈಜ್ ಫೋಟೋ ತರಬೇಕು. ಇದರ ಸದುಪಯೋಗ ಹೆಚ್ಚಿನ ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕೆಂದು ಪೂಜ್ಯರು ಈ ಸಂದರ್ಭದಲ್ಲಿ ತಿಳಿಸಿದರು.

ಬಸವಲಿಂಗ ದೇವರು, ಸುವರ್ಣಾ ಚಿಮಕೋಡೆ, ಸಂಗ್ರಾಮಪ್ಪ ಇಂಗಳೆ, ಭಾರತಿ ಪಾಟೀಲ, ಶರಣಪ್ಪ ಚಿಮಕೋಡೆ ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.