ಮುಸ್ಲಿಮರನ್ನು ಓಲೈಸಿಕೊಳ್ಳಲು ಕಾಂಗ್ರೆಸ್‌ನಿಂದ ಕುತಂತ್ರ ರಾಜಕಾರಣ: ಮಾಜಿ ಶಾಸಕ ಸುರೇಶ್ ಗೌಡ

| Published : Jan 29 2024, 01:30 AM IST

ಮುಸ್ಲಿಮರನ್ನು ಓಲೈಸಿಕೊಳ್ಳಲು ಕಾಂಗ್ರೆಸ್‌ನಿಂದ ಕುತಂತ್ರ ರಾಜಕಾರಣ: ಮಾಜಿ ಶಾಸಕ ಸುರೇಶ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಜಾತಿವಾದಿ ಸರ್ಕಾರ, ಅಲ್ಪಸಂಖ್ಯಾತರುರನ್ನು ಓಲೈಸಿಕೊಳ್ಳಲು ಕುತಂತ್ರ ರಾಜಕಾರಣ ಮಾಡುತ್ತಿದೆ. ಗೌರವಯುತವಾಗಿ ಧ್ವಜದಲ್ಲಿ ಹನುಮ ಬಾವುಟ ಆರಿಸಬೇಕು. ಈ ಬಗ್ಗೆ ಗ್ರಾಮಸ್ಥರಲ್ಲಿ ಕ್ಷಮೆ ಕೇಳಬೇಕು. ಇಳಿಸಿರುವ ಧ್ವಜವನ್ನ ಮತ್ತೆ ಹಾರಿಸಬೇಕು. ಬೇಕಿದ್ದರೆ ಸಿಎಂ ಸಿದ್ದರಾಮಯ್ಯ ಅವರೇ ಬಂದು ಧ್ವಜ ಹಾರಿಸಲಿ. ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಸ್ಲಿಮರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಕುತಂತ್ರ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ದೂರಿದರು.

ತಾಲೂಕಿನ ಕೆರಗೋಡು ಗ್ರಾಮಕ್ಕೆ ಆಗಮಿಸಿ ಘಟನೆ ಕುರಿತು ಮಾಹಿತಿ ಪಡೆದು ಮಾತನಾಡಿದ ಅವರು, ಗ್ರಾಪಂನಿಂದ ಧ್ವಜಕ್ಕೆ ಅನುಮತಿ ಪಡೆಯಲಾಗಿದೆ. ಯಾವುದೇ ಪಕ್ಷದ ಪರ ನಡೆದಿಲ್ಲ. ರಾಮ ಭಕ್ತರು ಧ್ವಜ ಹಾರಿಸಲಾಗಿದೆ ಎಂದರು.

ಧ್ವಜವನ್ನು ಸರ್ಕಾರಿ ಕಚೇರಿ ಮುಂದೆ ಹಾಕಿದ್ದಾರಾ?. ಇದು ದೇವಸ್ಥಾನದ ಮುಂದೆ ಹನುಮ ಧ್ವಜ ಹಾರಿಸಿದ್ದಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಧಾರ್ಮಿಕ ಭಾವನೆಗಳಿಗೆ ಬಲಿ ಕೊಡಬಾರದು ಎಂದರು.

ಇದು ಜಾತಿವಾದಿ ಸರ್ಕಾರ, ಅಲ್ಪಸಂಖ್ಯಾತರುರನ್ನು ಓಲೈಸಿಕೊಳ್ಳಲು ಕುತಂತ್ರ ರಾಜಕಾರಣ ಮಾಡುತ್ತಿದೆ. ಗೌರವಯುತವಾಗಿ ಧ್ವಜದಲ್ಲಿ ಹನುಮ ಬಾವುಟ ಆರಿಸಬೇಕು. ಈ ಬಗ್ಗೆ ಗ್ರಾಮಸ್ಥರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಳಿಸಿರುವ ಧ್ವಜವನ್ನ ಮತ್ತೆ ಹಾರಿಸಬೇಕು. ಬೇಕಿದ್ದರೆ ಸಿಎಂ ಸಿದ್ದರಾಮಯ್ಯ ಅವರೇ ಬಂದು ಧ್ವಜ ಹಾರಿಸಲಿ. ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಸಿಎಂ ಕ್ಷಮೆ ಕೇಳಿಬೇಕು. ಅವರಾಗೆ ಬಂದು ಮತ್ತೆ ಅದೇ ಜಾಗದಲ್ಲಿ ಧ್ವಜ ಹಾರಿಸಲಿ ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಗೆ ಬುದ್ಧಿ ಇಲ್ಲ. ಈ ರಾಜ್ಯದಲ್ಲಿ ಸುಳ್ಳು ಹೇಳೋರು ಯಾರಾದರೂ ಇದ್ದರೆ ಅದು ಚಲುವರಾಯಸ್ವಾಮಿ. ಇದು ಪ್ಯೂರ್ ರಾಜಕೀಯ ಷಡ್ಯಂತರವಾಗಿದೆ ಎಂದು ಆರೋಪಿಸಿದರು.ಶಾಸಕರು, ಸಚಿವರ ಕುಮ್ಮಕ್ಕಿನಿಂದ ಹನುಮಧ್ವಜ ಇಳಿಸಲಾಗಿದೆ: ಡಾ.ಇಂದ್ರೇಶ್ಕೆರಗೋಡು ಗ್ರಾಮದಲ್ಲಿ ಹಾಕಲಾಗಿದ್ದ ಹನುಮ ಧ್ವಜವನ್ನು ಸ್ಥಳೀಯ ಶಾಸಕ ಪಿ.ರವಿಕುಮಾರ್ ಹಾಗೂ ಸಚಿವ ಎನ್.ಚಲುವರಾಯಸ್ವಾಮಿ ಅವರ ಕುಮ್ಮಕ್ಕಿನಿಂದ ಇಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಕಿಡಿಕಾರಿದರು.ಘಟನೆ ಕುರಿತು ಮಾತನಾಡಿದ ಅವರು, ಅಧಿಕಾರಿಗಳನ್ನು ಬಳಿಸಿಕೊಂಡು ಶಾಸಕ ರವಿಕುಮಾರ್ ಹಾಗೂ ಸಚಿವ ಚಲುವರಾಯಸ್ವಾಮಿ ಅವರು ಹನುಮ ಧ್ವಜ ಇಳಿಸಿದ್ದಾರೆ. ರಾಮಮಂದಿರ ಉದ್ಘಾಟನೆ ದಿನ ಜನರು ಹಬ್ಬದಂತೆ ಸಂಭ್ರಮಿಸಿದ್ದನ್ನು ತಡೆಯಲಾಗದೆ. ಹನುಮ ಧ್ವಜದ ವಿಚಾರವನ್ನು ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು.ಗ್ರಾಮದಲ್ಲಿ ಮತ್ತೆ ಹನುಮ ಧ್ವಜ ಹಾರಿಸಲಿದ್ದೇವೆ. ಇವತ್ತಿನಿಂದ ಈ ಕುರಿತು ಹೋರಾಟಗಳು ಆರಂಭವಾಗಲಿವೆ. ಸೋಮವಾರ ಬೆಳಗ್ಗೆ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಾವಿರಾರು ಕಾರ್ಯಕರ್ತರು ಪಾದಯಾತ್ರೆ ಹೊರಡಲಿದ್ದೇವೆ. ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ನಾಯಕ ಸಿ.ಟಿ.ರವಿ ಸೇರಿದಂತೆ ಜೆಡಿಎಸ್ ನಾಯಕರು ಆಗಮಿಸುತ್ತಿದ್ದಾರೆ ಎಂದರು.