ಜಿಲ್ಲೆಯಲ್ಲಿ ಪಟ್ಟಣ, ಗ್ರಾಮಗಳಲ್ಲಿ ಹೆಚ್ಚಿರುವ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ

| Published : Jul 23 2024, 12:37 AM IST

ಜಿಲ್ಲೆಯಲ್ಲಿ ಪಟ್ಟಣ, ಗ್ರಾಮಗಳಲ್ಲಿ ಹೆಚ್ಚಿರುವ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಜಿಲ್ಲೆಯ ಅನೇಕ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಸೂಕ್ತ ರೀತಿಯಲ್ಲಿ ಕಡಿವಾಣ ಹಾಕುವಂತೆ ಕೋರಿ ಜಿಲ್ಲಾಡಳಿತಕ್ಕೆ ವೆಲ್‌ಫೇರ್‌ ಪಾರ್ಟಿ ದಾವಣಗೆರೆ ಘಟಕ ವತಿಯಿಂದ ಮನವಿ ಸಲ್ಲಿಸಲಾಯಿತು.

- ಜಿಲ್ಲಾಡಳಿತಕ್ಕೆ ವೆಲ್‌ಫೇರ್‌ ಪಾರ್ಟಿ ಪದಾಧಿಕಾರಿಗಳ ಮನವಿ- - - ದಾವಣಗೆರೆ: ಜಿಲ್ಲೆಯ ಅನೇಕ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಸೂಕ್ತ ರೀತಿಯಲ್ಲಿ ಕಡಿವಾಣ ಹಾಕುವಂತೆ ಕೋರಿ ಜಿಲ್ಲಾಡಳಿತಕ್ಕೆ ವೆಲ್‌ಫೇರ್‌ ಪಾರ್ಟಿ ದಾವಣಗೆರೆ ಘಟಕ ವತಿಯಿಂದ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್, ಚನ್ನಗಿರಿ ತಾಲೂಕಿನ ಚನ್ನಗಿರಿ ಟೌನ್, ಕೆರೆಬಿಳಚಿ, ಹೊಸೂರು, ಸಂತೇಬೆನ್ನೂರು, ಆಲೂರು, ಚನ್ನಾಪುರ, ಜಕ್ಕಲಿ, ಕಾರಿಗನೂರು, ತ್ಯಾವಣಿಗೆ, ಬಸವಾಪಟ್ಟಣ ಸೋಮಲಾಪುರ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೀದಿನಾಯಿಗಳ ಹಾವಳಿ ದಿನೇದಿನೇ ಹೆಚ್ಚಾಗುತ್ತಿದೆ. ಇವುಗಳ ಉಪಟಳಕ್ಕೆ ಜನಸಾಮಾನ್ಯರು ಹಾಗೂ ವಾಹನ ಸವಾರರು ರೋಸಿ ಹೋಗಿದ್ದಾರೆ. ಮಕ್ಕಳು, ಮಹಿಳೆಯರು, ವಯಸ್ಸಾದವರು, ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡಲು ಭಯಪಡುವಂತಾಗಿದೆ ಎಂದು ಹೇಳಿದರು.

ರಸ್ತೆಯಲ್ಲಿ ಸಾಗುವ ಬೈಕು ಸವಾರರು ಮತ್ತು ಕಾರುಗಳ ಮೇಲೆ ನಾಯಿಗಳು ಎರಗುತ್ತವೆ. ಬೆನ್ನಟ್ಟಿಸಿಕೊಂಡು ಹೋಗುತ್ತವೆ. ಕೆರಳಿದ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಹಲವಾರು ಬೈಕ್‌ ಮತ್ತು ಸೈಕಲ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದ್ದರಿಂದ ಕೂಡಲೇ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಕೆರಬಿಳಚಿ ಯುನಿಟ್ ಕಾರ್ಯದರ್ಶಿ ಮಹಮದ್ ಅಸ್ಲಾಂ, ಪರ್ವಿಜ್ ಮತ್ತು ಸೀನಿಯರ್ ಮೆಂಬರ್ ಏಜಾಜ್ ಬೇಗ್ ಮತ್ತು ಸದಸ್ಯರು ಹಾಜರಿದ್ದರು.

- - - -22ಕೆಡಿವಿಜಿ41ಃ:

ದಾವಣಗೆರೆ ಜಿಲ್ಲೆ ವಿವಿಧ ಪಟ್ಟಣ, ಗ್ರಾಮಗಳಲ್ಲಿ ಮಿತಿಮೀರಿರುವ ಬೀದಿನಾಯಿಗಳ ಹಾವಳಿಗೆ ಕಡಿವಾಣಕ್ಕೆ ಕೋರಿ ವೆಲ್‌ಫೇರ್‌ ಪಾರ್ಟಿ ದಾವಣಗೆರೆ ಘಟಕ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.