ಸಾರಾಂಶ
ರಾಮನಗರ: ವಾಸ್ತವ ಪ್ರಪಂಚದಲ್ಲಿ ಮೌಲ್ಯಾಧಾರಿತ ಶಿಕ್ಷಣ ತುಂಬ ಅವಶ್ಯಕತೆ ಇದೆ ಎಂದು ಪದವಿಪೂರ್ವ ಶಿಕ್ಷಣ ನಿರ್ದೇಶಕಿ ನಾಗಮ್ಮ ಹೇಳಿದರು.
ನಗರದ ಹೋಲಿ ಕ್ರೆಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತಾಡಿದರು.ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣವನ್ನು ಮರೆತಂತೆ ಕಾಣುತ್ತಿದೆ. ನಮ್ಮ ಸಂಸ್ಕ್ರತಿ, ನಮ್ಮ ಭಾಷೆ, ನಮ್ಮ ಆಚಾರ ವಿಚಾರಗಳು ಸಂಪ್ರದಾಯಗಳನ್ನು ಅನುಸರಿಸಬೇಕು. ಮಕ್ಕಳಷ್ಟೇ ಜವಾಬ್ದಾರಿ ಪೋಷಕರಿಗೂ ಇರುತ್ತದೆ ಎಂದರು.
ಇದೇ ವೇಳೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ.ಕೆ.ಎಂ ಅವರು ಬರೆದಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕುಲವಾಗುವ ಸೂಕ್ಷ್ಮ ಅರ್ಥಶಾಸ್ತ್ರ ಹಾಗೂ ಸಮಗ್ರ ಅರ್ಥಶಾಸ್ತ್ರ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ, ಅರ್ಥಶಾಸ್ತ್ರ ಪುಸ್ತಕ ಬರೆಯುವುದು ತುಂಬ ಕಷ್ಟದ ಕೆಲಸ. ಡಾ.ಕೃಷ್ಣ ಅವರು ತುಂಬ ಸರಳವಾಗಿ ಅರ್ಥಬದ್ಧವಾಗಿ ಪುಸ್ತಕ ರಚಿಸಿದ್ದಾರೆ ಎಂದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಅರ್ಥಶಾಸ್ತ್ರ ಜ್ಞಾನ ಪಡೆಯಲಿ ಎಂದು ಆಶಿಸಿದರು.
ಸಂಸ್ಥಾಪಕ ಕಾರ್ಯದರ್ಶಿ ಅಲ್ತಫ್ ಅಹಮದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಅಧ್ಯಕ್ಷರಾದ ಡಾ.ಶಾಜಿಯಾ, ಪ್ರಾಂಶುಪಾಲರಾದ ಸ್ಟಾನಿಪಾಲ್ , ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಫಕ್ರುದ್ಧೀನ್, ಶ್ರೀ ಚೈತನ್ಯ ಆಕೆಡಾಮಿಯ ಶ್ರೀ ವೆಂಕಟೇಶ್ವರ್ ರಾವ್ ಇದ್ದರು.
14ಕೆಆರ್ ಎಂಎನ್ 5.ಜೆಪಿಜಿರಾಮನಗರದ ಹೋಲಿ ಕ್ರೆಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.