ಗ್ರಾಹಕರ ಖಾತೆ ದುರ್ಬಳಕೆ: ಕೆನರಾ ಬ್ಯಾಂಕ್ ಅಧಿಕಾರಿಗಳಿಂದಲೇ ಅಕ್ರಮ

| Published : Oct 11 2025, 12:02 AM IST

ಸಾರಾಂಶ

ಕೊಳ್ಳೇಗಾಲದ ವಾಸಿ ಎನ್. ಚೈತ್ರ ಎಂಬುವರೇ ಬ್ಯಾಂಕ್ ಅಧಿಕಾರಿಗಳ ಲೋಪಕ್ಕೆ ಬಲಿಯಾದ ಗ್ರಾಹಕರಾಗಿದ್ದು ಅವರು ಯಾರಿಗೂ ನಾಮಿನಿ ನೀಡದಿದ್ದರೂ ಸಹಾ ಅವರ ಖಾಸಗಿ ದಾಖಲೆಗಳಲ್ಲಿ ಸಾಲಕ್ಕೆ ನಾಮಿನಿ ನೀಡಿದಂತೆ ಅಧಿಕಾರಿಗಳು ಎಡವಟ್ಟು ಮಾಡಿದ ಪರಿಣಾಮ ತೊಂದರೆಗೊಳಗಾಗಿರುವವರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸಕ್ರಿಯವಾಗಿಲ್ಲದ ಗ್ರಾಹಕರ ಬ್ಯಾಂಕ್ ಖಾತೆಯೊಂದನ್ನು ದುರ್ಬಳಕೆ ಮಾಡಿಕೊಂಡಿರುವ ತಾಲೂಕಿನ ಪಾಳ್ಯ ಶಾಖೆಯ ಕೆನರಾ ಬ್ಯಾಂಕ್ ಅಧಿಕಾರಿಗಳು ಗ್ರಾಹಕರ ಒಪ್ಪಿಗೆ ಇಲ್ಲದೆ ಅವರ ಬ್ಯಾಂಕ್ ಖಾತೆ ಸಕ್ರಿಯವಾಗಿಸಿಕೊಂಡು ಅವರ ಗಮನಕ್ಕೆ ತಾರದೆ 2023ರಲ್ಲಿ 63 ಸಾವಿರ ಹಾಗೂ 2024ರಲ್ಲಿ ಅನ್ಯರಿಗೆ 1.17 ಲಕ್ಷ ಸಾಲ ವಿತರಿಸಿ ಬ್ಯಾಂಕ್ ಅಧಿಕಾರಿಗಳೆ ಅಕ್ರಮಕ್ಕೆ ಕುಮ್ಮಕ್ಕು ಕರ್ತವ್ಯಲೋಪ ಎಸಗಿ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.ಕೊಳ್ಳೇಗಾಲದ ವಾಸಿ ಎನ್. ಚೈತ್ರ ಎಂಬುವರೇ ಬ್ಯಾಂಕ್ ಅಧಿಕಾರಿಗಳ ಲೋಪಕ್ಕೆ ಬಲಿಯಾದ ಗ್ರಾಹಕರಾಗಿದ್ದು ಅವರು ಯಾರಿಗೂ ನಾಮಿನಿ ನೀಡದಿದ್ದರೂ ಸಹಾ ಅವರ ಖಾಸಗಿ ದಾಖಲೆಗಳಲ್ಲಿ ಸಾಲಕ್ಕೆ ನಾಮಿನಿ ನೀಡಿದಂತೆ ಅಧಿಕಾರಿಗಳು ಎಡವಟ್ಟು ಮಾಡಿದ ಪರಿಣಾಮ ತೊಂದರೆಗೊಳಗಾಗಿರುವವರು.

ಏನಿದು ಪ್ರಕರಣ: ಎನ್. ಚೈತ್ರ ಎಂಬುವರು ಕಳೆದ 2024ರಲ್ಲಿ ತಾಲೂಕಿನ ಪಾಳ್ಯ ಬ್ಯಾಂಕ್ ಶಾಖೆಯಲ್ಲಿ (3839101003380 ಸಂಖ್ಯೆಯ) ಖಾತೆದಾರರಾಗಿದ್ದು ಪಾಳ್ಯ ಶಾಖೆಯಲ್ಲಿ 6-7-2016ರಲ್ಲಿ 25 ಸಾವಿರ ಸಾಲ ಪಡೆದಿದ್ದು ಸಾಲದ ಹಣವನ್ನು ಸಹಾ ಬ್ಯಾಂಕಿಗೆ ಸಕಾಲದಲ್ಲಿ ಪಾವತಿಸಿದ್ದು , ಬಳಿಕ ಪುನಃ ಯಾವುದೇ ಸಾಲವನ್ನು ಪಡೆದಿಲ್ಲ, ಅಲ್ಲದೆ ಅವರು ಯಾರಿಗೂ ನಾಮಿನಿ ನೀಡಿರುವುದಿಲ್ಲ. ಕಳೆದ 7 ವರ್ಷಗಳ ಹಿಂದೆಯೇ ಅವರ ಖಾತೆಯನ್ನು ಕೊಳ್ಳೇಗಾಲ ಶಾಖೆಗೆ ವರ್ಗಾಯಿಸುವಂತೆ ಮನವಿ ಸಲ್ಲಿಸಿದ್ದು ಹಿನ್ನೆಲೆ ಅಂದಿನ ವ್ಯವಸ್ಥಾಪಕರು ಖಾತೆದಾರರ ಖಾತೆಯಲ್ಲಿನ ಹಣದ ಸಮೇತ ಕೊಳ್ಳೇಗಾಲ ಶಾಖೆಗೆ ಖಾತೆ ವರ್ಗಾಯಿಸುವಂತೆ ಪಾಸ್ ಬುಕ್ ಮೇಲೆ ನಮೂದಿಸಿ ಸಹಿ ಹಾಕಿರುತ್ತಾರೆ,

ಕಳೆದ 7 ವರ್ಷಗಳಲ್ಲಿ ಅವರು ತಮ್ಮ ಖಾತೆಯನ್ನೆ ಸಕ್ರಿಯವಾಗಿ ಬಳಸಿಲ್ಲ, 7 ವರ್ಷಗಳಿಂದ ಪಾಳ್ಯ ಶಾಖೆಗೂ ಗ್ರಾಹಕರು ತೆರಳಿಲ್ಲ, ಆದರೂ ಸಹಾ 17-5-2024ರಲ್ಲಿ ಬ್ಯಾಂಚ್ ಐಡಿ 3839 ಸಂಖ್ಯೆ ಬಳಸಿ ಪಾಳ್ಯ ಶಾಖೆಯ ಅಧಿಕಾರಿಗಳು ಗ್ರಾಹಕಿ ಚೈತ್ರ ಅವರಿಗೆ ಪರಿಚಯವೇ ಇಲ್ಲದ ಇಬ್ಬರು ಜಿನಕನಹಳ್ಳಿ ಮಹಿಳಾ ಪ್ರತಿನಿಧಿಗಳು (ಪಿ.ಸೌಮ್ಯ ಮತ್ತು ಟಿ. ಚೈತ್ರ ಎಂಬುವರು ಮಹಿಳಾ ಸಂಘದ ಹೆಸರಲ್ಲಿ) ಅವರ ಸಂಬಂಧಿಗಳು ಎಂದು ನಮೂದಿಸಿ 1.17 ಲಕ್ಷ ನೀಡಿದ್ದು ಈ ಸಾಲಕ್ಕೆ ನಾಮಿನಿ ಮಾಡಿ ಲೋಪ ಎಸಗಿರುವುದು ಬೆಳಕಿಗೆ ಬಂದಿದೆ.

ಅಲ್ಲದೆ ಈ ಹಿಂದೆ 2023ಯೂ ಸಹಾ ಇದೆ ರೀತಿ ಖಾತೆ ಸಕ್ರಿಯಗೊಳಿಸಿಕೊಂಡು 63 ಸಾವಿರ ಸಾಲಕ್ಕೆ ನಾಮಿನಿ ನೀಡಿದಂತೆ ಅಕ್ರಮ ಎಸಗಿರುವುದು ಸಹಾ ಸಾಕಷ್ಟು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳ ಕರ್ತವ್ಯಲೋಪದ ಕುರಿತು ಶಂಕೆ ವ್ಯಕ್ತವಾಗಿದ್ದು, ಸಕ್ರಿಯವಾಗಿಲ್ಲದ ಖಾತೆಗಳ ಮೇಲೆ ಕಣ್ಣಿಟ್ಟಿರುವ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಪಾಳ್ಯ ಶಾಖೆಯಲ್ಲಿ ಇದೆ ರೀತಿ ಇನ್ನಷ್ಟು ಗ್ರಾಹಕರ ಖಾತೆ ಬಳಕೆ ಮಾಡಿಕೊಂಡು ಅಕ್ರಮ ಎಸಗಿರುವ ಸಾಧ್ಯತೆ ಇದ್ದು ಮೇಲಾಧಿಕಾರಿಗಳು ಈಸಂಬಂಧ ಹೆಚ್ಚಿನ ನಿಟ್ಟಿನಲ್ಲಿ ಗಮನಹರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಸಾಲಕ್ಕಾಗಿ ಅಜಿ೯ ಸಲ್ಲಿಸಿದ ವೇಳೆ ಸತ್ಯಾಂಶ ಬೆಳಕಿಗೆ:ಗ್ರಾಹಕರಾದ ಚೈತ್ರ ಅವರು ಖಾಸಗಿ ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ವೇಳೆ ಅಧಿಕಾರಿಗಳ ಲೋಪ ಬೆಳಕಿಗೆ ಬಂದಿದ್ದು 2023ರಲ್ಲಿ 63 ಸಾವಿರಕ್ಕೆ ನಾಮಿನಿ ಹಾಗೂ 2024ರಲ್ಲಿ 1.17ಲಕ್ಷಕ್ಕೆ ನಾಮಿನಿ ನೀಡಿದಂತೆ ತಮ್ಮ ಕೈಚಳಕ ತೋರಿಸಿದ್ದು ಈ ಸಂಬಂಧ ಚೈತ್ರ ಅವರು ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ನಾನು ಯಾರಿಗೂ ನಾಮಿನಿ ನೀಡಿಲ್ಲ, ಆಗಿದ್ದರೂ ಖಾಸಗಿ ದಾಖಲೆ ದುರ್ಬಳಕೆ ಮಾಡಿಕೊಳ್ಳಲಾಗಿದ್ದು ಈ ಸಂಬಂಧ ನಾನು 7 ವರ್ಷಗಳಿಂದ ಖಾತೆ ಬಳಸಿಲ್ಲ, ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ದೂರು ಸಲ್ಲಿಸಿದರೂ ದೂರು ಸ್ವೀಕರಿಸಲಿಲ್ಲ, ಸ್ಪಂದಿಸದೆ ಹಿನ್ನೆಲೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಗ್ರಾಹಕರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

------ನಾ ಯಾರಿಗೂ ನಾಮಿನಿ ನೀಡಿಲ್ಲ, ಪಾಳ್ಯ ಕೆನರಾ ಬ್ಯಾಂಕ್ ಗೆ ತೆರಳಿ 7 ವರ್ಷವಾಗಿದೆ. ನನ್ನ ಖಾತೆ ಕೊಳ್ಳೇಗಾಲಕ್ಕೆ 7 ವರ್ಷಗಳ ಹಿಂದೆಯೇ ವರ್ಗ ಮಾಡಿಸಿಕೊಂಡಿರುತ್ತೇನೆ. ಆ ಖಾತೆ ಬಳಕೆ ಮಾಡುತ್ತಿಲ್ಲ, ಆಗಿದ್ದರೂ ಸಹಾ ನನ್ನ ಖಾಸಗಿ ಬಳಕೆ ಮಾಡಿಕೊಂಡು 22-5-2023ರಲ್ಲಿ 63 ಸಾವಿರ, 17-5-2024ರಲ್ಲಿ 1.17ಲಕ್ಷ ಸಾಲ ನೀಡಿ ನನ್ನನ್ನು ನಾಮಿನಿ ಮಾಡಿ ವಿನಾಕಾರಣ ನನಗೆ ತೊಂದರೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು.

- ಎನ್ ಚೈತ್ರ, ಗ್ರಾಹಕರು----10ಕೆಜಿಎಲ್1ಮತ್ತು2 ಪಾಳ್ಯ ಕೆನರಾ ಬ್ಯಾಂಕ್ ನಲ್ಲಿ ನಾಮಿನಿ ನೀಡದಿದ್ದರೂ ಅಧಿಕಾರಿಗಳ ಕತ೯ವ್ಯಲೋಪ ಖಂಡಿಸಿ ಗ್ರಾಹಕರು ನೀಡಿರುವ ದೂರು ಹಾಗೂ ಬ್ಯಾಂಕ್ ನಲ್ಲಿ ನಾಮಿನಿ ನೀಡಿರುವ ಕುರಿತ ದಾಖಲೆ.