ಸಹಕಾರ ಸಂಘದ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಮುಖ್ಯ

| Published : Sep 15 2024, 02:02 AM IST

ಸಾರಾಂಶ

ತುರ್ವಿಹಾಳದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ತುರ್ವಿಹಾಳವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಾರ್ಯಾಲಯದಲ್ಲಿ ಪಿತಾಮಹ ಸಣ್ಣರಾಮನಗೌಡ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ 2023-24ನೇ ವಾರ್ಷಿಕ ಮಹಾಸಭೆ ಹಾಗೂ ಸರ್ವ ಸದಸ್ಯರ ಸಭೆಗೆ ಅಧ್ಯಕ್ಷ ಕರಿಲಿಂಗಪ್ಪ ಹಳ್ಳಿ ಚಾಲನೆ ನೀಡಿದರು.

ಈ ವೇಳೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರೇಶ ನಾಯ್ಕರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕೃಷಿ ಸಹಕಾರ ಸಂಘವು ₹5.44 ಲಕ್ಷ ಲಾಭ ಹೊಂದಿದ್ದು, ಸಂಘ ಅಭಿವೃದ್ಧಿಯಾಗಲು ಸದಸ್ಯರ ಹಾಗೂ ಗ್ರಾಹಕರ ಸಹಕಾರ ಅಗತ್ಯ ಎಂದು ಹೇಳಿದರು.

ಪಪಂ ಅಧ್ಯಕ್ಷ ಕೆ.ಶಾಮಿದ್ ಸಾಬ್ ಜೌದ್ರಿ, ಮುಖಂಡರಾದ ಮರಿಸ್ವಾಮಿ ಹತ್ತಿಗುಡ್ಡ, ಮಲ್ಲನಗೌಡ ದೇವರಮನಿ, ಮೌಲಪ್ಪಯ್ಯ ಗುತ್ತೇದಾರ, ಉಮರಸಾಬ್, ಗೂಳಪ್ಪ ಕುಂಟೋಜಿ, ಆರ್.ಶಿವನಗೌಡ, ಬಾಪುಗೌಡ ದೇವರಮನಿ, ದೋಡ್ಡಪ್ಪ ಕಲ್ಗೂಡಿ, ತಿರುಪತೇಪ್ಪ ನಾಯಕ, ಶರಣಪ್ಪ ಕೃಷಿ ಸಹಕಾರಿ ಸಂಘದ ಉಪಾಧ್ಯಕ್ಷ ಚಾಂದ್ ಪಾಷಾ, ಸದಸ್ಯರಾದ ಮಂಟೆಪ್ಪ ಎಲೆಕೂಡ್ಗಿ, ಚಿನ್ನಪ್ಪ ಕಾರಟಗಿ, ರುದ್ರಸ್ವಾಮಿ ಕೆಂಡದಮಠ, ನಾಗರಾಜ ಶೆಟ್ಟಿ, ದೊಡ್ಡಪ್ಪ ನವಲಳ್ಳಿ, ಬಸಮ್ಮ ಗದ್ರಟಗಿ, ರೇಣುಕಮ್ಮ ಹತ್ತಿಗುಡ್ಡ, ಹುಲಿಗೆಮ್ಮ ದೇವರಮನಿ, ಲಕ್ಷ್ಮೀ ಭಂಗಿ, ಹೊಸಗೌಡ್ರು, ಶಾಮಿದ್ ಅಲಿ,ಭಿಮದಾಸ ದಾಸರ್,ಶಿವಮಣಿ,ಭಿರಪ್ಪ,ಸಹಾಕಾರಿ ಸಂಘದ ಸದಸ್ಯರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.