ಬ್ಯಾಂಕ್‌ಗಳ ಬೆಳವಣಿಗೆಗೆ ಗ್ರಾಹಕ, ಷೇರುದಾರರೇ ಕಾರಣ

| Published : Aug 25 2025, 01:00 AM IST

ಬ್ಯಾಂಕ್‌ಗಳ ಬೆಳವಣಿಗೆಗೆ ಗ್ರಾಹಕ, ಷೇರುದಾರರೇ ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆಪಾಲಕರು ಮಕ್ಕಳ ಆರೋಗ್ಯದೆಡೆಗೆ ಲಕ್ಷಕೊಟ್ಟು ಅವರ ಮುಂದಿನ ಶಿಕ್ಷಣಕ್ಕೆ ಒತ್ತುಕೊಡುವುದು ಅಗತ್ಯವಾಗಿದೆ. ಇದರಿಂದ ಮಕ್ಕಳ ಭವಿಷ್ಯ ರೂಪಗೊಳ್ಳುವುದರೊಂದಿಗೆ ಕುಟುಂಬದ ಭವಿಷ್ಯವೂ ರೂಪಗೊಳ್ಳಲಿದೆ ಎಂದು ವಿಜಯಪುರ ಕ್ಷಯರೋಗ ನಿಯತ್ರಂಣ ಘಟಕಾಧಿಕಾರಿ ಎಂ.ಬಿ.ಬಿರಾದಾರ ನುಡಿದರು

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಾಲಕರು ಮಕ್ಕಳ ಆರೋಗ್ಯದೆಡೆಗೆ ಲಕ್ಷಕೊಟ್ಟು ಅವರ ಮುಂದಿನ ಶಿಕ್ಷಣಕ್ಕೆ ಒತ್ತುಕೊಡುವುದು ಅಗತ್ಯವಾಗಿದೆ. ಇದರಿಂದ ಮಕ್ಕಳ ಭವಿಷ್ಯ ರೂಪಗೊಳ್ಳುವುದರೊಂದಿಗೆ ಕುಟುಂಬದ ಭವಿಷ್ಯವೂ ರೂಪಗೊಳ್ಳಲಿದೆ ಎಂದು ವಿಜಯಪುರ ಕ್ಷಯರೋಗ ನಿಯತ್ರಂಣ ಘಟಕಾಧಿಕಾರಿ ಎಂ.ಬಿ.ಬಿರಾದಾರ ನುಡಿದರು.

ಸ್ಥಳೀಯ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದ ೧೦ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಹೇಮರೆಡ್ಡಿ ಮಲ್ಲಮ್ಮ ಬ್ಯಾಂಕ್‌ ₹ ೬ ಲಕ್ಷದಿಂದ ಪ್ರಾರಂಭವಾಗಿ ಇದೀಗ ₹ ೨೫ ಕೋಟಿ ರೂ ಬಂಡವಾಳದೊಂದಿಗೆ ಮುನ್ನಡೆದಿದೆ. ಇದಕ್ಕೆ ಗ್ರಾಹಕರ ಹಾಗೂ ಶೇರುದಾರರ ವಿಶ್ವಾಸವೇ ಕಾರಣ. ಮಂಗಳೂರಲ್ಲಿ ಈ ಹಿಂದೆ ಅನೇಕ ಬ್ಯಾಂಕುಗಳು ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡು ಈಗ ನ್ಯಾಷನಲ್ ಲೆವೆಲ್‌ನಲ್ಲಿ ಬೆಳೆದು ನಿಂತಿವೆ. ಇದಕ್ಕೆ ಎಫ್‌.ಡಿ ಇಡುವ ಗ್ರಾಹಕರು ಷೇರುದಾರರು ಮುಂದಾಗಿರುವುದೇ ಕಾರಣ. ೧೦ವರ್ಷದಲ್ಲಿ ಉನ್ನತ ಸ್ಥಾನಕ್ಕೇರಿದ ಈ ಸಂಸ್ಥೆ ಬೆಳೆಯಲು ಹೇಮರೆಡ್ಡಿ ಮಲ್ಲಮ್ಮ ತಾಯಿಯ ಆರ್ಶೀವಾದವನ್ನು ಪಡೆದಿದೆ ಎಂದು ಹೇಳಿದರು.ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ್(ಯಾಳಗಿ) ಮಾತನಾಡಿ, ೧೦ ವರ್ಷಗಳ ಹಿಂದೆ ಹೆಮರೆಡ್ಡಿ ಮಲ್ಲಮ್ಮ ಸಹಕಾರಿ ಸಂಘದ ಸ್ಥಿತಿಯೇ ಬೇರೆಯಾಗಿತ್ತು, ಈಗ ೨೦೨೪-೨೫ನೇ ಸಾಲಿನಲ್ಲಿ ₹ ೧೫೧.೧೩ ಕೋಟಿ ವ್ಯವಹಾರವಾಗಿದ್ದು, ಲಾಭಾಂಶದಲ್ಲಿಯೂ ಪ್ರಗತಿ ಪಥದತ್ತ ಸಾಗಿದೆ. ಸಾಲ ಪಡೆದವರು ಮರು ಪಾವತಿ ಮಾಡುವ ವ್ಯವಸ್ಥೆಯಾದರೆ ಬ್ಯಾಂಕ್‌ನ ಏಳಿಗೆಗೂ ಹಾಗೂ ಸಾಲ ಪಡೆದವರ ಏಳಿಗೆಗೂ ಆಗಲಿದೆ. ಸಾಲ ಪಡೆದರೇ ಆ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬ್ಯಾಂಕ್‌ ಪ್ರಗತಿಗೆ ನೀರ್ದೇಶಕರು ಸಿಬ್ಬಂದಿ ವರ್ಗದ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಿದೆ ಎಂದರು. ಜಾಗತಿಕ ಲಿಂಗಾಯತ ಮಹಾಸಭಾಧ್ಯಕ್ಷ ಬಸವನಗೌಡ ಹರನಾಳ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ. ತಮ್ಮ ಸಂಸ್ಥೆಯಿಂದ ನೀಡಲಾಗುತ್ತಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನೂಕುಲವಾಗುವ ತಮ್ಮ ಸಂಸ್ಥೆಯ ಸೇವಾಕಾರ್ಯಗಳನ್ನು ವಿವರಿಸಿದರು.ವಡವಡಗಿ ನಂದಿಮಠದ ವೀರಸಿದ್ಧ ಮಹಾಸ್ವಾಮಿಗಳು, ಪಿಎಸ್‌ಐ ಜ್ಯೋತಿ ಕೋತ್ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ರಾಜು ಜವಳಗೇರಿ ಪ್ರಾಸ್ತಾವಿಕ ಮಾತನಾಡಿದರು. ವ್ಯವಸ್ಥಾಪಕಾರದ ಚಂದ್ರಶೇಖರ ಮಾಲಿಪಾಟೀಲ ವರದಿ ವಾಚಿಸಿದರು. ಎಸ್‌ಎಸ್ಎಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಬಿಎನ್.ಹಿಪ್ಪರಗಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಶಿವಾನಂದ ದೇಸಾಯಿ, ಎಸ್.ಎಸ್.ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಉಪಾಧ್ಯಕ್ಷ ರವಿಂದ್ರನಾಥ ಪಾಟೀಲ,ನಿರ್ದೇಶಕರಾದ ಹಣಮಗೌಡ ಗೂಗಲ, ಪ್ರಭುಗೌಡ ಮದರಕಲ್ಲ, ಶರಣಗೌಡ ಇಬ್ರಾಹಿಂ ಪೂರ್,ಚಿನ್ನಪ್ಪ ಗೌಡ ಮಾಳಿ ,ಸುಭಾಸಚಂದ್ರ ಗೂರೆಡ್ಡಿ, ಶಂಕೆಗೌಡ ಮಾಡಗಿ,ಶ್ರೀಮತಿ ಶಾಂತಾ ಕಂತಲಗಾವಿ,ಶ್ರೀಮತಿ ಡಾ.ಗಂಗಾಬಿಕಾ ಪಾಟೀಲ, ರಮೇಶ ನಾಯಕ್ ಹಾಗೂ ಸಲಹಾ ಸಮಿತಿ ಸದಸ್ಯ ಬಸವನಗೌಡ ಇಸಾಂಪೂರ ಮೊದಲಾದವರು ಉಪಸ್ಥಿತರಿದ್ದರು.

ಪ್ರಭುಗೌಡ ಮದರಕಲ್ಲ ಸ್ವಾಗತಿಸಿದರು.ಅಪ್ಪಾಸಾಹೇಬ ಮೂಲಿಮನಿ ನಿರೂಪಿಸಿದರು, ರಾಜು ಜವಳಗೇರಿ ವಂದಿಸಿದರು.