ಶಿವಸಂಗಮ ಸಹಕಾರಿ ಸಂಘ ಅಧಿಕ ವ್ಯವಹಾರ ನಡೆಸಿ, ಹೆಚ್ಚಿನ ಠೇವಣಿ ಹೊಂದುವ ಮೂಲಕ ದೊಡ್ಡ ಮೊತ್ತದ ಲಾಭವನ್ನು ಮಾಡಿ ಶೇರುದಾರರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲು ಮುಂದಾಗಿರುವದು ಹೆಮ್ಮೆಯ ಸಂಗತಿ.

ಕನ್ನಡಪ್ರಭ ವಾರ್ತೆ ಗದಗ

ಗ್ರಾಹಕರು ಸಂಸ್ಥೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹಾಗೆಯೇ ಸಂಸ್ಥೆಯು ಸಾಲಗಾರರ ಮೇಲೆ ವಿಶ್ವಾಸವಿಟ್ಟಿದ್ದು ಅವರು ಸರಿಯಾಗಿ ಸಾಲದ ಮರುಪಾವತಿ ಮಾಡಿದ್ದರ ಪರಿಣಾಮವಾಗಿ ಸಂಸ್ಥೆ ಇಂದು ಗ್ರಾಹಕರ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಸಂಸ್ಥಾಪಕ ಜಿ.ಎಂ. ಪಲ್ಲೇದ ಹೇಳಿದರು.

ನಗರದ ಲಯನ್ಸ್ ಭವನದಲ್ಲಿ ಜರುಗಿದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 12ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಸೌಹಾರ್ದ ಸಹಕಾರಿ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರಿನ ನಿರ್ದೆಶಕ ನಾಗರಾಜ ದೇಶಪಾಂಡೆ ಮಾತನಾಡಿ, ಶಿವಸಂಗಮ ಸಹಕಾರಿ ಸಂಘ ಅಧಿಕ ವ್ಯವಹಾರ ನಡೆಸಿ, ಹೆಚ್ಚಿನ ಠೇವಣಿ ಹೊಂದುವ ಮೂಲಕ ದೊಡ್ಡ ಮೊತ್ತದ ಲಾಭವನ್ನು ಮಾಡಿ ಶೇರುದಾರರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲು ಮುಂದಾಗಿರುವದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವೀರಯ್ಯ ಶಿವಕಾಳಿಮಠ ಹಾಗೂ ನಿರ್ದೆಶಕ ಎಂ.ಬಿ. ಲಿಂಗದಾಳ ಮಾತನಾಡಿದರು.

ಈ ವೇಳೆ ವೀರೇಶ ನೇಗಲಿ, ಗುರಪ್ಪ ಗಾಣಿಗೇರ, ಬಸವರಾಜ ಹಡಪದ, ಗಣಪತಸಾ ಹಬೀಬ, ಶಿವಬಸಪ್ಪ ಯಂಡಿಗೇರಿ, ಜಯದೇವ ಮೆಣಸಗಿ, ಚನ್ನಬಸಪ್ಪ ಅಂಗಡಿ, ಶಂಕ್ರಪ್ಪ ಸರ್ವಿ, ಸಿ.ಬಿ. ನಾಗಾವಿ, ಮಹಾದೇವಪ್ಪ ಕಣವಿ, ಬಾಲಾಜಿ ವಲ್ಲೂರ, ಶಿವಾನಂದ ಪಲ್ಲೇದ, ಸುವರ್ಣಾ ಮದರಿಮಠ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮೀ ಬಗಾಡೆ, ಮದನ್ ಗಂಜಿ, ಪ್ರಾಚಿ ಸಾಲೇಚಾ, ಗಂಗಮ್ಮ ನಾಯ್ಕರ್, ಶ್ರೀದೇವಿ ಹೊನ್ನಳ್ಳಿ, ಆಕಾಶ ಯಲವಿಗಿ, ವೀರೇಶ ಅಂಗಡಿ, ಷಣ್ಮುಖ ಮಲ್ಲಸಮುದ್ರ ಅವರನ್ನು ಗೌರವಿಸಲಾಯಿತು.

ಮಹೇಶ ಗಾಣಿಗೇರ, ಪಿ.ಜೆ. ದೇಸಾಯಿಮಠ, ಕಳಕಪ್ಪ ನಾಗರಾಳ, ಶಂಕ್ರಪ್ಪ ಹಳ್ಳಿಕೇರಿ, ಸುರೇಶ ಸರ್ವಿ, ಗೀತಾ ಪಲ್ಲೇದ, ಸರೋಜಾ ಲಿಂಗದಾಳ, ಶೋಭಾ ಶಿವಕಾಳಿಮಠ, ಕವಿತಾ ದೇಸಾಯಿಮಠ ಇದ್ದರು. ಆಕಾಶ ಯಲವಿಗಿ ಪ್ರಾರ್ಥಿಸಿದರು. ಮಹೇಶ ಗಾಣಿಗೇರ ಸ್ವಾಗತಿಸಿದರು. ಮಲ್ಲಿಕಾರ್ಜುನ ಬಡಿಗೇರ ಅಢಾವೆ ಪತ್ರಿಕೆ, ಲಾಭ ವಿಂಗಡಣೆ ಪತ್ರಿಕೆ ಹಾಗೂ ಅಂದಾಜು ಆಯ-ವ್ಯಯ ಪತ್ರಿಕೆ ಮಂಡಿಸಿದರು. ತಿಮ್ಮಾರೆಡ್ಡಿ ಸಂಶಿ ನಿರೂಪಿಸಿದರು. ಪ್ರಶಾಂತ ದೇಸಾಯಿಮಠ ವಂದಿಸಿದರು.