ಕಾವೇರಿ ಸಂಕಷ್ಟ: ಇಂದು ಮತ್ತೆ ಸಿಡಬ್ಲ್ಯುಆರ್‌ಸಿ ಸಭೆ
KannadaprabhaNewsNetwork | Published : Oct 11 2023, 12:45 AM IST / Updated: Oct 11 2023, 12:46 AM IST
ಕಾವೇರಿ ಸಂಕಷ್ಟ: ಇಂದು ಮತ್ತೆ ಸಿಡಬ್ಲ್ಯುಆರ್‌ಸಿ ಸಭೆ
ಸಾರಾಂಶ
ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ಬುಧವಾರ ಸಭೆ ಸೇರಲಿದೆ. ಕಳೆದ ಬಾರಿ ತಮಿಳುನಾಡಿಗೆ 15 ದಿನ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಿದ್ದ ಸಮಿತಿ ಈ ಬಾರಿ ತನ್ನ ಆದೇಶವನ್ನು ಪರಿಷ್ಕರಿಸುವ ನಿರೀಕ್ಷೆ ಇದೆ.
- ಕಳೆದ ಬಾರಿ 3 ಸಾವಿರ ಕ್ಯುಸೆಕ್ ನೀರು ಬಿಡುಗಡೆಗೆ ಆದೇಶ ಕನ್ನಡಪ್ರಭ ವಾರ್ತೆ ನವದೆಹಲಿ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ಮತ್ತೆ ಬುಧವಾರ ಸಭೆ ಸೇರಲಿದೆ. ಕಳೆದ ಬಾರಿ ತಮಿಳುನಾಡಿಗೆ 15 ದಿನ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಿದ್ದ ಸಮಿತಿ ಈ ಬಾರಿ ತನ್ನ ಆದೇಶವನ್ನು ಪರಿಷ್ಕರಿಸುವ ನಿರೀಕ್ಷೆ ಇದೆ. ಈ ಹಿಂದೆ ಸಿಡಬ್ಲ್ಯುಆರ್‌ಸಿ ಸಭೆ ಅ.12ರಂದು ನಿಗದಿಯಾಗಿತ್ತು. ಆದರೆ ನಾನಾ ಕಾರಣಗಳಿಂದ ಒಂದು ದಿನ ಮುಂಚಿತವಾಗಿಯೇ ಸಮಿತಿ ಸಭೆ ಸೇರಲಿದೆ. ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಕಾವೇರಿ ನೀರಾವರಿ ನಿಗಮದ ಎಂ.ಡಿ. ಮಹೇಶ್ ಭಾಗಿಯಾಗಲಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ಹಲವು ತಾಲೂಕುಗಳಲ್ಲಿ ಬರಘೋಷಣೆಯಾಗಿರುವುದು ಸೇರಿ ರಾಜ್ಯದಲ್ಲಿ ನೀರಿನ ಕೊರತೆ ಕುರಿತು ಅಧಿಕಾರಿಗಳು ಮತ್ತೊಮ್ಮೆ ಸಭೆಯ ಗಮನಕ್ಕೆ ತರಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂದಿನ ವಾರದಿಂದ ತಮಿಳುನಾಡಿಗೆ ವಾಯುವ್ಯ ಮಾರುತಗಳಿಂದ ಮಳೆಯಾಗಲಿದೆ. ಇದರಿಂದ ಅಲ್ಲಿನ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಆದರೆ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಮುಂದುವರಿದಿರುವುದರಿಂದ ನೀರುಬಿಡುವುದು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ವಾದ ಮಾಡುವ ನಿರೀಕ್ಷೆ ಇದೆ. ಕಳೆದ ಬಾರಿ ಸಿಡಬ್ಲ್ಯುಆರ್‌ಸಿ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿತ್ತು. ಈ ಆದೇಶವನ್ನು ನಂತರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ಎತ್ತಿ ಹಿಡಿದಿತ್ತು.