ಸಾರಾಂಶ
7ನೇ ಹೊಸಕೋಟೆಯ ಯುವಕ 31 ಜಿಲ್ಲೆಗಳಲ್ಲಿ ಸೈಕಲ್ ಮೂಲಕ ಪ್ರವಾಸ ಮಾಡಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದ್ದಾರೆ. ನೆಲ ಜಲ ಸಂರಕ್ಷಣೆಯಂತಹ ಚಟುವಟಿಕೆಗಳಲ್ಲಿ ತೊಡಗುವಂತೆ ಅರಿವು ಮೂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
7ನೇ ಹೊಸಕೋಟೆ ಯುವಕನೋರ್ವ 31 ಜಿಲ್ಲೆಗಳಲ್ಲಿ ಸೈಕಲ್ ಮೂಲಕ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಜನತೆಯಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಿದರು.ಹವಾಮಾನ ವೈಪರೀತ್ಯಗೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಇಳಿಮುಖಗೊಂಡಿದ್ದು, ರಾಜ್ಯದ ಜನತೆಯು ಕುಡಿಯುವ ನೀರಿಗೆ ಹಾಹಕಾರಗೊಂಡಿದ್ದನ್ನು ಮನಗಂಡ 7ನೇ ಹೊಸಕೋಟೆಯ ನಿವಾಸಿ ಪೈಂಟರ್ ವೃತ್ತಿಯ ಪ್ರಶಾಂತ್ ಎಂಬ ಯುವಕ ಬೈಸಿಕಲ್ ಮೂಲಕ ಸಂಚರಿಸಿ ಕರ್ನಾಟಕ ದ 31 ಜಿಲ್ಲೆಗಳಿಗೆ 26 ದಿನಗಳಲ್ಲಿ ತೆರಳಿ ಪ್ರತೀ ಜಿಲ್ಲೆಯಲ್ಲಿ ಒಂದೊಂದು ಗಿಡವನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ನೆಲ-ಜಲ ಸಂರಕ್ಷಣೆಯಂತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು.7ನೇ ಹೊಸಕೋಟೆ ಗ್ರಾಮದ ಸುರೇಶ ಹಾಗೂ ಉಷಾ ದಂಪತಿ ಪುತ್ರರಾಗಿರುತ್ತಾರೆ.