ದಾಬಸ್‍ಪೇಟೆ: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸೋಲೂರು ಬಳಿಯಿರುವ ಭಾರತ್ ಗ್ಯಾಸ್ ಅನಿಲ ಮರುಪೂರಣ ಘಟಕದಲ್ಲಿ ಅನಿಲದ ತೀವ್ರ ಅಭಾವ ಕಾಣಿಸಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಬೃಹತ್ ಘಟಕ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಜಿಲ್ಲೆಗಳಿಗೆ ನಿತ್ಯ ಲಕ್ಷಾಂತರ ಗೃಹ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ರವಾನಿಸುವ ಪ್ರಮುಖ ಕೇಂದ್ರವಾಗಿದೆ. ಆದರೆ, ಪ್ರಸ್ತುತ ಅಂತಾರಾಷ್ಟ್ರೀಯ ಯುದ್ಧದ ಹಿನ್ನೆಲೆಯಲ್ಲಿ ಅನಿಲ ಆಮದು ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆ ಮತ್ತು ಪೂರೈಕೆ ಸರಪಳಿ ಕಡಿತಗೊಂಡಿರುವುದು ಈ ಸ್ಥಿತಿಗೆ ಕಾರಣ ಎನ್ನಲಾಗಿದೆ.ಘಟಕದ ಆವರಣದಲ್ಲಿ ಮತ್ತು ರಸ್ತೆ ಬದಿಯಲ್ಲಿ ಸಿಲಿಂಡರ್ ತುಂಬಲು ಬಂದಿರುವ ನೂರಾರು ಲಾರಿಗಳು ಸಾಲುಗಟ್ಟಿ ನಿಂತಿವೆ.ಅನಿಲ ಲಭ್ಯವಿಲ್ಲದ ಕಾರಣ ಫಿಲ್ಲಿಂಗ್ ಪ್ರಕ್ರಿಯೆ ನಡೆಯುತ್ತಿಲ್ಲ, ಇದರಿಂದಾಗಿ ಸರಬರಾಜು ವಾಹನಗಳು ನಿಂತಲ್ಲೇ ನಿಲ್ಲುವಂತಾಗಿದೆ. ನಿತ್ಯ ಈ ಘಟಕದಿಂದ ಸಾವಿರಾರು ಲೋಡ್ ಸಿಲಿಂಡರ್‌ಗಳು ಮಾರುಕಟ್ಟೆಗೆ ರವಾನೆಯಾಗುತ್ತಿದ್ದವು. ಈಗ ಈ ಪ್ರಕ್ರಿಯೆ ನಿಂತಿರುವುದರಿಂದ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ.
ಪ್ರಸ್ತುತ ತುರ್ತು ಪರಿಸ್ಥಿತಿ ಹಾಗೂ ಗೃಹ ಬಳಕೆ ಸಿಲಿಂಡರ್ ಮಾತ್ರ ಮೂರು ದಿನಗಳಿಗೆ ಒಮ್ಮೆ ಪೂರೈಕೆ ಆಗುತ್ತಿದ್ದು, ಉಳಿದಂತೆ ವಿತರಣೆ ಕುಂಠಿತಗೊಂಡಿದೆ.ಕಳೆದ ಮೂರು ದಿನಗಳಿಂದ ಗ್ಯಾಸ್‍ಗಾಗಿ ಇಲ್ಲಿಯೇ ಕಾಯುತ್ತಿದ್ದೇವೆ. ಪ್ರತಿನಿತ್ಯ ಫಿಲ್ಲಿಂಗ್ ನಡೆಯುತ್ತಿತ್ತು, ಆದರೆ ಈಗ ಮೂರು ದಿನಗಳಿಗೊಮ್ಮೆ ಫಿಲ್ಲಿಂಗ್ ನಡೆಯುತ್ತಿದೆ. ನಮಗೆ ಊಟ-ತಿಂಡಿಗೂ ಪರದಾಡುವಂತಾಗಿದೆ ಎಂದು ಆಳಲು ತೋಡಿಕೊಂಡಿದ್ದಾರೆ. ಇತ್ತ ಗೃಹಿಣಿಯರು ಕೂಡ ಸಿಲಿಂಡರ್ ಬೆಲೆ ಏರಿಕೆ ಹಾಗೂ ಬುಕ್ಕಿಂಗ್ ವಿಳಂಬವಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧದ ಬಿಕ್ಕಟ್ಟು ಶಮನಗೊಂಡು ಅನಿಲ ಆಮದು ಸಹಜ ಸ್ಥಿತಿಗೆ ಬರುವವರೆಗೂ ಈ ಸಂಕಷ್ಟ ಮುಂದುವರಿಯುವ ಸಾಧ್ಯತೆಯಿದೆ.ಕೋಟ್ ............
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ನಿಗದಿತ ಸಮಯಕ್ಕೆ ಸಿಲಿಂಡರ್ ಸಿಗದೆ ಅಡುಗೆ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಮಧ್ಯಪ್ರವೇಶಿಸಿ ಪೂರೈಕೆಯನ್ನು ಸರಿಪಡಿಸಬೇಕು.
-ಗೋವಿಂದರಾಜು, ಮಾಲೀಕರು, ಗುರುಪ್ರಸನ್ನ ಹೋಟೆಲ್
ಟೋ 6 : ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಬಳಿಯಿರುವ ಪ್ರಮುಖ ಭಾರತ್ ಗ್ಯಾಸ್ ಅನಿಲ ಮರುಪೂರಣ ಘಟಕದಲ್ಲಿ ಅನಿಲ ಪೂರೈಕೆ ಸ್ಥಗಿತಗೊಂಡಿದ್ದು ಲಾರಿಗಳು ನಿಂತಿರುವುದು.