ಡಿ.ದೇವರಾಜ ಅರಸು ಮಹಾನ್ ಚೇತನರು: ಚೇತನಾ ಯಾದವ್

| Published : Aug 21 2025, 01:00 AM IST

ಡಿ.ದೇವರಾಜ ಅರಸು ಮಹಾನ್ ಚೇತನರು: ಚೇತನಾ ಯಾದವ್
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಪರಿವರ್ತನ ಹರಿಕಾರ ಮಾಜಿ ಸಿಎಂ ಡಿ.ದೇವರಾಜ ಅರಸು ಕೊಡುಗೆಗಳು ಅಪಾರವಾಗಿವೆ. ಸಮಾಜದ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರು ಬದುಕು ಕಟ್ಟಿಕೊಳ್ಳಲು ಅರಸು ಸಿಎಂ ಅವಧಿಯಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹಿಂದುಳಿದ ಸಮುದಾಯಕ್ಕೆ ಶಕ್ತಿ ನೀಡಿದ ದಿ.ಡಿ.ದೇವರಾಜ ಅರಸು ಮಹಾನ್ ಚೇತನ ಎಂದು ತಹಸೀಲ್ದಾರ್ ಚೇತನಾ ಯಾದವ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಿ.ದೇವರಾಜ ಅರಸುರವರ 110ನೇ ಜನ್ಮದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಾಮಾಜಿಕ ಪರಿವರ್ತನ ಹರಿಕಾರ ಮಾಜಿ ಸಿಎಂ ಡಿ.ದೇವರಾಜ ಅರಸು ಕೊಡುಗೆಗಳು ಅಪಾರವಾಗಿವೆ. ಸಮಾಜದ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರು ಬದುಕು ಕಟ್ಟಿಕೊಳ್ಳಲು ಅರಸು ಸಿಎಂ ಅವಧಿಯಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿದ್ದರು. ಅವರ ದೂರ ದೃಷ್ಟಿ ಫಲವೇ ಪ್ರಸ್ತುತ ಸಮಾಜದ ಸುಧಾರಣೆಗೆ ಸಹಕಾರಿಯಾಗಿದೆ ಎಂದರು.

ಈ ವೇಳೆ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುಷ್ಪ, ಬಿಸಿಎಂ ವಸತಿ ನಿಲಯದ ಪ್ರಭಾರ ನಿರ್ದೇಶಕ ಜ್ಯೋತಿ ಪ್ರಕಾಶ್, ಪುರಸಭೆ ಸದಸ್ಯ ಕೃಷ್ಣಪ್ಪ, ಬಿಜೆಪಿ ಒಬಿಸಿ ಮುಖಂಡ ಮಂಜುನಾಥ್, ಕರವೇ ಶಂಕರ್ ಚಂದಗಾಲು, ಡಿಎಸ್‌ಎಸ್‌ ಮುಖಂಡ ಕುಬೇರಪ್ಪ, ಕುಮಾರ್ ಅಲ್ಲಾ ಪಟ್ಟಣ, ಗಾಂಧಿನಗರ ಕುಮಾರ್, ಪಾರ್ಥ ಸೇರಿದಂತೆ ಮುಸ್ಲೀಂ ಒಕೂಟದ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಒಂಡಿವೀರನ್ ಅವರ 254ನೇ ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣ:

ಪಟ್ಟಣದ ಪುರಸಭೆ ಕಚೇರಿ ಬಳಿಯ ಬಂಡಿಸಿದ್ದೇಗೌಡ ವೃತ್ತದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಒಂಡಿ ವೀರನ್ ಅವರ 254ನೇ ಪುಣ್ಯ ಸ್ಮರಣೆ ಆಚರಿಸಲಾಯಿತು.

ಅಖಿಲ ಕರ್ನಾಟಕ ಆದಿ ದ್ರಾವಿಡ ಅರುಂಧತಿಯಾರ್ ಮಹಾಸಭಾ ಸಂಘಟನೆ ರಾಜ್ಯಾಧ್ಯಕ್ಷ ಆರ್.ಕೃಷ್ಣ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್ ಚಾಲನೆ ನೀಡಿದರು.

ನಂತರ ದಿನೇಶ್ ಮಾತನಾಡಿ, ಒಂಡಿ ವೀರನ್ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ದೇಶಕ್ಕಾಗಿ ಪ್ರಾಣ ಕೊಟ್ಟವರನ್ನು ಗೌರವಿಸಬೇಕು. ಅವರ ಹೋರಾಟದ ಹಾದಿಯಿಂದಲೇ ನಾವು ಇಂದು ಸುಖ ಶಾಂತಿಗಳನ್ನು ಕಾಣಬಹುದಾಗಿದೆ ಎಂದರು.

ಈ ವೇಳೆ ಪುರಸಭೆ ಸದಸ್ಯ ಗಂಜಾಂ ಶಿವು, ಅಜಿಜ್‌ ಖಾನ್, ಅನ್ಸರ್‌ಪಾಷ, ಎಂ.ಸುರೇಶ್, ಚೇತನ್ ಸೇರಿದಂತೆ ಇತರರು ಇದ್ದರು.