ದ.ಕ. ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟಕ್ಕೆ ಚಾಲನೆ

| Published : Feb 04 2024, 01:39 AM IST

ಸಾರಾಂಶ

40, 50 ಹಾಗೂ 60 ವಯೋಮಾನದವರಿಗೆ 100 ಮೀ., 400ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ ಮೊದಲಾದ ಸ್ಪರ್ಧೆಗಳು, ಪುರುಷರಿಗೆ ವಾಲಿಬಾಲ್, ಕಬಡ್ಡಿ, ಮಹಿಳೆಯರಿಗೆ ತ್ರೋಬಾಲ್ ಹಾಗೂ ವಾಲಿಬಾಲ್ ಗುಂಪು ಆಟಗಳು ನಡೆದವು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಪ್ರಯುಕ್ತ ದ.ಕ. ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಪಂದ್ಯಾಟಗಳು ಹಾಗೂ ಕ್ರೀಡಾಕೂಟ ಉಜಿರೆಯ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಶನಿವಾರ ಜರುಗಿತು.

ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದ.ಕ. ಜಿಲ್ಲೆ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಳ್ತಂಗಡಿ ವತಿಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಧ್ವಜಾರೋಹಣ ಹಾಗೂ ಉದ್ಘಾಟನೆ ನೆರವೇರಿಸಿದ ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿ, ಆರೋಗ್ಯಕ್ಕೆ ದೈಹಿಕ ಶಿಕ್ಷಣ ಪೂರಕವಾದುದು. ದೈಹಿಕ ಶಿಕ್ಷಕರು ಶಿಸ್ತು, ಸಂಯಮ ಹಾಗೂ ಆರೋಗ್ಯದ ಮಾರ್ಗದರ್ಶಕರಾಗಿರುತ್ತಾರೆ. ಇಂದಿನ ದಿನಗಳಲ್ಲಿ ದೇಹದಷ್ಟೇ ಮನಸ್ಸಿಗೂ ಆದ್ಯತೆ ನೀಡಬೇಕು, ಇದಕ್ಕೆ ಮನಸ್ಸನ್ನು ಸಂತೋಷವಾಗಿರಿಸುವಂತಹ ವ್ಯಾಯಾಮಗಳು ಪೂರಕವಾಗುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಲಿಲ್ಲಿ ಪಾಯಸ್, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ ಕಾರಂತ್ ಶುಭ ಹಾರೈಸಿದರು. ಜಿಲ್ಲಾ ಶಿಕ್ಷಣ ಅಧಿಕಾರಿ ಭುವನೇಶ್ ಜೆ., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯಾ ಬೆಳ್ತಂಗಡಿ, ರವಿಶಂಕರ್ ಮಂಗಳೂರು, ನಿತ್ಯಾನಂದ ಶೆಟ್ಟಿ, ಆಶಾ ನಾಯಕ್ ಸುಳ್ಯ, ಎಸ್.ಡಿ‌.ಎಂ. ಶಿಕ್ಷಣ ಸಂಸ್ಥೆಗಳ ಕ್ರೀಡಾ ವಿಭಾಗದ ಕಾರ್ಯದರ್ಶಿ ರಮೇಶ್, ಜಿಲ್ಲೆ ಮತ್ತು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೃಷ್ಣಾನಂದರಾವ್, ರವಿರಾಜ್ ಗೌಡ, ಜಯರಾಜ ಜೈನ್, ಅಖಿಲ್ ಕುಮಾರ್, ಪ್ರವೀಣ್ ಕುಮಾರ್, ನಿರಂಜನ್, ಆರತಿ ಮತ್ತಿತರರು ಉಪಸ್ಥಿತರಿದ್ದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

40, 50 ಹಾಗೂ 60 ವಯೋಮಾನದವರಿಗೆ 100 ಮೀ., 400ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ ಮೊದಲಾದ ಸ್ಪರ್ಧೆಗಳು, ಪುರುಷರಿಗೆ ವಾಲಿಬಾಲ್, ಕಬಡ್ಡಿ, ಮಹಿಳೆಯರಿಗೆ ತ್ರೋಬಾಲ್ ಹಾಗೂ ವಾಲಿಬಾಲ್ ಗುಂಪು ಆಟಗಳು ನಡೆದವು.