ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ದೊಡ್ಡರಸಿನಕೆರೆ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಡಿ.ಎಸ್.ಶರತ್ ಅವಿರೋಧವಾಗಿ ಆಯ್ಕೆಯಾದರು.ಈ ಹಿಂದಿನ ಅಧ್ಯಕ್ಷ ಕುರಿಕೆಂಪನದೊಡ್ಡಿ ಶಿವಲಿಂಗಯ್ಯರ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಡಿ.ಎಸ್. ಶರತ್ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಪ್ರಶಾಂತ್ ಘೋಷಣೆ ಮಾಡಿದರು. ಬಳಿಕ ನೂತನ ಅಧ್ಯಕ್ಷರನ್ನು ಪಂಚಾಯ್ತಿ ಸದಸ್ಯರು, ಗ್ರಾಮದ ಮುಖಂಡರು ಅಭಿನಂದಿಸಿದರು.
ನೂತನ ಅಧ್ಯಕ್ಷ ಡಿ.ಎಸ್.ಶರತ್ ಮಾತನಾಡಿ, ಗ್ರಾಮದ ಎಳ್ಗೆಗೆ ದಿ.ಮಂಚೇಗೌಡರು ಕಾರಣವಾಗಿದ್ದು, ಗ್ರಾಪಂ, ಸೊಸೈಟಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ಆಶೀರ್ವಾದದೊಂದಿಗೆ ನಾನು ಅಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ ಎಂದರು.ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಜೆಡಿಎಸ್ ಯುವ ಮುಖಂಡ ಡಿ.ಟಿ.ಸಂತೋಷ್ ಅವರ ಅಣತಿಯಂತೆ ಗ್ರಾಪಂಅಭಿವೃದ್ಧಿಗೆ ಶ್ರಮಿಸುವೆ. ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಪಕ್ಷಾತೀತವಾಗಿ ಕಾರ್ಯ ನಿರ್ವಾಹಿಸುತ್ತೆನೆ ಎಂದರು.
ಈ ವೇಳೆ ಗ್ರಾಪಂ ಸದಸ್ಯರಾದ ಡಿ.ಎ.ಕೆರೆ ರಘು, ಯತೀಶ್, ಸುರೇಶ, ಚಂದ್ರಶೇಖರ್, ದೇವರಹಳ್ಳಿ ರಘು, ಧನು ಮಂಚೇಗೌಡ, ದಿವ್ಯ, ಸುನಿತಾ, ಸಮೀನಾ ಬಾನು ರಘು, ಕಲಾವತಿ,ಶ್ರೀನಿವಾಸ್,ಪುಟ್ಟಸ್ವಾಮಿ, ಕೃಪಾ, ಭಾಗ್ಯ, ಶೇಖರ್, ಸೌಮ್ಯ ಸವಿತಾ, ಹರ್ಷಿತಾ, ಲತಾ, ಹೊನ್ನೇಗೌಡ, ಜ್ಯೋತಿ, ಶಿವಲಿಂಗಯ್ಯ, ಮುಖಂಡರಾದ ಕರಡಕೆರೆ ಹನುಮಂತೇಗೌಡ, ಎಂ.ಚಿಕ್ಕಹುಚ್ಚೇಗೌಡ, ಅರವಿಂದ್, ರಾಮಕೃಷ್ಣ, ಡಿ.ಸಿ. ಶಿವರಾಮ,ಕೇಬಲ್ ಆನಂದ, ಶಿವಣ್ಣ, ಶಂಕರ್, ಆನಂದ, , ಶ್ರೀಧರ್, ಜಯರಾಮು, ಚನ್ನೇಗೌಡ, ಮಹೇಶ್, ಸಂದೀಪ್, ಪುರುಷೋತ್ತಮ್, ಪ್ರದೀಪ್ ಸೇರಿದಂತೆ ಹಲವರಿದ್ದರು.ಟಿಎಪಿಸಿಎಂಎಸ್ ನೂತನ ನಿರ್ದೇಶಕ ಟಿ.ಎಸ್.ಹಾಳಯ್ಯರಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಪಾಂಡವಪುರಟಿಎಪಿಸಿಎಂಎಸ್ ನೂತನ ನಿರ್ದೇಶಕ, ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯ ಟಿ.ಎಸ್.ಹಾಳಯ್ಯ ಅವರನ್ನು ಅಭಿನಂದಿಸಲಾಯಿತು.
ಪಟ್ಟಣದ ಸಾಯಿ ಮಂದಿರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಸ್.ಜಯರಾಂ ನೇತೃತ್ವದಲ್ಲಿ ಹಾಳಯ್ಯ ಅವರಿಗೆ ಮೈಸೂರು ಪೇಟ ತೊಡಿಸಿ ಫಲ-ತಾಂಬೂಲಗಳನ್ನು ನೀಡಿ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಮಾತನಾಡಿದ ಟಿ.ಎಸ್.ಹಾಳಯ್ಯ, 32 ವರ್ಷ ಸಂಸ್ಥೆಯಲ್ಲಿ ನೌಕರನಾಗಿ ಸೇವೆ ಮಾಡಿ ಈಗ ಆಡಳಿತ ಮಂಡಳಿ ನೂತನ ನಿರ್ದೇಶಕನಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ. ನನಗೆ ಸಂಸ್ಥೆ ಬದುಕು ಕಟ್ಟಿಕೊಟ್ಟಿದೆ. ಹೀಗಾಗಿ ಅದರ ಅಭಿವೃದ್ಧಿಗೆ ಶಾಸಕರ ಮಾರ್ಗದರ್ಶನದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ನನ್ನ ಗೆಲುವಿಗೆ ಪಕ್ಷಾತೀತವಾಗಿ ಸಹಕಾರ ನೀಡಿದ ಎಲ್ಲಾ ಶೇರುದಾರರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.ಈ ವೇಳೆ ಯೋಗಗುರು ಸೋಮಶೇಖರ್, ಯೋಗ ಸಮಿತಿ ಸದಸ್ಯರಾದ ಪೊಲೀಸ್ ಜವರೇಗೌಡ, ಪುಟ್ಟಮಾದೇಗೌಡ, ಎನ್.ಮಹದೇವಪ್ಪ, ಎಚ್.ಆರ್.ಧನ್ಯಕುಮಾರ್, ಯೋಗನರಸಿಂಹೇಗೌಡ, ಎಸ್.ನಾಗೇಂದ್ರ, ಎಚ್.ಸಿ.ಧನಂಜಯ, ಸುಂಕಾತೊಣ್ಣೂರು ಶಂಕರ್ (ಅಪ್ಪಾಜಿ), ಎಂಡಿಸಿಸಿ ಬ್ಯಾಂಕ್ ಮ್ಯಾನೇಜರ್ ರಾಮಚಂದ್ರು, ಜೆ.ರಾಧ, ಯಶೋದಮ್ಮ, ಪ್ರಭಾ, ಜಿ.ನಿರ್ಮಲಾ, ಶಿವಮ್ಮ, ಲಾವಣ್ಯ, ಸವಿತಾ, ಲೀಲಾವತಿ, ರಜನಿ, ಸಿ.ಎಸ್.ನಿರ್ಮಲಾ, ಅನಿತಾ ಇತರರಿದ್ದರು.