ಸಾರಾಂಶ
ಜನರು ವೃದ್ಯಾಪ್ಯ ವೇತನ, ವಿಧವಾ ವೇತನ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ಸರ್ಕಾರಿ ಕಚೇರಿಗಳಿಗೆ, ಕೃಷಿ ಕೇಂದ್ರಗಳಿಗೆ ಭೇಟಿ ನೀಡಿದರೆ ಅಧಿಕಾರಿಗಳು ಸ್ಪಂದಿಸುವುದಿಲ್ಲ, ಕೆಲವೊಮ್ಮೆ ಅಧಿಕಾರಿಗಳು ಇರುವುದಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಖುದ್ದಾಗಿ ನನಗಾಗಲಿ, ನನ್ನ ಆಪ್ತ ಸಹಾಯಕನಿಗೆ ಕರೆ ಮಾಡಿ ತಿಳಿಸಿ, ಅಂತಹವರ ವಿರುದ್ಧ ಕ್ರಮ ವಹಿಸುತ್ತೇನೆ.
ಶಾಸಕರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
ದಾಬಸ್‍ಪೇಟೆ: ಸೋಂಪುರ ಹೋಬಳಿಯ ಬರಗೂರು ಗ್ರಾಮದಲ್ಲಿ ನಡೆದ ‘ಶಾಸಕರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಶಾಸಕ ಎನ್.ಶ್ರೀನಿವಾಸ್ ಸ್ವೀಕರಿಸಿದರು.ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಅವ್ಯವಸ್ಥೆಯಿಂದ ನಿರ್ಮಿಸಿದ ಪರಿಣಾಮ ಇಡೀ ಘಟಕವೇ ನಿಂತು ಹೋಗಿ ಯಂತ್ರೋಪಕರಣಗಳು ಕಾಣೆಯಾಗಿವೆ. ಈ ಗ್ರಾಮಕ್ಕೆ ಶುದ್ಧ ನೀರಿನ ಘಟಕ ನಿರ್ಮಿಸಿಕೊಡಿ ಎಂದು ಮಹಿಳೆಯರು ಮನವಿ ಮಾಡಿದಾಗ ಶಾಸಕರು ಸ್ಥಳೀಯಾಬಿವೃದ್ಧಿ ಯೋಜನೆಯಲ್ಲಿ ನಿರ್ಮಿಸಿಕೊಡುವ ಭರವಸೆ ನೀಡಿದರು.ಆಶ್ರಯ ಯೋಜನೆಯಡಿ ವಸತಿ, ನಿವೇಶನ ನೀಡಿ:
ಇದೇ ಸಂದರ್ಭದಲ್ಲಿ ಗ್ರಾಮದ ಬಡವರು ನಮಗೆ ಇರಲು ಮನೆಯಿಲ್ಲ, ನಿವೇಶನ ಇಲ್ಲದೆ ಗುಡಿಸಲಲ್ಲಿ ವಾಸಿಸುತ್ತಿದ್ದೇವೆ. ಈ ಹಿಂದೆ ಶಾಸಕರು ಕೂಡ ನಮಗೆ ಸ್ಪಂದಿಸಲಿಲ್ಲ. ನೀವೂ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂದಾಗ ಶಾಸಕರು ಈಗಾಗಲೇ ವಸತಿ, ನಿವೇಶನ ರಹಿತ ಫಲಾನುಭವಿಗಳ ಹೆಸರನ್ನು ಗುರುತಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಶೀಘ್ರದಲ್ಲಿಯೇ ನಿವೇಶನ, ವಸತಿ ನೀಡುತ್ತೇವೆ ಎಂದರು.ಅಧಿಕಾರಿಗಳು ಸ್ಪಂದಿಸುವುದಿಲ್ಲ:
ಜನರು ವೃದ್ಯಾಪ್ಯ ವೇತನ, ವಿಧವಾ ವೇತನ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ಸರ್ಕಾರಿ ಕಚೇರಿಗಳಿಗೆ, ಕೃಷಿ ಕೇಂದ್ರಗಳಿಗೆ ಭೇಟಿ ನೀಡಿದರೆ ಅಧಿಕಾರಿಗಳು ಸ್ಪಂದಿಸುವುದಿಲ್ಲ, ಕೆಲವೊಮ್ಮೆ ಅಧಿಕಾರಿಗಳು ಇರುವುದಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಖುದ್ದಾಗಿ ನನಗಾಗಲಿ, ನನ್ನ ಆಪ್ತ ಸಹಾಯಕನಿಗೆ ಕರೆ ಮಾಡಿ ತಿಳಿಸಿ, ಅಂತಹವರ ವಿರುದ್ಧ ಕ್ರಮ ವಹಿಸುತ್ತೇನೆ ಎಂದರು.ಬಗರ್ ಹುಕುಂ ಸದಸ್ಯ ಹಾಗೂ ವಕೀಲ ಹನುಮಂತೇಗೌಡ್ರು, ಮರಳಕುಂಟೆ ಗ್ರಾಪಂ ಅಧ್ಯಕ್ಷೆ ಶೋಭಾರಾಣಿ, ಪಿಡಿಒ ಹರೀಶ್, ಸದಸ್ಯರಾದ ಮಾರುತಿ, ಹೇಮಾಬಾಯಿ, ನಾಗಮಣಿ, ರವಿಕುಮಾರ್ ಮತ್ತಿತರರಿದ್ದರು.
ಪೋಟೋ 5 : ಸೋಂಪುರ ಹೋಬಳಿಯ ಬರಗೂರು ಗ್ರಾಮದಲ್ಲಿ ನಡೆದ ಶಾಸಕರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಶಾಸಕ ಎನ್.ಶ್ರೀನಿವಾಸ್ ಸ್ವೀಕರಿಸಿದರು.