ಸಾರಾಂಶ
ಕೃಷ್ಣಾ ನದಿಗೆ ಬಾಗಿನ ಬಿಡಲು ಹೋಗಿದ್ದ ವ್ಯಕ್ತಿಯೊಬ್ಬರು ನೀರು ಪಾಲಾದ ಘಟನೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬೆಳಗಾವಿ: ಕೃಷ್ಣಾ ನದಿಗೆ ಬಾಗಿನ ಬಿಡಲು ಹೋಗಿದ್ದ ವ್ಯಕ್ತಿಯೊಬ್ಬರು ನೀರು ಪಾಲಾದ ಘಟನೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ರೋಹನ್ ಪಾಟೀಲ್ (35) ಮೃತ ವ್ಯಕ್ತಿ. ಕೃಷ್ಣಾ ನದಿ ತುಂಬಿರುವ ಹಿನ್ನೆಲೆ ಸೋಮವಾರ ಮಧ್ಯಾಹ್ನ ಪೂಜೆ ಸಲ್ಲಿಸಿ ಬಾಗಿನ ಬಿಡಲು ನದಿಗೆ ಇಳಿದಿದ್ದು, ನದಿ ಮಧ್ಯಕ್ಕೆ ಹೋಗುತ್ತಿದ್ದಂತೆಯೇ ಪೀಡ್ಸ್ ಬಂದು ಮುಳುಗಲಾರಂಭಿಸಿದ್ದಾನೆ. ಇದನ್ನು ಕಂಡ ಸ್ಥಳದಲ್ಲಿದ್ದ ನಾಲ್ಕೈದು ಜನರು ರೋಹನ್ ಉಳಿಸಲು ಪ್ರಯತ್ನ ನಡೆಸಿದ್ದಾರೆ. ಕೆಲ ಯುವಕರು ಬೋಟ್ ತೆಗೆದುಕೊಂಡು ಹೋಗಿ ರಕ್ಷಣೆಗೆ ಯತ್ನಿಸಿದರೂ ಫಲ ಸಿಗಲಿಲ್ಲ. ರೋಹನ್ ನೀರಲ್ಲಿ ಕೊಚ್ಚಿ ಹೋಗಿದ್ದಾನೆ. 8 ದಿನಗಳ ಹಿಂದಷ್ಟೇ ರೋಹನ್‌ಗೆ ನಿಶ್ಚಿತಾರ್ಥವಾಗಿತ್ತು ಎಂದು ತಿಳಿದುಬಂದಿದೆ. ರೋಹನ್ ಬದುಕಿಸಲು ಪ್ರಯತ್ನ ನಡೆಸಿದ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.